ಮಡಿಕೇರಿ, ಮೇ ೧೩: ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿನ ಸಂಚಾರ ವ್ಯವಸ್ಥೆಯ ಕುರಿತಾಗಿ ನಗರ ಸಂಚಾರಿ ಪೊಲೀಸರ ವತಿಯಿಂದ ನಿನ್ನೆ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಠಾಣಾಧಿಕಾರಿ ಅಂತಿಮ ನೇತೃತ್ವದಲ್ಲಿ ನಡೆದÀ ಸಭೆಯಲ್ಲಿ ಹಳದಿಬೋರ್ಡ್ ಕಾರ್, ಲಾರಿ, ಜೀಪ್ ಚಾಲಕರ ಸಂಘ ಹಾಗೂ ಆಟೋ ಚಾಲಕ - ಮಾಲೀಕರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ಸಂಚಾರಿ ನಿಯಮಗಳು ಹಾಗೂ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಪ್ರಸ್ತುತ ನಗರದಲ್ಲಿ ವಾಹನ ಪಾರ್ಕಿಂಗ್ ಮಾಡಲು ಎಲ್ಲೆಡೆ ಗುರುತು, ಮುಖ್ಯ ರಸ್ತೆಗಳಲ್ಲಿ ಝೀಬ್ರ‍್ರಾ ಕ್ರಾಸಿಂಗ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ವಾಹನ ಚಾಲಕರು - ಮಾಲೀಕರು, ಸಾರ್ವಜನಿಕರು ಪಾಲಿಸಬೇಕು, ಹಳದಿಬೋರ್ಡ್ನ ಆಟೋ ಟ್ಯಾಕ್ಸಿ, ಲಾರಿ, ಜೀಪ್‌ನವರು ಬ್ಯಾಡ್ಜ್, ಸಮವಸ್ತç ಹೊಂದಿರಬೇಕೆAಬ ಬಗ್ಗೆ ಸೂಚನೆ ನೀಡಲಾಯಿತು.
ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಬೇಕು, ದಾಖಲೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಬೇಕೆಂಬ ಬಗ್ಗೆಯೂ ತಿಳಿಸಲಾಯಿತು. ಈ ಸಂದರ್ಭ ವಿವಿಧ ವಾಹನ ಸಂಘದ ಪದಾಧಿಕಾರಿಗಳು ತಮಗೆ ಎದುರಾಗುತ್ತಿರುವ ಸಮಸ್ಯೆ, ನಿಲುಗಡೆಯ ವ್ಯವಸ್ಥೆಯ ಬಗ್ಗೆ ಗಮನ ಸೆಳೆದರು. ಕೆಲವೊಂದು ವಿಚಾರಗಳ ಬಗ್ಗೆ ನಗರಸಭೆಯೊಂದಿಗೂ ಚರ್ಚಿಸಲಾಗುವುದು ಎಂದು ಠಾಣಾಧಿಕಾರಿ ಅಂತಿಮ ತಿಳಿಸಿದರು.
ಸಭೆಯಲ್ಲಿ ಸಂಚಾರಿ ಎಎಸ್‌ಐ ಐ.ಪಿ. ನಂದ ಸೇರಿದಂತೆ ಸಿಬ್ಬಂದಿಗಳು, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮನು, ಆಟೋ ಚಾಲಕರ ಸಂಘದ ಮೇದಪ್ಪ, ಅರುಣ್, ಕಾರು ಮಾಲೀಕರ ಸಂಘದ ಸಂತೋಷ್, ಜೀಪು ಸಂಘದ ಕಾಶಿ ಮತ್ತಿತರರು ಪಾಲ್ಗೊಂಡಿದ್ದರು.