ಚೆಟ್ಟಳ್ಳಿ, ಮೇ ೧೮: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಹಾಗೂ ರಾಜ್ಯ ಫುಟ್ಬಾಲ್ ಸಂಸ್ಥೆಯ ಸಹಯೋಗದಲ್ಲಿ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ತಾ. ೨೩ ರಿಂದ ಜೂನ್ ೧ ರವರೆಗೆ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ನಲ್ಲಿ ನೋಂದಣಿಯಾಗಿರುವ ತಂಡಗಳ ನಡುವೆ ಜಿಲ್ಲಾಮಟ್ಟದ ಲೀಗ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ತಿಳಿಸಿದ್ದಾರೆ.

ಅಮ್ಮತ್ತಿಯ ಮಿಲನ್ಸ್ ಫುಟ್ಬಾಲ್ ಕ್ಲಬ್ ಕಚೇರಿಯಲ್ಲಿ ನಡೆದ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೋಹನ್ ಅಯ್ಯಪ್ಪ, ೨೦೨೧-೨೨ರ ಜಿಲ್ಲಾಮಟ್ಟದ ಲೀಗ್ ಫುಟ್ಬಾಲ್ ಪಂದ್ಯಾವಳಿ ಯಶಸ್ವಿಗೆ ಜಿಲ್ಲೆಯ ಎಲ್ಲಾ ಫುಟ್ಬಾಲ್ ಕ್ಲಬ್‌ಗಳು ಜಿಲ್ಲಾ ಫುಟ್ಬಾಲ್ ಸಂಸ್ಥೆಯೊAದಿಗೆ ಕೈಜೋಡಿಸಬೇಕೆಂದು ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಮನವಿ ಮಾಡಿದರು. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ನಾಗೇಶ್ ಮಾತನಾಡಿ, ಈ ಬಾರಿಯ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹೊಸದಾಗಿ ೩ ತಂಡಗಳು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ಗೆ ನೋಂದಾವಣಿ ಮಾಡಿಕೊಂಡಿವೆ. ಈ ಬಾರಿ ಲೀಗ್ ಪಂದ್ಯಾವಳಿಯಲ್ಲಿ ೧೯ ತಂಡಗಳು ಪಾಲ್ಗೊಳ್ಳುತ್ತಿವೆ.

ಪಂದ್ಯಾವಳಿಯು ಕೆ.ಎಸ್. ಎಫ್.ಎ. ಹಾಗೂ ಎ.ಐ.ಎಫ್. ಎಫ್.ಎ. ನಿಯಮಾವಳಿಗಳನ್ನು ಅನುಸರಿಸಿ ನಡೆಸಲಾಗುವುದು. ಲೀಗ್ ಹಂತದ ಪಂದ್ಯಗಳು ೨೦+೨೦ ಹಾಗೂ ನಾಕೌಟ್ ಹಂತದ ಪಂದ್ಯಾಟಗಳು ೨೫+೨೫ ನಿಮಿಷಕ್ಕೆ ಸೀಮಿತವಾಗಿರು ತ್ತದೆ ಎಂದು ಮಾಹಿತಿ ನೀಡಿದರು. ತಾ. ೨೦ ರೊಳಗೆ ಎಲ್ಲಾ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಜಿಲ್ಲಾ ಫುಟ್ಬಾಲ್ ಸಂಸ್ಥೆಗೆ ತಲುಪಿಸಬೇಕು ಹಾಗೂ ತಾವು ನೀಡಿರುವ ಅರ್ಜಿಯಲ್ಲಿ ನೋಂದಣಿಯಾಗಿರುವ ಆಟಗಾರರಿಗೆ ಮಾತ್ರ ಆಡಲು ಅವಕಾಶವಿರುವುದು ಎಂದು ನಾಗೇಶ್ ತಿಳಿಸಿದರು. ೧೯ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದು, ಪ್ರತೀ ಗುಂಪಿನಿAದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳನ್ನು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಲಿದೆ ಎಂದು ವಿವರಿಸಿದರು.

ಈ ಸಂದರ್ಭ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಉಪಾಧ್ಯಕ್ಷೆ ದೇಚಮ್ಮ, ಖಜಾಂಚಿ ದೀಪು, ಸದಸ್ಯರಾದ ಲಿಜೇಶ್ ಅಮ್ಮತ್ತಿ ಇದ್ದರು.