ಮಡಿಕೇರಿ, ಮೇ ೧೭: ಹಾಕಿ ಇಂಡಿಯಾ ವತಿಯಿಂದ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಮಹಿಳಾ ಹಾಕಿ ಚಾಂಪಿಯನ್ ಶಿಪ್ ನಲ್ಲಿ ಹಾಕಿ ಕರ್ನಾಟಕ ಫೈನಲ್‌ನಲ್ಲಿ ನಿರಾಸೆ ಅನುಭವಿಸಿತು.
ಅಂತಿಮ ಪಂದ್ಯದಲ್ಲಿ ಹಾಕಿ ಕರ್ನಾಟಕ ಬಲಿಷ್ಠ ಒಡಿಸ್ಸಾ ಎದುರು ೨-೦ ಗೋಲುಗಳಿಂದ ಪರಭಾವ ಗೊಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
೧೨ ವರ್ಷಗಳ ಬಳಿಕ ಸೀನಿಯರ್ ನ್ಯಾಷನಲ್ ಹಾಕಿ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡ ಫೈನಲ್ ಹಂತಕ್ಕೆ ತಲುಪಿತ್ತಾದರು ಅಂತಿಮ ಪಂದ್ಯದಲ್ಲಿ ಸೋಲು ಅನುಭವಿಸಿ ಬೆಳ್ಳಿ ಪದಕ ಗಳಿಸಲಷ್ಟೆ ಶಕ್ತವಾಗಿದೆ.