ಮಡಿಕೇರಿ, ಮೇ ೧೭: ನಗರದ ವಿಂಗ್ಸ್ ಆಫ್ ಫ್ಯಾಶನ್ ಡ್ಯಾನ್ಸ್ ಅಕಾಡೆಮಿ ಮತ್ತು ಶ್ರೀ ಸಾಯಿ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ತಾ. ೨೨ ರಂದು ಮಕ್ಕಳಿಗಾಗಿ ಫ್ಯಾನ್ಸಿ ಡ್ರೆಸ್ ಮತ್ತು ಚಿತ್ರಕಲಾ ಸ್ಪರ್ಧೆ ನಡೆಯಲಿದೆ ಎಂದು ಅಕಾಡೆಮಿಯ ಸ್ಥಾಪಕರು, ನೃತ್ಯ ಸಂಯೋಜಕಿ ಪ್ರೀತ ಕೃಷ್ಣ ಹಾಗೂ ಟ್ರಸ್ಟ್ನ ಅಧ್ಯಕ್ಷೆ ಸಹನಾ ತಿಳಿಸಿದ್ದಾರೆ.
ನಗರದ ವಿಂಗ್ಸ್ ಆಫ್ ಪ್ಯಾಶನ್ ಡ್ಯಾನ್ಸ್ ಅಕಾಡೆಮಿಯಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಸ್ಪರ್ಧೆ ನಡೆಯಲಿದ್ದು, ಆಸಕ್ತರು ಪ್ರವೇಶ ಶುಲ್ಕ ರೂ. ೩೦೦ ಪಾವತಿಸಿ ತಾ. ೨೧ ರೊಳಗೆ ೯೫೯೧೩೫೦೨೬೭, ೯೬೩೨೯೭೬೮೩೩, ೮೪೩೧೨೦೫೧೬೫ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳುವಂತೆ ಮನವಿ ಮಾಡಿದ್ದಾರೆ.
ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ ಸಬ್ ಜೂನಿಯರ್ ವಿಭಾಗದಲ್ಲಿ ೨-೫, ೫-೭ ಹಾಗೂ ೭-೮ ವರ್ಷಗಳು, ಕಿರಿಯರ ವಿಭಾಗದಲ್ಲಿ ೯-೧೧ ವರ್ಷ, ೧೧-೧೩, ೧೩-೧೪ ವರ್ಷ ಹಾಗೂ ಹಿರಿಯರ ವಿಭಾಗದಲ್ಲಿ ೧೪-೧೫, ೧೫-೧೭, ೧೭-೧೮ ವರ್ಷದ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದ್ದು, ಸ್ಪರ್ಧಿಗಳೇ ವಿಷಯ ಆಯ್ಕೆ ಮಾಡಬಹುದಾಗಿದೆ.
ಪ್ರಕೃತಿ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, ೪-೭, ೮-೧೨, ೧೩-೧೭ ಹಾಗೂ ೧೮ ವರ್ಷದ ಮೇಲ್ಪಟ್ಟವರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧಿಗಳು ಕಲರ್ ಪೆನ್ಸಿಲ್ಗಳು, ಸ್ಕೆಚ್ಗಳು, ಡ್ರಾಯಿಂಗ್ ಶೀಟ್ಗಳು, ಡ್ರಾಯಿಂಗ್ಗೆ ಬೇಕಾದ ಅಗತ್ಯ ವಸ್ತುಗಳನ್ನು ತರಬೇಕೆಂದು ಪ್ರೀತ ಕೃಷ್ಣ ಹಾಗೂ ಸಹನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.