ಸೋಮವಾರಪೇಟೆ, ಮೇ.೧೫: ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಆಲೇಕಟ್ಟೆ ಬಳಿಯಲ್ಲಿ ಕಾಂಕ್ರೀಟ್ ಕಾಮಗಾರಿ ಆರಂಭವಾಗಿದ್ದು, ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಪರಿಣಾಮ ಈ ರಸ್ತೆಯ ಮೂಲಕ ಸಂಚರಿಸುತ್ತಿದ್ದ ವಾಹನಗಳು ಬದಲಿ ಮಾರ್ಗವನ್ನು ಅನುಸರಿಸಬೇಕಾಗಿದೆ.

ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿ ಪ್ರಗತಿಯಲ್ಲಿದ್ದು ಅಪೆಂಡಿಕ್ಸ್ -ಇ ಯೋಜನೆಯ ರೂ. ೧ ಕೋಟಿ ವೆಚ್ಚದಲ್ಲಿ ೪.೩೦ ಮೀಟರ್ ಉದ್ದದ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲಾಗುತ್ತಿದೆ.ಕಾಮಗಾರಿಗೆ ಇಂದು ಚಾಲನೆ ನೀಡಿದ್ದು, ಹಾನಗಲ್ಲು ಬಾಣೆ ಸಂಪರ್ಕ ರಸ್ತೆಯಿಂದ ಆಲೇಕಟ್ಟೆ ರಸ್ತೆಯಲ್ಲಿರುವ ಹಾಲಿನ ಡೈರಿ ಮುಂಭಾಗದವರೆಗೆ ಕಾಂಕ್ರಿಟ್ ಹಾಕಲಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳ ಓಡಾಟಕ್ಕೆ ಸಂಪೂರ್ಣ ತಡೆಯೊಡ್ಡಲಾಗಿದೆ.

ವಿವೇಕಾನಂದ ವೃತ್ತದಿಂದ ಮುಸ್ಲಿಂ ಖಬರಸ್ತಾನದವರೆಗೆ ಕಳೆದ ಅವಧಿಯಲ್ಲಿ ಮಳೆಹಾನಿ ಪರಿಹಾರ ನಿಧಿಯ ರೂ.೧.೨೫ ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿದ್ದು, ಮುಂದುವರೆದ ಭಾಗವಾಗಿ ೪.೩೦ ಮೀಟರ್ ಉದ್ಧದ ರಸ್ತೆಯನ್ನು ಅಪೆಂಡಿಕ್ಸ್ - ಇ ಯೋಜನೆಯ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ.

ಇಂದಿನಿAದ ಕಾಮಗಾರಿ ಆರಂಭ ಗೊಂಡಿದ್ದು, ಕಾಂಕ್ರಿಟ್ ಹಾಕುವ ಕಾರ್ಯ ಮುಕ್ತಾಯಗೊಂಡ ಆನಂತರ ದಿಂದ ೨೧ ದಿನಗಳು ಕ್ಯೂರಿಂಗ್ ಆಗಬೇಕಿದೆ. ತದನಂತರ ಈ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ಕುಮಾರ್ ತಿಳಿಸಿದ್ದಾರೆ.

ಸೋಮವಾರಪೇಟೆ ಪಟ್ಟಣದಿಂದ ಆಲೇಕಟ್ಟೆ ಮಾರ್ಗವಾಗಿ ಶಾಂತಳ್ಳಿ, ತೋಳೂರು ಶೆಟ್ಟಳ್ಳಿ ಮೂಲಕ ಸಂಚರಿಸುತ್ತಿದ್ದ ವಾಹನಗಳು ಪಟ್ಟಣದಿಂದ ಚೌಡ್ಲು ಅಥವಾ ಹಾನಗಲ್ಲು ಮಾರ್ಗವಾಗಿ ತೆರಳಬೇಕಿದೆ. ಅಂತೆಯೇ ಶಾಂತಳ್ಳಿ ಹಾಗೂ ತೋಳೂರುಶೆಟ್ಟಳ್ಳಿಯಿಂದ ಪಟ್ಟಣಕ್ಕೆ ಆಗಮಿಸುವ ವಾಹನಗಳು ಚೌಡ್ಲು, ಗಾಂಧಿನಗರ ಅಥವಾ ಯಡೂರು, ಹಾನಗಲ್ಲು ಮಾರ್ಗವಾಗಿ ಆಗಮಿಸಬೇಕಿದೆ. ಕಾಂಕ್ರಿಟ್ ರಸ್ತೆ ಕಾಮಗಾರಿ ಆರಂಭವಾಗಿರುವುದರಿAದ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಬಸ್‌ಗಳನ್ನೇ ಅವಲಂಬಿಸಿರುವ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಆದರೂ ಬದಲಿ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಇದರೊಂದಿಗೆ ಆಟೋಗಳು, ಬಾಡಿಗೆ ವಾಹನಗಳ ಸಂಚಾರವೂ ಸ್ಥಗಿತಗೊಂಡಿದ್ದು, ಸಂತೆ ದಿನದಂದು ಹೆಚ್ಚಿನ ತೊಂದರೆ ಅನುಭವಿಸು ವಂತಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಯನ್ನು ಮುಕ್ತಾಯ ಗೊಳಿಸಲು ಸಂಬAಧಿಸಿದ ಅಭಿಯಂತರರು ಗಮನಹರಿಸಬೇಕೆಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.