ಕುಶಾಲನಗರ, ಮೇ ೧೫: ಸಾಮಾಗ್ರಿ ಖರೀದಿಸಲೆಂದು ರಸ್ತೆ ದಾಟುವ ಸಂದರ್ಭ ಕಾರೊಂದು ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಸವನಹಳ್ಳಿಯ ಬಿ.ಎಂ. ರಸ್ತೆಯಲ್ಲಿ ನಡೆದಿದೆ.
ಅಂದಗೋವೆಯ ಲೋಕೇಶ್ (೫೬) ಎಂಬವರು ಅಪಘಾತದ ಪರಿಣಾಮ ತೀವ್ರ ಸ್ವರೂಪದಲ್ಲಿ ಗಾಯಗೊಂಡು ಮೃತಪಟ್ಟ ದುರ್ಧೈವಿ. ಬೈಕ್ ನಿಲ್ಲಿಸಿ ರಸ್ತೆ ದಾಟಿ ಅಂಗಡಿಗೆ ತೆರಳುವ ಸಂದರ್ಭ ಕುಶಾಲನಗರದಿಂದ ಮಡಿಕೇರಿಗೆ ಹೋಗುತ್ತಿದ್ದ ಶಿಫ್ಟ್ ಕಾರು ಡಿಕ್ಕಿ ಹೊಡೆದು ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.