ಮಡಿಕೇರಿ, ಮೇ ೧೪: ಹಾಕಿ ಇಂಡಿಯಾ ವತಿಯಿಂದ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆಯುತ್ತಿರುವ ಸೀನಿಯರ್ ನ್ಯಾಷನಲ್ ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಕೊಡಗಿನ ಹೆಚ್ಚು ಆಟಗಾರ್ತಿಯರನ್ನು ಹೊಂದಿರುವ ಹಾಕಿ ಕರ್ನಾಟಕ ಇಂದು ಪಂಜಾಬ್ ವಿರುದ್ಧ ಜಯ ಸಾಧಿಸಿದೆ. ಫಲಿತಾಂಶಕ್ಕಾಗಿ ಸಡನ್‌ಡೆತ್ ನಿಯಮದ ತನಕ ಮುಂದುವರಿದ ರೋಮಾಂಚಕಾರಿ ಪಂದ್ಯದಲ್ಲಿ ಕೊನೆಗೂ ಹಾಕಿ ಕರ್ನಾಟಕ ೭-೬ ಗೋಲಿನಿಂದ ವಿಜಯದ ನಗು ಬೀರಿತು. ಸುಮಾರು ೮ ವರ್ಷಗಳ ಬಳಿಕ ಕರ್ನಾಟಕ ಮಹಿಳಾ ತಂಡ ಪಂಜಾಬ್ ವಿರುದ್ಧ ಈ ಸಾಧನೆ ಮಾಡಿದೆ. ಬಲಿಷ್ಟ ಪಂಜಾಬ್ ವಿರುದ್ಧದ ಜಯ ತಂಡದಲ್ಲಿ ಹೊಸ ಹುರುಪು ಮೂಡಿಸಿದೆ. ನಿಗದಿತ ಅವಧಿಯಲ್ಲಿ ಇತ್ತಂಡಗಳು ತಲಾ ಒಂದೊAದು ಗೋಲಿನಿಂದ ಡ್ರಾ ಗಳಿಸಿತು. ಬಳಿಕ ಶೂಟೌಟ್‌ನಲ್ಲಿ ೫-೫ ರಿಂದ ಅಂತರ ಮತ್ತೆ ಸಮಗೊಂಡಿತು. ಅಂತಿಮವಾಗಿ ಸಡನ್‌ಡೆತ್‌ನಲ್ಲಿ ಕರ್ನಾಟಕ ಜಯ ಸಾಧಿಸಿದೆ. ತಾ. ೧೬ರಂದು ಕರ್ನಾಟಕ ತಂಡ ಸೆಮಿಫೈನಲ್‌ನಲ್ಲಿ ಹಾಕಿ ಹರ್ಯಾಣವನ್ನು ಎದುರಿಸಲಿದೆ ಎಂದು ತಂಡದ ವ್ಯವಸ್ಥಾಪಕಿ ಕಂಬೀರAಡ ರಾಖಿ ಪೂವಣ್ಣ ತಿಳಿಸಿದ್ದಾರೆ.