ಗೋಣಿಕೊಪ್ಪಲು, ಮೇ ೧೩: ಗೋಣಿಕೊಪ್ಪಲು ಹಿಂದೂ ರುದ್ರಭೂಮಿಗೆ ರೋಟರಿ ಸಂಸ್ಥೆಯಿAದ ರೂ.೮ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ನೂತನ ಚಿತಾಗಾರವನ್ನು ಗೋಣಿಕೊಪ್ಪಲು ಗ್ರಾ.ಪಂ.ಗೆ ಹಸ್ತಾಂತರಿಸಲಾಯಿತು.
ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಅಧ್ಯಕ್ಷೆ ತೀತಮಾಡ ನೀತಾ ಕಾವೇರಮ್ಮ ಮತ್ತು ಪದಾಧಿಕಾರಿಗಳು ವಂತಿಗೆ ಮೂಲಕ ಹಣ ಕ್ರೋಢಿಕರಿಸಿ ೨೪/೧೦/೨೦೨೧ರಂದು ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಭೂಮಿಪೂಜೆಯ ಮೂಲಕ ಈಗ ಇರುವ ಚಿತಾಭಸ್ಮಾಗಾರ ಸಮೀಪವೇ ಮತ್ತೊಂದು ಕಾಮಗಾರಿಗೆ ಚಾಲನೆ ನೀಡಿದ್ದರು. ಹಲವಷ್ಟು ದಾನಿಗಳ ನೆರವಿನೊಂದಿಗೆ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.
ರೋಟರಿ ಜಿಲ್ಲಾ ರಾಜ್ಯಪಾಲ ಎ.ಆರ್.ರವೀಂದ್ರಭಟ್, ಉಪ ರಾಜ್ಯಪಾಲ ಅನಿಲ್ ಎಚ್.ಟಿ., ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಅಧ್ಯಕ್ಷೆ ತೀತಮಾಡ ನೀತಾ ಕಾವೇರಮ್ಮ, ಕಾರ್ಯದರ್ಶಿ ಸುಭಾಷಿಣಿ, ಸಂಸ್ಥೆಯ ಪದಾಧಿಕಾರಿಗಳಾದ ಡಾ. ಚಂದ್ರಶೇಖರ್, ಎಂ.ಜಿ. ಮೋಹನ್, ರಾಜಶೇಖರ್, ಡಾ. ಕೆ.ಪಿ.ಚಿಣ್ಣಪ್ಪ, ಅರುಣ್ ತಿಮ್ಮಯ್ಯ ಮುಂತಾದವರ ಸಮ್ಮುಖದಲ್ಲಿ ಗೋಣಿಕೊಪ್ಪಲು ಗ್ರಾ.ಪಂ.ಅಧ್ಯಕ್ಷೆ ಚೈತ್ರಾ ಚೇತನ್‌ಗೆ ಹಸ್ತಾಂತರ ಮಾಡಲಾಯಿತು. ಚಿತಾಗಾರಕ್ಕೆ ‘ಸಿಲಿಕಾನ್ ಚೇಂಬರ್’ ಅಳವಡಿಕೆ ಕಾರ್ಯ ಬಾಕಿ ಇದ್ದು ಧರ್ಮಸ್ಥಳ ಸಂಘ ಕೊಡುಗೆಯಾಗಿ ನೀಡಲಿದೆ. ‘ಸಿಲಿಕಾನ್ ಚೇಂಬರ್’ ಅಳವಡಿಕೆಯಾದ ನಂತರ ಬಳಸಲು ಅವಕಾಶ ಸಿಗಲಿದೆ ಎಂದು ತೀತಮಾಡ ನೀತಾ ಕಾವೇರಮ್ಮ ತಿಳಿಸಿದ್ದಾರೆ.