ಗೋಣಿಕೊಪ್ಪ ವರದಿ, ಮೇ ೧೭: ಬೆಂಗಳೂರು ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆೆ ವತಿಯಿಂದ ನಡೆಯುತ್ತಿರುವ ಮಿನಿ ಒಲಂಪಿಕ್ ಹಾಕಿ ಕ್ರೀಡೆಯ ೧೪ ವರ್ಷದೊಳಗಿನ ವಿಭಾಗದ ಹಾಕಿಕೂರ್ಗ್ ಬಾಲಕ ಮತ್ತು ಬಾಲಕಿಯರ ತಂಡಗಳು ಮತ್ತೆ ಎರಡು ಗೆಲುವಿನೊಂದಿಗೆ ಜಯದ ನಾಗಾಲೋಟ ಮುಂದುವರಿಸಿದೆ. ಮಂಗಳವಾರ ಬಾಲಕರು ಬೆಳಗಾವಿ ವಿರುದ್ಧ, ಬಾಲಕಿಯರು ಬಳ್ಳಾರಿ ವಿರುದ್ಧ ಗೆದ್ದು ಸಂಚಲನ ಮೂಡಿಸಿದರು.
ಬೆಳಗಾವಿ ವಿರುದ್ಧ ಬಾಲಕರು ೬-೧ ಗೋಲುಗಳಿಂದ ಜಯ ಸಾಧನೆ ಮಾಡಿತು. ಸೋಹನ್ ಕಾರ್ಯಪ್ಪ ೨ ಗೋಲು ಹೊಡೆದು ಮಿಂಚಿದರು. ಪವನ್ ಪೊನ್ನಣ್ಣ, ಆಯುಷ್, ನಿಶಾಂತ್, ಬಿನ್ ಬೋಪಣ್ಣ ತಲಾ ಒಂದೊAದು ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು.
ಬಾಲಕಿಯರು ಬಳ್ಳಾರಿ ತಂಡವನ್ನು ೧೧-೨ ಗೋಲುಗಳಿಂದ ಮಣಿಸಿತು. ಪರ್ಲ್ ಪೊನ್ನಮ್ಮ ಹಾಗೂ ಪ್ರಿನ್ಸಿಯ ತಲಾ ೪ ಗೋಲು ಹೊಡೆದು ಸಂಚಲನ ಮೂಡಿಸಿದರು. ದೇಚಕ್ಕ, ಮನಸ್ವಿ, ತಾನ್ಯ ತಲಾ ಒಂದೊAದು ಗೋಲು ಬಾರಿಸಿದರು. ತರಬೇತುದಾರ ವಿನೋದ್‌ಕುಮಾರ್, ಎಚ್. ಎ. ಅರುಣ್, ವ್ಯವಸ್ಥಾಪಕಿ ಕಾವೇರಮ್ಮ ತಂಡದಲ್ಲಿದ್ದಾರೆ.