ಮಡಿಕೇರಿ, ಮೇ ೧೫: ಕೊಡಗು ಜಿಲ್ಲೆಯಲ್ಲಿ ಮಾನವ-ವನ್ಯ ಪ್ರಾಣಿ ಸಂಘರ್ಷ ಸಾಮಾನ್ಯವಾಗಿಬಿಟ್ಟಿದೆ. ಪ್ರತಿನಿತ್ಯ ಒಂದಲ್ಲ ಒಂದು ಕಡೆಗಳಲ್ಲಿ ಕಾಡಾನೆ ಧಾಳಿ ಮಾಡುತ್ತಿರುತ್ತದೆ., ಕೃಷಿ ಫಸಲು ನಾಶವಾಗುತ್ತದೆ., ಮಾನವ ಜೀವಹಾನಿ ಕೂಡ ಆಗುತ್ತಲಿರುತ್ತದೆ., ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟವರಿಗೆ ಅರಣ್ಯ ಇಲಾಖೆ ಮೂಲಕ ಸರಕಾರದಿಂದ ಪರಿಹಾರ ನೀಡಲಾಗುತ್ತದೆ. ರೂ. ೨ ಲಕ್ಷ ಇದ್ದ ಪರಿಹಾರ ೫ ಲಕ್ಷಕ್ಕೆ ಏರಿ, ಇದೀಗ ರೂ. ೭.೫೦ ಲಕ್ಷದಷ್ಟಾಗಿದೆ. ಈ ಪರಿಹಾರ ಮೊತ್ತವನ್ನು ಕುಟುಂಬದ ಸದಸ್ಯರಿಗೆ ಕೂಡಲೇ ನೀಡಬೇಕಾಗಿದೆ. ಆದರೆ., ಇಲ್ಲೊಂದು ಪ್ರಕರಣದಲ್ಲಿ ವ್ಯಕ್ತಿ ಮೃತಪಟ್ಟು ಎರಡು ವರ್ಷ ಕಳೆದರೂ ಇನ್ನೂ ಕೂಡ ಪರಿಹಾರ ನೀಡದೆ ಸತಾಯಿಸಲಾಗುತ್ತಿದೆ. ಪರಿಹಾರಕ್ಕಾಗಿ ನತದೃಷ್ಟ ಸಂತ್ರಸ್ತ ಕುಟುಂಬ ಅರಣ್ಯ ಇಲಾಖೆ, ಜನಪ್ರತಿನಿಧಿಗಳ ಬಾಗಿಲಿಗೆ ಅಲೆದಾಡುವಂತಾಗಿದೆ..!

ಕಳೆದ ತಾ. ೨೭.೧೨.೨೦೨೦ರಂದು ನಾಪೋಕ್ಲು ಬಳಿಯ ಪೇರೂರು ಗ್ರಾಮದ ಮಂಞಟ್ ಕಾಲೋನಿ ನಿವಾಸಿ ಪಾಲೆ ಜನಾಂಗದ ಅಪ್ಪಣ್ಣ (೪೫) ಎಂಬವರು ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು. ಮರುದಿನ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ವಲಯ ಅರಣ್ಯಾಧಿಕಾರಿ ದೇವರಾಜ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿ ರೂ. ೧ ಲಕ್ಷ ತುರ್ತು ಪರಿಹಾರ ನೀಡಿದ್ದರು. ನಂತರದಲ್ಲಿ ಮತ್ತೆ ರೂ. ೧ ಲಕ್ಷದ ಚೆಕ್ ನೀಡ ಲಾಗಿತ್ತು. ತದನಂತರದ ಉಳಿದ ರೂ. ೫.೫೦ ಲಕ್ಷವನ್ನು ಇದುವರೆಗೂ ನೀಡಿಲ್ಲ.

