ಅಷ್ಟಮಂಗಲ ಪ್ರಶ್ನೆ ಬಳಿಕ ಬಿ. ಎಸ್. ತಮ್ಮಯ್ಯ ನೇತೃತ್ವದ ವ್ಯವಸ್ಥಾಪನಾ ಸಮಿತಿಯಿಂದ ತಲಕಾವೇರಿಯಲ್ಲಿ ಅನೇಕ ಹೋಮ ಹವನಾದಿಗಳನ್ನು ನಡೆಸಲಾಯಿತು. ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಿರ್ವಹಿಸಲಾಯಿತು. ೨೦೧೯ ರ ಏಪ್ರಿಲ್ ೧೦ ರಂದು ಮೇಷ ರಾಶಿಯಲ್ಲಿ ಅಗಸ್ತೆö್ಯÃಶ್ವರನ ಪುನರ್ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಬ್ರಹ್ಮ ಕಲಶಾಭಿಷೇಕಗಳನ್ನು ಕೈಗೊಳ್ಳಲಾಯಿತು. ಮಹಾಪೂಜೆ ಬಳಿಕ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಅನ್ನ ಸಂತರ್ಪಣೆ ಮಾಡಲಾಯಿತು. ಈ ಸಂದರ್ಭ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಿದ್ದರು. ಅಲ್ಲದೆ, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಪಾರು ಪತ್ತೇಗಾರರಾದ ಕೊಂಡೀರ ಪೊನ್ನಣ್ಣ, ಭಾಗಮಂಡಲ ವ್ಯಾಪ್ತಿಯ ನಾಲ್ಕು ಗ್ರಾಮಗಳ ತಕ್ಕ ಮುಖ್ಯಸ್ಥರು ಹಾಗೂ ಮತ್ತಿತರ ಭಕ್ತಾದಿಗಳು ಪಾಲ್ಗೊಂಡಿದ್ದರು.

ಭೂಗತ ಲಿಂಗವನ್ನು ಹೊರ ತೆಗೆಯಲಾಯಿತು

ಈ ನಡುವೆ ಬಿ. ಎಸ್. ತಮ್ಮಯ್ಯ ನೇತೃತ್ವದ ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನಾ ಸಮಿತಿಯು ಕೇರಳದ ಜ್ಯೋತಿಶ್ಶಾಸ್ತçಜ್ಞ ಶ್ರೀ ನಾರಾಯಣ ಪೊದುವಾಳ್ ಅವರು ನಡೆಸಿಕೊಟ್ಟ ಪ್ರಶ್ನೆಯಲ್ಲಿ ಕಂಡು ಬಂದಿತೆAದು ಈ ಹಿಂದೆ ಅಗಸ್ತೆö್ಯÃಶ್ವರ ದೇಗುಲದಲ್ಲಿ ಭೂಗತ ಮಾಡಲಾಗಿದ್ದ ಪ್ರಾಚೀನ ಶಿವಲಿಂಗ ವನ್ನು ಅಗಸ್ತೆö್ಯÃಶ್ವರ ಗರ್ಭಗುಡಿಯಿಂದ ಹೊರ ತೆಗೆಯಲು ತೀರ್ಮಾನಿಸಿತು. ಆ ಬಿಂಬವನ್ನು ಅಲ್ಲ್ಲಿಡುವುದರಿಂದ ದೋಷವಿದೆ ಎಂದು ಜ್ಯೋತಿಷಿ ನುಡಿದಿದ್ದರು. ಆಗ ಚೋದ್ಯಗಾರ ಜ್ಯೋತಿಷಿಯಾಗಿ ದಕ್ಷಿಣ ಕನ್ನಡದ ಶ್ಯಾಮಶಾಸ್ತಿç ಪಾಲ್ಗೊಂಡಿದ್ದರು. ಕ್ಷೇತ್ರ ತಂತ್ರಿಗಳಾದ ಶ್ರೀ ನೀಲೇಶ್ವರ ಪದ್ಮನಾಭÀ ತಂತ್ರಿ (ಈ ಹಿಂದಿನ ತಂತ್ರಿಯವರ ಪುತ್ರ) ಉಪಸ್ಥಿತರಿದ್ದರು. ಜಗದೀಶ್ ಕುಮಾರ್ ದೇವಾಲಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದರು. ೨೦೦೬ ರಲ್ಲಿ ಅಗಸ್ತೆö್ಯÃಶ್ವರ ಗರ್ಭಗುಡಿಯಲ್ಲಿ ಹಿಂದಿನ ಹಿರಿಯ ತಂತ್ರಿಯವರು ಭೂಗತ ಮಾಡಿದ್ದ ಹಳೆÀಯ ಶಿವಲಿಂಗವನ್ನು ೨೦೧೯ರಲ್ಲಿ ಈ ಸಮಿತಿಯಿಂದ ಹೊರ ತೆಗೆಯಲಾಯಿತು. ಅಲ್ಲದೆ, ನಿತ್ಯ ಪೂಜೆಗೆ ಹಿಂದಿನ ತಂತ್ರಿಯವರಿAದ ಪ್ರತಿಷ್ಠಾಪಿಸಲಾಗಿದ್ದ ಕೃಷ್ಣ ಶಿಲೆಯ ಶಿವಲಿಂಗವನ್ನು ಗರ್ಭಗುಡಿಯಿಂದ ಹೊರ ತೆಗೆದು ಅದನ್ನು ಪುನರ್ ಪ್ರತಿಷ್ಠಾಪಿಸಲಾಯಿತು. ಈ ನಡುವೆ ಮೈಸೂರಿನ ನಿವಾಸಿ ಲೋಹಿತ್ ಅರಸ್ ಎಂಬವರು ಯಾವದೇ ಕಾರಣಕ್ಕೆ ಅಗಸ್ತö್ಯ ಪ್ರತಿಷ್ಠಿತವೆನ್ನಲಾದ ಪ್ರಾಚೀನ ಶಿವಲಿಂಗವನ್ನು ತೆಗೆಯದಂತೆ, ಹಳೆಯ ಶಿವಲಿಂಗವನ್ನೇ ಪ್ರತಿಷ್ಠಾಪಿಸುವಂತೆÀಯೂ ಹಾಗೂ ಇದರ ಬದಲು ಮತ್ತೊಂದು ಶಿವಲಿಂಗವನ್ನು ಪ್ರತಿಷ್ಠಾಪಿಸದಂತೆಯೂ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದರು. ಆದರೆ, ಈ ತಡೆಯಾಜ್ಞೆ ವ್ಯವಸ್ಥಾಪನಾ ಸಮಿತಿಯ ಕೈ ಸೇರುವಷ್ಟರಲ್ಲಿ ಭೂಗತವಾಗಿದ್ದ ಹಳೆಯ ಶಿವಲಿಂಗವನ್ನು ಹೊರ ತೆಗೆಯಲಾಗಿತ್ತು. ೨೦೦೬ ರಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಿವ ಲಿಂಗವನ್ನು ಪುನರ್ ಪ್ರತಿಷ್ಠಾಪಿಸಲಾಗಿತ್ತು. ಆದರೆ ಅರ್ಜಿದಾರರು ನ್ಯಾಯಾಲಯದಲ್ಲಿ ಕೋರಿದ್ದ ಮತ್ತೊಂದು ಮನವಿ ಈಡೇರಿತು. ಹಳೆಯ ಶಿವಲಿಂಗವನ್ನು ಸಮುದ್ರದಲ್ಲಿ ವಿಸರ್ಜಿಸಬಾರದೆಂದು ಕೂಡ ಅರ್ಜಿಯಲ್ಲಿ ಕೇಳಲಾಗಿತ್ತು. ಇದರಿಂದಾಗಿ ಸಮಿತಿಯು ಹಳೆಯ ಶಿವಲಿಂಗದ ವಿಸರ್ಜನೆಗೆ ನಡೆಸಿತೆನ್ನಲಾಗಿದ್ದ ಪ್ರಯತ್ನ ಮಾತ್ರ ಸ್ಥಗಿತಗೊಂಡಿತು. ಸಮಿತಿಯು ಹಳೆಯ ಶಿವಲಿಂಗವನ್ನು ಗರ್ಭಗುಡಿಯಿಂದ ಹೊರಗೆ ತೆಗೆದ ಬಳಿಕ ದೇವಾಲಯ ಆವರಣದಲ್ಲಿಯೇ ಇರಿಸಿತ್ತು.