ಗೋಣಿಕೊಪ್ಪ ವರದಿ, ಮೇ ೧೫: ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯ ಭಾನುವಾರ ಪಂದ್ಯಾಟದಲ್ಲಿ ಅಚ್ಚಪಂಡ, ತಂಬುಕುತ್ತೀರ, ಮುಕ್ಕಾಟೀರ (ಮಾದಾಪುರ), ಚೆಕ್ಕೇರ, ಬೊಟ್ಟಂಗಡ, ಅಳಮೇಂಗಡ ಮತ್ತು ಐಚಂಡ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆದವು.
ಅಚ್ಚಪಂಡವು ಓಡಿಯಂಡ ವಿರುದ್ದ ೯ ವಿಕೆಟ್ ಗೆಲುವು ಪಡೆಯಿತು. ಓಡಿಯಂಡ ೪ ವಿಕೆಟ್ಗೆ ೩೬ ರನ್ ಪೇರಿಸಿತು. ಅಚ್ಚಪಂಡ ೧ ವಿಕೆಟ್ ಕಳೆದುಕೊಂಡು ೩೯ ರನ್ ಸಿಡಿಸಿತು. ಓಡಿಯಂಡ ಗಗನ್ ೧೯ ರನ್, ಅಚ್ಚಪಂಡ ಅಯ್ಯಪ್ಪ ೧೯ ರನ್, ಗಳಿಸಿದರು. ಅಚ್ಚಪಂಡ ಮಿಥುನ್ ೩ ವಿಕೆಟ್, ಓಡಿಯಂಡ ಪೊನ್ನಣ್ಣ ೧ ವಿಕೆಟ್ ಪಡೆದರು.
ತಂಬುಕುತ್ತೀರ ತಂಡಕ್ಕೆ ಚೊಟ್ಟೆಯಂಡಮಾಡ ವಿರುದ್ಧ ೧೭ ರನ್ಗಳ ಜಯ ದೊರೆಯಿತು. ತಂಬುಕುತ್ತೀರವು ೪ ವಿಕೆಟ್ ನಷ್ಟಕ್ಕೆ ೮೧ ರನ್ ದಾಖಲಿಸಿತು. ಚೊಟ್ಟೆಯಂಡಮಾಡ ೨ ವಿಕೆಟ್ಗೆ ೬೪ ರನ್ ಸಂಪಾದಿಸಿತು. ತಂಬುಕುತ್ತೀರ ಶರಣ್ ೪೧ ರನ್ ಮತ್ತು ೧ ವಿಕೆಟ್ ಪಡೆದರು. ಚೊಟ್ಟೆಯಂಡಮಾಡ ಕಾರ್ಯಪ್ಪ ೨ ವಿಕೆಟ್, ಭೀಮಯ್ಯ ಹಾಗೂ ನಿವಿನ್ ೨೫ ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು.
ಮುಕ್ಕಾಟೀರ (ಮಾದಾಪುರ) ತಂಡವು ಕುಟ್ಟಂಡ (ಕಾರ್ಮಾಡು) ವಿರುದ್ದ ೭ ರನ್ಗಳ ಗೆಲುವು ಪಡೆಯಿತು. ಮುಕ್ಕಾಟೀರ ೫ ವಿಕೆಟ್ ಕಳೆದುಕೊಂಡು ೬೯ ರನ್ ದಾಖಲಿಸಿತು. ಕುಟ್ಟಂಡ ೫ ವಿಕೆಟ್ ನಷ್ಟಕ್ಕೆ ೬೨ ರನ್ ಗಳಿಸಿತು. ಮುಕ್ಕಾಟೀರ ಕಾರ್ಯಪ್ಪ ೪೮ ರನ್, ಕುಟ್ಟಪ್ಪ ೩ ವಿಕೆಟ್, ಕುಟ್ಟಂಡ ಕವನ್ ಮತ್ತು ಕುಟ್ಟಪ್ಪ ೧೬ ರನ್ ಜೊತೆಯಾಟ, ಸಂಜು ೩ ವಿಕೆಟ್ ಪಡೆದರು.
ಚೆಕ್ಕೇರವು ಚಿಯಕ್ಪೂವಂಡವನ್ನು ೬೨ ರನ್ಗಳಿಂದ ಮಣಿಸಿತು. ಚೆಕ್ಕೇರ ೨ ವಿಕೆಟ್ ಕಳೆದುಕೊಂಡು ೧೧೦ ರನ್ ಗುರಿ ನೀಡಿತು. ಚೆಕ್ಕೇರ ಆಕರ್ಶ್ ೫೯ ರನ್ ಚಚ್ಚಿದರು. ಚಿಯಕ್ಪೂವಂಡ ೬ ವಿಕೆಟ್ ನಷ್ಟಕ್ಕೆ ೪೭ ರನ್ ಗಳಿಸಲಷ್ಟೆ ಶಕ್ತವಾಯಿತು. ಚೆಕ್ಕೇರ ಕಾರ್ಯಪ್ಪ ೩ ವಿಕೆಟ್ ಪಡೆದು ೭ ರನ್ ಮಾತ್ರ ನೀಡಿದರು. ಚಿಯಕ್ಪೂವಂಡ ಅಯ್ಯಪ್ಪ ೨ ವಿಕೆಟ್ ಗಳಿಸಿದರು.