ಘಟನೆ ವಿವರ

ತಾ.೨೭-೧೨-೨೦೨೦ರಂದು ರಾತ್ರಿ ಅಪ್ಪಣ್ಣ ನೆರೆಮನೆಯ ಕುಡಿಯರ ಸುಗುಣ ಎಂಬವರ ಮದುವೆಗೆಂದು ತೆರಳಿ ಊಟೋಪಚಾರದ ಬಳಿಕ ರಾತ್ರಿ ೧೧ ಗಂಟೆಯ ಸಮಯದಲ್ಲಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ದಾರಿ ಮಧ್ಯ ಕಾರ್ಗತ್ತಲಿನಲ್ಲಿ ಕಾಡಾನೆ ದಾಳಿ ಮಾಡಿದೆ. ಅಪ್ಪಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮರುದಿನ ಘಟನಾ ಸ್ಥಳದಲ್ಲಿದ್ದ ಗ್ರಾ.ಪಂ. ಮಾಜಿ ಸದಸ್ಯ ಮಚ್ಚುರ ರವೀಂದ್ರ ಈ ವಿಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಹಲವಾರು ಬಾರಿ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಮಕ್ಕಳು, ಕಾರ್ಮಿಕರು ನಡೆದಾಡಲು ಭಯಪಡುವಂತಾಗಿದೆ, ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಸರಕಾರದಿಂದ ಸಿಗುವ ಸೌಲಭ್ಯ ಒದಗಿಸಿಕೊಡುವಂತೆ ಒತ್ತಾಯಿಸಿದ್ದರು.

(ಮೊದಲ ಪುಟದಿಂದ)

ಮAಞಟ್ ಕಾಲೋನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ವಿದ್ಯುತ್ ಸಂಪರ್ಕ ಇಲ್ಲದ್ದರಿಂದ ಕತ್ತಲಿನಲ್ಲಿ ಜೀವ ಹಾನಿಯಾಗಿದೆ. ಹೋದ ಜೀವವನ್ನು ತಂದು ಕೊಡೋಕೆ ಆಗುತ್ತೇನ್ರಿ.? ಎಂದು ಶಾಸಕ ಕೆ.ಜಿ. ಬೋಪಯ್ಯ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಮಹಜರು-ವರದಿ

ಆನೆ ತುಳಿದು ವ್ಯಕ್ತಿ ಮೃತಪಟ್ಟಿರುವ ವಿಷಯ ತಿಳಿದಾಕ್ಷಣ ಅಂದು ನಡುರಾತ್ರಿಯಲ್ಲೇ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಟಾರ್ಚ್ ಬೆಳಕಿನ ಸಹಾಯದೊಂದಿಗೆ ಸ್ಥಳ ಮಹಜರು ಮಾಡಿದಾಗ ಮೃತದೇಹ ರಸ್ತೆಯ ಬಲಭಾಗದಲ್ಲಿ ಬಿದ್ದಿದ್ದು, ಮೃತದೇಹದ ಪಕ್ಕದಲ್ಲಿ ಆನೆಯ ಹೆಜ್ಜೆ ಗುರುತುಗಳು ಕಂಡುಬAದವು. ಮೃತದೇಹದ ಮೇಲೆ ಮಣ್ಣು ಬಿದ್ದಿರುವದು ಕಂಡು ಬಂದಿತು. ಕೂಲಂಕಷವಾಗಿ ಪರಿಶೀಲಿಸಿದಾಗ ವ್ಯಕ್ತಿಯನ್ನು ಆನೆಯೇ ಹೊಡೆದು ಅಥವಾ ತುಳಿದು ಸಾಯಿಸಿರುವದಾಗಿ ಸ್ಥಳದಲ್ಲಿದ್ದ ಪಂಚಾಯ್ತಿದಾರರು ಹಾಗೂ ಗ್ರಾಮಸ್ಥರ ಸಮಕ್ಷಮ ತೀರ್ಮಾನಿಸಲಾಯಿತು. ನಾಪೋಕ್ಲು ಪೊಲೀಸ್ ಠಾಣಾ ಸಿಬ್ಬಂದಿಗಳ ಸಮಕ್ಷಮ ಮೃತದೇಹವನ್ನು ಮಹಜರು ಮಾಡಿ ಆ್ಯಂಬ್ಯುಲೆನ್ಸ್ಗೆ ಹಾಕಿ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಯಿತು ಎಂದು ಅರಣ್ಯಾಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆಗಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್. ನವೀನ್, ವಲಯ ಅರಣ್ಯಾಧಿಕಾರಿ ಹೆಚ್.ಜಿ. ದೇವರಾಜು, ಉಪ ವಲಯ ಅರಣ್ಯಾಧಿಕಾರಿ ಎಂ.ಬಿ. ಸುರೇಶ್, ಇನ್ನಿತರರು ಹಾಗೂ ಪಂಚಾಯಿತಿದಾರರಾಗಿ ಮಚ್ಚುರ ಎಂ. ರವೀಂದ್ರ, ತೆಕ್ಕಡೆ ಸಂತೋಷ್ ಅವರುಗಳು ಸ್ಥಳದಲ್ಲಿದ್ದು, ವರದಿಗೆ ಸಹಿ ಮಾಡಿದ್ದಾರೆ.

