ಕಡಂಗ, ಮೇ ೧೭: ಕಡಂಗ ಗ್ರಾಮದ ಮುಖ್ಯ ರಸ್ತೆಯಲ್ಲಿ ಬಿದ್ದು ಸಿಕ್ಕಿದ ೨೦ ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡವರಿಗೆ ಹಿಂದುರುಗಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಅದೇ ಗ್ರಾಮದ ಮಹಿಳೆಯೋರ್ವರು ಬ್ಯಾಂಕಿನಿAದ ಹಣ ಡ್ರಾ ಮಾಡಿಕೊಂಡ ಸಂದರ್ಭದಲ್ಲಿ ಹಣ ಬಿದ್ದು ಹೋಗಿದೆ. ಇದು ಆಟೋ ಚಾಲಕ ಅಬ್ದುಲ್ ರಜಾಕ್ ಅವರಿಗೆ ದೊರೆತಿದೆ. ದೊರೆತ ಹಣವನ್ನು ತನ್ನ ಬಳಿ ಇರಿಸಿಕೊಂಡು ಸಂಬAಧಿಸಿದವರು ಬರಬಹುದು ಎಂದು ಕಾದಿದ್ದಾರೆ. ನಂತರ ಮಹಿಳೆ ವಿಚಾರಣೆ ನಡೆಸುತ್ತಿರುವ ಸಂದರ್ಭ ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ತೋರಿದ್ದಾರೆ.