ಮಡಿಕೇರಿ, ಮೇ ೧೬: ಪದವೀಧರ, ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸಂತ ಮೈಕಲರ ಶಾಲೆಯಲ್ಲಿ ಇದೇ ತಾ. ೨೧ ಮತ್ತು ೨೨ ರಂದು ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ತಿಳಿಸಿದ್ದಾರೆ.

ಅಭ್ಯರ್ಥಿಗಳು ಪರೀಕ್ಷಾ ದಿನದಂದು ಮೊಬೈಲ್, ಕ್ಯಾಲ್ಯುಕ್ಯೂ ಲೇಟರ್, ಎಲೆಕ್ಟಾçನಿಕ್ ವಾಚ್, ಮೈಕ್ರೋಫೋನ್, ಬ್ಲೂಟೂತ್, ಇತರೆ ಎಲೆಕ್ಟಾçನಿಕ್ ಉಪ ಕರಣಗಳನ್ನು ನಿಷೇಧಿಸಲಾಗಿದೆ. ಹಾಗೆಯೇ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವಂತೆ ಕೋರಿದ್ದಾರೆ.