ಪರಿಹಾರ ವಿತರಣೆ

ಘಟನೆ ನಡೆದ ಎರಡು ದಿನಗಳ ಬಳಿಕ ಅಂದರೆ, ೩೦-೧೨-೨೦೨೦ ರಂದು ಮತ್ತೆ ಅರಣ್ಯ ಇಲಾಖಾಧಿಕಾರಿಗಳು ಮೃತಪಟ್ಟ ಅಪ್ಪಣ್ಣ ಅವರ ಮನೆಗೆ ತೆರಳಿ ಅಪ್ಪಣ್ಣ ಅವರ ಪತ್ನಿ ಪಿ.ಎ. ಸರೋಜ ಅವರಿಗೆ ಕೊಡಗು ವನ್ಯಜೀವಿ ಮಾನವ ಸಂಘರ್ಷ ಉಪಶಮನ ಪ್ರತಿಷ್ಠಾನದ ವತಿಯಿಂದ ರೂ. ೧ ಲಕ್ಷ ಮೊತ್ತದ ಚೆಕ್ ಅನ್ನು ಪರಿಹಾರಾರ್ಥವಾಗಿ ನೀಡಿದ್ದಾರೆ. ಇನ್ನುಳಿದ ರೂ. ೬.೫೦ ಲಕ್ಷ ಹಣವನ್ನು ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸರೋಜಾ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವದು ಎಂದು ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ವಲಯ ಅರಣ್ಯಾಧಿಕಾರಿ ದೇವರಾಜು, ರಕ್ಷಕ ಕಾಳೇಗೌಡ ಎಸ್., ಕಾಲೋನಿಯ ವಸಂತ ಅವರುಗಳ ಸಹಿ ವರದಿಯಲ್ಲಿದೆ.

ಇನ್ನೊಂದು ಲಕ್ಷ ಪರಿಹಾರ

ಇದಾದ ಬಳಿಕ ಸರೋಜ ಅವರ ಬ್ಯಾಂಕ್ ಖಾತೆಗೆ ಎರಡನೇ ಹಂತದಲ್ಲಿ ಮತ್ತೆ ರೂ. ೧ ಲಕ್ಷ ಹಣ ಇಲಾಖಾ ಖಾತೆಯಿಂದ ಜಮೆ ಆಗಿದೆ. ಮುಂದುವರಿದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ವನ್ಯಜೀವಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರ ಪತ್ರ ಸಂಖ್ಯೆ ‘ಪ್ರಮುಅಸಂ (ವಜೀ)/ಸಿ೨/ಸಿಆರ್-೧೨/೨೦೧೮-೧೯ ದಿನಾಂಕ ೩೦.೧೨.೨೦೨೦ರಲ್ಲಿ ಸೂಚಿಸಿರುವಂತೆ ಮೃತರ ಕುಟುಂಬದ ವಂಶವೃಕ್ಷ ಪ್ರತಿ, ಪೋಸ್ಟ್ಮಾರ್ಟಂ ವರದಿ, ಮಹಜರ್ ಹಾಗೂ ಇನ್ನಿತರ ದಾಖಲಾತಿಗಳೊಂದಿಗೆ ಘಟನೆಯ ಬಗ್ಗೆ ಸಂಪೂರ್ಣ ವರದಿಯನ್ನು ಸಲ್ಲಿಸಿದ ನಂತರ ಉಳಿದ ರೂ. ೫.೫೦ ಲಕ್ಷವನ್ನು ಪಾವತಿಸಬಹುದಾಗಿ ತಿಳಿಸಿರುತ್ತಾರೆ. ಅದರಂತೆ ಸಂಬAಧಿಸಿದ ದಾಖಲಾತಿಗಳನ್ನು ಅಡಕಗೊಳಿಸಿ ಮುಂದಿನ ಕ್ರಮಕ್ಕಾಗಿ ತಾ.೧೧.೦೧.೨೦೨೧ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಉಪ ಸಂರಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ’. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ರೂ. ೫.೫೦ ಲಕ್ಷವನ್ನು ಸರೋಜ ಅವರ ಖಾತೆಗೆ ಜಮಾ ಮಾಡಲು ಮಂಜೂರಾತಿ ನೀಡಿ ಬ್ಯಾಂಕ್ ಖಾತೆ ವಿವರ ಸಹಿತ ಎಲ್ಲ ದಾಖಲೆಗಳನ್ನು ಲಗತ್ತಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತಾ. ೧೨.೦೧.೨೦೨೧ ರಂದು ವರದಿ ಸಲ್ಲಿಸಿದ್ದಾರೆ.