ಬೊಟ್ಟಂಗಡ ನೆರವಂಡ ವಿರುದ್ಧ ೭ ವಿಕೆಟ್ ಗೆಲುವು ಪಡೆಯಿತು. ನೆರವಂಡ ೪ ವಿಕೆಟ್ ನಷ್ಟಕ್ಕೆ ೪೭ ರನ್ ಸಂಪಾದಿಸಿತು. ಬೊಟ್ಟಂಗಡ ೩ ವಿಕೆಟ್ ನಷ್ಟಕ್ಕೆ ೪೮ ರನ್ ಸಿಡಿಸಿ ಗೆಲುವು ಪಡೆಯಿತು. ನೆರವಂಡ ಅರುಣ್ ೨೧ ರನ್, ೩ ವಿಕೆಟ್, ಬೊಟ್ಟಂಗಡ ಗೌತಂ ೨೭ ರನ್, ರತನ್ ೨ ವಿಕೆಟ್ ಪಡೆದರು.
ಅಳಮೇಂಗಡ ಅಣ್ಣಳಮಾಡ ವನ್ನು ೭ ವಿಕೆಟ್ಗಳಿಂದ ಸೋಲಿಸಿತು. ಅಣ್ಣಳಮಾಡ ೧ ವಿಕೆಟ್ ನಷ್ಟಕ್ಕೆ ೫೩ ರನ್ ಪೇರಿಸಿತು. ಅಳಮೇಂಗಡ ೩ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಅಣ್ಣಳಮಾಡ ಭವನ್ ೨೮ ರನ್, ಅಳಮೇಂಗಡ ಧೀರಜ್ ೧ ವಿಕೆಟ್, ಅಳಮೇಂಗಡ ದಿಲೀಪ್ ೩೨ ರನ್, ಅಣ್ಣಳಮಾಡ ದಿಲೀಪ್ ೨ ವಿಕೆಟ್ ಪಡೆದ ಸಾಧನೆ ಮಾಡಿದರು.
ಐಚಂಡವು ಕರೋಟಿರ ವಿರುದ್ಧ ೨ ರನ್ಗಳ ರೋಚಕ ಗೆಲುವು ಪಡೆಯಿತು. ಐಚಂಡ ೫ ವಿಕೆಟ್ ನಷ್ಟಕ್ಕೆ ೬೨ ರನ್ ಸಂಪಾದಿಸಿತು. ಕರೋಟಿರ ೩ ವಿಕೆಟ್ ಕಳೆದುಕೊಂಡು ೬೦ ರನ್ ಗಳಿಸಿ ಸೋಲಿಗೆ ಶರಣಾಯಿತು. ಐಚಂಡ ಮುತ್ತಣ್ಣ ೩೧ ರನ್, ಕರೋಟಿರ ಗುರು ೨ ವಿಕೆಟ್, ಅಪ್ಪಣ್ಣ ೨೮ ರನ್, ಐಚಂಡ ಮುತ್ತಣ್ಣ ೨ ವಿಕೆಟ್ ಪಡೆದರು.
೪ ಸುತ್ತಿನ ಪಂದ್ಯದಲ್ಲಿ ಚೊಟ್ಟೆಯಂಡಮಾಡವು ಕಡೇಮಾಡವನ್ನು ೧೦ ವಿಕೆಟ್ಗಳಿಂದ ಸೋಲಿಸಿತು. ಕಡೇಮಾಡ ೬ ವಿಕೆಟ್ ಕಳೆದುಕೊಂಡು ೨೦ ರನ್ ಗುರಿ ನೀಡಿತು. ಚೊಟ್ಟೆಯಂಡಮಾಡ ೨ ಓವರ್ಗಳಲ್ಲಿ ಗೆದ್ದು ಬೀಗಿತು.
ಕಳಕಂಡ ಮತ್ತು ಮಂಡುವAಡ ತಂಡಗಳ ನಡುವಿನ ಪಂದ್ಯ ಮಂದ ಬೆಳಕಿನ ಕಾರಣ ಸ್ಥಗಿತಗೊಂಡಿತು. ಮಂಡುವAಡ ಮೊದಲು ಬ್ಯಾಟ್ ಮಾಡಿ ೭೦ ರನ್ ಸಂಪಾದಿಸಿತು. ನಂತರ ಬ್ಯಾಟಿಂಗ್ ಆರಂಭಿಸಿದ ಕಳಕಂಡ ಮಂದ ಬೆಳಕಿನಿಂದ ಆಟ ಕಷ್ಟ ಎಂದು ನಿರ್ಧರಿಸಿತು. ಇದರಂತೆ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಐಚAಡ ಮುತ್ತಣ್ಣ, ಅಳಮೇಂಗಡ ದಿಲೀಪ್, ಬೊಟ್ಟಂಗಡ ಗೌತಮ್, ಚೆಕ್ಕೇರ ಕಾರ್ಯಪ್ಪ, ಮುಕ್ಕಾಟೀರ ಕಾರ್ಯಪ್ಪ, ತಂಬುಕುತ್ತೀರ ಶರಣ್, ಅಚ್ಚಪಂಡ ಅಯ್ಯಪ್ಪ, ಕಡೇಮಾಡ ಮಂದಣ್ಣ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.