ನಾಪೋಕ್ಲು, ಮೇ ೧೮: ವೀರಾಜಪೇಟೆ ನರಿಯಂದಡ ಕಾರ್ಯಕ್ಷೇತ್ರ ಯವಕಪಾಡಿ ಗಿರಿಜನ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾರ್ವಜನಿಕರಿಗೆ, ಸಂಘದ ಸದಸ್ಯರಿಗೆ ಇ-ಶ್ರಮ್ ಕಾರ್ಡ್, ಪಾನ್ ಕಾರ್ಡ್ ಮಾಡಿಸುವ ಬಗ್ಗೆ ಅಭಿಯಾನ ನಡೆಯಿತು.

ಅಭಿಯಾನವನ್ನು ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಕೆ.ಕೆ. ಉದ್ಘಾಟಿಸಿದರು. ಸಾಮಾನ್ಯ ಸೇವಾ ಕೇಂದ್ರಗಳ ಕಾರ್ಯಕ್ರಮಗಳ ಕುರಿತು ಯೋಜನೆಯ ಮೇಲ್ವಿಚಾರಕ ನಾಗರಾಜ್ ವಿವರಿಸಿದರು. ಅಭಿಯಾನದಲ್ಲಿ ೬೫ ಇ-ಶ್ರಮ್ ಕಾರ್ಡ್ ಹಾಗೂ ೩೦ ಪಾನ್ ಕಾರ್ಡ್ ಮಾಡಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಚಂದ್ರ, ಕಕ್ಕಬೆ ಒಕ್ಕೂಟದ ಅಧ್ಯಕ್ಷೆ ಸರೋಜಿನಿ, ಒಕ್ಕೂಟದ ಪದಾಧಿಕಾರಿಗಳು ಮುದ್ದಪ್ಪ, ರೀಟಾ ತಮ್ಮಯ್ಯ, ಸೇವಾ ಪ್ರತಿನಿಧಿಗಳಾದ ಪ್ರಭ, ಶೇಖರ್, ವಿ.ಎಲ್.ಇ. ಅಧಿಕಾರಿಗಳಾದ ವೀಣಾ, ರಮ್ಯಾ, ಸಾರ್ವಜನಿಕರು ಸಂಘದ ಸದಸ್ಯರು ಭಾಗವಹಿಸಿದ್ದರು.