ಮಾಸಾಶನಕ್ಕೆ ಶಿಫಾರಸು

ಕಾಡಾನೆ ದಾಳಿಯಿಂದ ಮೃತಪಟ್ಟ ಅಪ್ಪಣ್ಣ ಅವರ ಪತ್ನಿ ಪಿ.ಎ.ಸರೋಜ ಅವರಿಗೆ ಸರಕಾರದ ಆದೇಶದ ಪ್ರಕಾರ ದಯಾತ್ಮಕ ಧನದ ಜೊತೆಗೆ ಪ್ರತಿ ತಿಂಗಳು ರೂ. ೨೦೦೦ ದಂತೆ ಐದು ವರ್ಷಗಳವರೆಗೆ ಮಾಸಾಶನ ನೀಡಲು ಅವಕಾಶವಿದ್ದು, ತಾ. ೦೧.೦೧.೨೦೨೧ ರಿಂದ ೩೧.೦೩.೨೦೨೧ ರವರೆಗೆ ಪ್ರತಿ ತಿಂಗಳು ರೂ. ೨೦೦೦ ದಂತೆ ಒಟ್ಟು ರೂ. ೬೦೦೦ ಹಣವನ್ನು ೨೦೨೦-೨೧ನೇ ಸಾಲಿಗೆ ಯೋಜನೇತರ ಲೆಕ್ಕ ಶೀರ್ಷಿಕೆ ೨೪೦೬-೧೧೦-೦-೦೧- ಪ್ರಾಕೃತಿಕ ವನ್ಯಜೀವಿ ಸಂರಕ್ಷಣೆ-೦೧೫- ಪೂರಕ ವೆಚ್ಚಗಳು ಇದರಡಿಯಲ್ಲಿ ಮಂಜೂರಾತಿ ನೀಡಿ ತಾ. ೦೨.೦೩.೨೦೨೧ ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅಧಿಕೃತ ಜ್ಞಾಪನಾ ಪತ್ರದಲ್ಲಿ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ವರದಿ

ಪ್ರಕರಣಕ್ಕೆ ಸಂಬAಧಿಸಿದAತೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳ ಮಹಜರು ಮಾಡಿ ಸ್ಥಳೀಯರ ಹಾಗೂ ಅರಣ್ಯಾಧಿಕಾರಿಗಳ ಹೇಳಿಕೆಗಳನ್ನು ಪಡೆದುಕೊಂಡು ತನಿಖಾ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಪೊಲೀಸ್ ವರದಿಯಲ್ಲಿ ಕೂಡ ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟಿರುವದಾಗಿ ನಮೂದಿಸಲಾಗಿದೆ. ಆನೆ ತುಳಿತಕ್ಕೆ ಮೃತಪಟ್ಟಿರುವದಾಗಿ ಕಂಡು ಬಂದಿದ್ದು, ಬೇರೆ ಯಾವದೇ ಸಂಶಯಗಳಿರುವದಿಲ್ಲ ಎಂದೂ ಉಲ್ಲೇಖಿಸಲಾಗಿದೆ. ಈ ಸಂಬAಧ ಸ್ಥಳೀಯರಾದ ಮಚ್ಚುರ ರವೀಂದ್ರ, ಮೂವೇರ ಕುಟ್ಟಪ್ಪ, ಮೂವೇರ ಉದಯಕುಮಾರ್ ಅವರುಗಳಿಂದ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯ ಅಧಿಕಾರಿಗಳ ಹೇಳಿಕೆಗಳನ್ನೂ ದಾಖಲಿಸಲಾಗಿದೆ.

