ಮಡಿಕೇರಿ, ಮೇ ೧೩: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಮರಗೋಡಿನಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಫುಟ್ಬಾಲ್ ಪಂದ್ಯಾಟದಲ್ಲಿ ಶುಕ್ರವಾರ ೯ ಕುಟುಂಬಗಳು ಮುನ್ನಡೆ ಸಾಧಿಸುವುದರೊಂದಿಗೆ ಪಡಿಕಲ್, ದೇವಜನ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಎಡಿಕೇರಿ ಹಾಗೂ ಕೊಂಬನ ನಡುವಿನ ಪಂದ್ಯದಲ್ಲಿ ಎಡಿಕೇರಿ ೫-೦ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಗಗನ್, ತೇಜಸ್, ಸಂತೋಷ್ ತಲಾ ಒಂದೊAದು ಗೋಲು, ಕೀರ್ತನ್ ೨ ಗೋಲು ಬಾರಿಸಿದರು. ಮತ್ತೊಂದು ಪಂದ್ಯದಲ್ಲಿ ಪೂಳಕಂಡ ಎದುರು ಎಡಿಕೇರಿ ಸೋಲು ಅನುಭವಿಸಿತು. ೩-೧ ಅಂತರದಲ್ಲಿ ಪೂಳಕಂಡ ಗೆಲುವಿನ ನಗೆ ಬೀರಿತು. ಪೂಳಕಂಡ ಪರ, ದೀಕ್ಷಿತ್, ಪೊನ್ನಪ್ಪ, ಸುಜಿತ್ ತಲಾ ಒಂದೊAದು ಗೋಲು, ಎಡಿಕೇರಿ ಪರ ಗಗನ್ ಏಕೈಕ ಗೋಲು ದಾಖಲಿಸಿ ಸೋಲಿನ ಅಂತರವನ್ನು ತಗ್ಗಿಸಿದರು.
೫-೧ ಗೋಲುಗಳ ಅಂತರದಲ್ಲಿ ಕಡ್ಯದ ವಿರುದ್ಧ ತೆಕ್ಕಡೆ ಗೆಲುವು ದಾಖಲಿಸಿತು. ತೆಕ್ಕಡೆ ಪರ ಲೋಹಿತ್ ಸತತ ೪ ಗೋಲು ದಾಖಲಿಸಿ ಮಿಂಚಿದರು. ಕುಶಾಲಪ್ಪ ೧ ಗೋಲು ದಾಖಲಿಸಿದರು. ಕಡ್ಯದ ಪರ ಹರ್ಷ ಏಕೈಕ ಗೋಲು ಹೊಡೆದರು.
ಕೊಂಪುಳಿರ ವಿರುದ್ಧ ಅಪ್ಪೆಯಂಡ್ರ ಸೋಲು ಕಂಡಿತು. ಕೊಂಪುಳೀರ ಪರ ಪುನೀತ್, ಕಿರಣ್ ತಲಾ ೨ ಗೋಲು, ಜಗತ್ ಒಂದು ಗೋಲು ದಾಖಲಿಸಿದರೆ ಅಪ್ಪೆಯಂಡ್ರ ಪರ ಯಾವುದೇ ಗೋಲು ದಾಖಲಾಗಲಿಲ್ಲ. ೨-೧ ಗೋಲುಗಳ ಅಂತರದಲ್ಲಿ ಪೊಕ್ಕುಳಂಡ್ರ ವಿರುದ್ಧ ಪೊನ್ನಚ್ಚನ ವಿಜಯಶಾಲಿಯಾಯಿತು. ಪೊನ್ನಚ್ಚನ ಪರ ದರ್ಶನ್, ಶ್ರೀನಿವಾಸ್ ತಲಾ ಒಂದೊAದು ಗೋಲು, ಪೊಕ್ಕುಳಂಡ್ರ ಪರ ಪ್ರವೀಣ್ ಒಂದು ಗೋಲು ದಾಖಲಿಸಿದರು.
ಕೊಂಪುಳೀರ ಹಾಗೂ ಕುಯ್ಯುಮುಡಿ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳಿಂದ ಕೊಂಪುಳೀರ ವಿಜಯ ಪತಾಕೆ ಹಾರಿಸಿತು. ಪುನೀತ್ ೨, ಕಿರಣ್ ೧ ಗೋಲು ದಾಖಲು ಮಾಡಿದರು. ಪೂಳಕಂಡ ಹಾಗೂ ತೆಕ್ಕಡೆ ನಡುವಿನ ಪಂದ್ಯದಲ್ಲಿ ೨-೦ ಅಂತರದಲ್ಲಿ ಪೂಳಕಂಡ ಗೆಲುವನ್ನು ತನ್ನದಾಗಿಸಿಕೊಂಡಿತು. ಸುಜಿತ್, ದೀಕ್ಷಿತ್ ತಲಾ ಒಂದೊAದು ಗೋಲು ಹೊಡೆದರು.
ಕರ್ಣಯ್ಯನ ವಿರುದ್ಧ ದೇವಜನ ೪-೧ ಗೋಲುಗಳಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ದೇವಜನ ಪರ ಕಾರ್ತಿಕ್ ೩ ಗೋಲು ಹೊಡೆದರೆ ಕರ್ಣಯ್ಯನ ಯಶ್ವಂತ್ ಸೆಲ್ಫ್ ಗೋಲು ದಾಖಲಿಸಿ ದೇವಜನ ಗೆಲುವಿಗೆ ಮತ್ತೊಂದು ಗೋಲಿನ ನೆರವು ನೀಡಿದರು. ಕರ್ಣಯ್ಯನ ಪರ ಜಶ್ವಿತ್ ಏಕೈಕ ಗೋಲು ದಾಖಲಿಸಿದರು.
ಕಟ್ಟೆಮನೆ ಮತ್ತು ಪಡಿಕಲ್ ನಡುವೆ ಪಂದ್ಯದಲ್ಲಿ ಯಾರೂ ಗೋಲು ದಾಖಲಿಸದ ಹಿನ್ನೆಲೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇದರಲ್ಲಿ ಪಡಿಕಲ್ ೨ ಗೋಲು ದಾಖಲಿಸಿ ವಿಜಯಿಯಾಯಿತು.