ಕುಶಾಲನಗರ, ಮೇ ೧೭: ಚೆನೈ-ಬೆಂಗಳೂರು ಕಡೆಗಳಲ್ಲಿ ಕೇಂದ್ರ ಮಾಜಿ ಸಚಿವ ಪಿ ಚಿದಂಬರA ಅವರ ಕಚೇರಿಗಳಿಗೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಸುದ್ದಿ ಹೊರಬೀಳುತ್ತಲೇ, ಕೊಡಗು ಜಿಲ್ಲೆಯಲ್ಲಿ ಅಧಿಕಾರಿಗಳ ತಂಡ ಬೀಡುಬಿಟ್ಟ ಬಗ್ಗೆ ಮಂಗಳವಾರ ಮುಂಜಾನೆಯಿAದಲೇ ವದಂತಿಗಳು ಸುದ್ದಿಗಳು ಕೇಳಿಬಂದಿವೆ.

ಜಿಲ್ಲೆಯ ಪಾಲಿಬೆಟ್ಟ ಮತ್ತಿತರ ವ್ಯಾಪ್ತಿಯಲ್ಲಿ ಚಿದಂಬರA ಕುಟುಂಬಕ್ಕೆ ಸೇರಿದ ಆಸ್ತಿಗಳು ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಐಟಿ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕುತ್ತಿದೆ ಎನ್ನಲಾಗುತ್ತಿದೆ.

ದಾಳಿಗೆ ಪೂರಕ ಎಂಬAತೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಐದಕ್ಕೂ ಅಧಿಕ ಇನ್ನೋವಾ ಕಾರುಗಳ ಓಡಾಟ ದಾಳಿಗೆ ಪುಷ್ಟೀಕರಣ ನೀಡಿದಂತಿತ್ತು. ಆದರೆ ದಾಳಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಮಾತ್ರ ಹೊರ ಬಿದ್ದಿಲ್ಲ.

-ಸಿಂಚು