ಪರಿಹಾರಕ್ಕೆ ತಡೆ

ಘಟನೆಗೆ ಸಂಬAಧಿಸಿದAತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನ್ಯಾಯ ವೈದ್ಯಶಾಸ್ತç ವಿಭಾಗದ ಸಹ ಪ್ರಾಧ್ಯಾಪಕ ಡಾ. ರವಿಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ‘ಆಇಂಖಿಊ IS ಆUಇ ಖಿಔ Sಊಔಅಏ ಂಓಆ ಊಂಇಒಔಖಖಊAಉಇ ಂS ಂ ಖಇSUಐಖಿ ಔಈ ಒUಐಖಿIPಐಇ IಓಎUಖIಇS SUSಖಿಂIಓಇಆ’ ಎಂದು ಉಲ್ಲೇಖಿಸಿದ್ದಾರೆ. ಈ ಕಾರಣಕ್ಕಾಗಿ ಸಂಬAಧಿಸಿದ ಅರಣ್ಯ ಇಲಾಖೆಯ ಅಧಿಕಾರಿ ಪರಿಹಾರ ಹಣ ಹಾಗೂ ಮಾಸಾಶನವನ್ನೂ ತಡೆ ಹಿಡಿದಿದ್ದಾರೆ.

ಸ್ಪಷ್ಟತೆಯಿಲ್ಲ

ವರ್ಷ ಕಳೆದರೂ ಪರಿಹಾರ ಬಾರದ್ದರಿಂದ ಸಂತ್ರಸ್ತ ಕುಟುಂಬ ಅರಣ್ಯ ಇಲಾಖೆಗೆ ತೆರಳಿ ಮಾಹಿತಿ ಬಯಸಿದಾಗ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆನೆ ತುಳಿದಿದ್ದೆಂದು ಉಲ್ಲೇಖಿಸಿಲ್ಲ, ಮದುವೆ ಮನೆಯಲ್ಲಿ ಹೊಡೆದಾಡಿ ಸತ್ತಿದ್ದಾರೆಂದು ದೂರು ಬಂದಿದೆ. ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ವಿಚಾರಿಸುವಂತೆ ಸಬೂಬು ನೀಡಿ ಸಾಗ ಹಾಕಲಾಗುತ್ತಿದೆ. ಠಾಣೆಯಲ್ಲಿ ವಿಚಾರಿಸಿದರೆ ನಮ್ಮಿಂದ ಎಲ್ಲ ವರದಿಯನ್ನು ಸಲ್ಲಿಸಲಾಗಿದೆ. ಆನೆ ತುಳಿದಿದ್ದು ಎಂದಿಲ್ಲದಿದ್ದರೂ ಪ್ರಾಣಿಯಿಂದಾಗಿರಬಹುದೆAದು ಇದೆ; ಮಾನವೀಯತೆ ಆಧಾರದಲ್ಲಿ ಪರಿಹಾರ ನೀಡುವಂತೆ ಕೋರಲಾಗಿದೆ. ಅರಣ್ಯ ಇಲಾಖೆಯವರೇ ಪರಿಹಾರ ನೀಡಬೇಕೆಂದು ಹೇಳುತ್ತಾರೆ.

ಒಟ್ಟಿನಲ್ಲಿ ಇಷ್ಟೆಲ್ಲ ಸಾಕ್ಷಿ, ಆಧಾರ, ದಾಖಲೆಗಳಿದ್ದರೂ ಬಡ, ಸಂತ್ರಸ್ತ ಕುಟುಂಬವನ್ನು ಎರಡು ವರ್ಷಗಳಿಂದ ಯಾವದೇ ಸ್ಪಷ್ಟ ಮಾಹಿತಿ ನೀಡದೆ ಸತಾಯಿಸಲು ಸ್ಪಷ್ಟ ಕಾರಣ ಕೂಡ ಅರಣ್ಯ ಇಲಾಖೆಯಲ್ಲಿ ಇಲ್ಲ. ‘ಹಾಗಂತೆ., ಹೀಗಂತೆ.,’ ಎಂದು ‘ಕಾಗಕ್ಕ., ಗೂಬಕ್ಕ..,’ ಕತೆ ಹೇಳುತ್ತಿರುವ ಇಲಾಖೆ ವಿರುದ್ಧ ಸಂತ್ರಸ್ತ ಕುಟುಂಬಸ್ಥರು ಇದೀಗ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧಾರ ಕೈಗೊಂಡಿದ್ದಾರೆ..! ?ಕುಡೆಕಲ್ ಸಂತೋಷ್