ಮಡಿಕೇರಿ, ಮೇ ೧೭ : ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾ ಸಂಸ್ಥೆಯಲ್ಲಿ ಸಂಘ ಪರಿವಾರ ಶೌರ್ಯ ಪ್ರಶಿಕ್ಷಣ ವರ್ಗ ಹೆಸರಿನಲ್ಲಿ ಶಸ್ತಾçಸ್ತç ತರಬೇತಿ ನೀಡಿರುವದನ್ನು ಖಂಡಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಈ ಸಂಬAಧ ಮೊಕದ್ದಮೆ ದಾಖಲಿಸಿ ಪ್ರಕರಣವನ್ನು ರಾಷ್ಟಿçÃಯ ತನಿಖಾ ದಳಕ್ಕೆ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಕಲೀಲ್; ಪೊನ್ನಂಪೇಟೆಯಲ್ಲಿ ಬಂದೂಕು ಹಾಗೂ ತ್ರಿಶೂಲ ತರಬೇತಿ ನೀಡಲಾಗಿದ್ದು, ಇದು ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸುತ್ತಿರುವದಲ್ಲದೆ, ಕೋಮು ಭಾವನೆ ಸೃಷ್ಟಿಸುವ ಕಾರ್ಯವಾಗಿದೆ. ಸೂಕ್ಷö್ಮವಾಗಿರುವ ಜಿಲ್ಲೆಯಲ್ಲಿ ಇಂತಹ ವಿಚಾರಗಳು ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಶಿಬಿರದಲ್ಲಿ ಭಾಗಿಯಾಗಿರುವವರ ಮೇಲೆ ಮೊಕದ್ದಮೆ ದಾಖಲಿಸಿ ಎನ್‌ಐಎ ತನಿಖೆಗೆ ಒಳಪಡಿಸಬೇಕು. ಶಾಸಕರುಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ ಅವರುಗಳು ಕೂಡ ಭಾಗಿಯಾಗಿದ್ದು, ಅವರುಗಳ ವಿರುದ್ಧವೂ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರಲ್ಲದೆ, ಪ್ರಕರಣವನ್ನು ಪಕ್ಷ ಖಂಡಿಸುವದಾಗಿ ಹೇಳಿದರು. ಸಾಮರಸ್ಯ ಹಾಳಾಗಬಾರದು, ಹಾಳಾದರೆ ಜೀವನ ಸಾಗಿಸಲು ಕಷ್ಟ, ಯಾರೇ ಇಂತಹ ಕಾರ್ಯ ಮಾಡಿದರೂ ವಿರೋಧಿಸುವದಾಗಿ ಹೇಳಿದರು.

ಪಕ್ಷದ ಮಡಿಕೇರಿ ಕ್ಷೇತ್ರದ ಅಧ್ಯಕ್ಷ ಉಸ್ಮಾನ್ ಸುಂಟಿಕೊಪ್ಪ ಮಾತನಾಡಿ; ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ಕಂಡುಬರುತ್ತಿವೆ. ವಿದ್ಯಾಭ್ಯಾಸ ನೀಡಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದ ವಿದ್ಯಾಸಂಸ್ಥೆಯಲ್ಲಿ ಬಂದೂಕು ನೀಡಿ ಶಸ್ತಾçಸ್ತç ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯ ಅಧ್ಯಕ್ಷ ಝರು ಗಣಪತಿ ಅವರು, ಕಳೆದ ಹತ್ತು ವರ್ಷಗಳಿಂದ ಈ ರೀತಿಯ ತರಬೇತಿ ನೀಡಲಾಗುತ್ತಿದೆ. ಇದರಿಂದಾಗಿ ಕೆಲವು ವರ್ಷಗಳ ಹಿಂದೆ ಗೌರಿ ಲಂಕೇಶ್ ಹತ್ಯೆಯಾದಾಗ ಆರೋಪಿಗಳಿಗೆ ಕೊಡಗು ಜಿಲ್ಲೆಯಲ್ಲಿ ಬಂದೂಕು ತರಬೇತಿ ನೀಡಿರುವದಾಗಿ ತಿಳಿದುಬಂದಿದೆ. ಶಾಹುಲ್ ಹಮೀದ್ ಹತ್ಯೆಯಲ್ಲೂ ಸಂಘ ಪರಿವಾರದ ಕಾರ್ಯಕರ್ತರು ಭಾಗಿಯಾಗಿದ್ದರು. ಇತ್ತೀಚೆಗೆ ಸಾಹಿತಿಯೋರ್ವರಿಗೆ ಕೊಲೆ ಬೆದರಿಕೆ ಪತ್ರ ಕಳುಹಿಸಲಾಗಿದೆ. ಇದೆಲ್ಲ ನೋಡುವಾಗ ಕೊಡಗು ಭಯೋತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಂತಿದೆ ಎಂದರು.

ಜಿಲ್ಲಾ ಸಮಿತಿ ಸದಸ್ಯ ಅಹಮ್ಮದ್ ಕಬೀರ್ ಮಾತನಾಡಿ; ಸಾಯಿಶಂಕರ ಶಾಲೆಯಲ್ಲಿ ಭಜರಂಗ ದಳದವರು ನೀಡಿರುವ ಶಸ್ತಾçಸ್ತç ತರಬೇತಿ ಶಿಬಿರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ, ಘಟನೆ ನಡೆದು ೧೨ ದಿನಗಳಾದರೂ ಇನ್ನೂ ಕೂಡ ಮೊಕದ್ದಮೆ ದಾಖಲಿಸಿಲ್ಲ. ಕೂಡಲೇ ಮೊಕದ್ದಮೆ ದಾಖಲಿಸಿ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಈ ನಿಟ್ಟಿನಲ್ಲಿ ಕ್ರಮಕ್ಕೆ ಆಗ್ರಹಿಸಿ ತಾ.೨೦ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ಹೇಳಿದರು. ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಹನೀಫ್ ಕೊಂಡAಗೇರಿ ಮಾತನಾಡಿ, ನಮ್ಮದು ಪ್ರಜಾಪ್ರಭುತ್ವ ರಾಷ್ಟçವಾಗಿದ್ದು, ಇಲ್ಲಿ ಹಿಂದೂ ಸಮಾಜವೆಂದುಕೊAಡು ಜಾಗೃತಿ ಸಮಾವೇಶ ನಡೆಸಲಾಗುತ್ತಿದ್ದು, ಇದು ದೇಶದ್ರೋಹದ ಕೃತ್ಯವಾಗಿದೆ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಮ್ಮದ್ ಶಫಿ, ಎಸ್‌ಡಿಟಿಯು ಜಿಲ್ಲಾ ಅಧ್ಯಕ್ಷ ಶರೀಫ್ ಇದ್ದರು.