ಗೋಣಿಕೊಪ್ಪ ವರದಿ, ಮೇ ೧೩: ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢÀಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯಲ್ಲಿ ೧೪ ತಂಡಗಳು ಪ್ರೀಕ್ವಾರ್ಟರ್ ಪ್ರವೇಶ ಪಡೆದಿದ್ದು, ೧೬೯ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. ೨೩ ತಂಡಗಳು ಪ್ರಶಸ್ತಿಗಾಗಿ ಹೋರಾಟದಲ್ಲಿ ಉಳಿದುಕೊಂಡಿವೆ.

ಶುಕ್ರವಾರ ನಡೆದ ಪಂದ್ಯಗಳಲ್ಲಿ ಮೇಕೇರಿರ, ಚೆಕ್ಕೇರ, ಒಡಿಯಂಡ, ಕಳಕಂಡ, ಕೊಟ್ಟಂಗಡ, ನೆರವಂಡ, ಮಾಳೇಟೀರ (ಕೆದಮುಳ್ಳೂರು), ಅಣ್ಣಳಮಾಡ, ಬೊಟ್ಟಂಗಡ, ಚೆನಿಯಪಂಡ, ಐಚಂಡ, ತಂಬುಕುತ್ತಿರ ಹಾಗೂ ಮಂಡುವAಡ ಜಯಭೇರಿ ಸಾಧಿಸಿದವು. ಮಳೆಯಾದ ಕಾರಣ, ವಿಳಂಭವಾಗಿ ಬೆಳಗ್ಗೆ ೧೧.೩೦ ಗಂಟೆ ಸುಮಾರಿಗೆ ಪಂದ್ಯಾಟ ಆರಂಭಗೊಳಿಸಲಾಯಿತು. ೫ ಓವರ್‌ಗಳ ಪಂದ್ಯವನ್ನು ೩ ಕ್ಕೆ ಇಳಿಸಲಾಯಿತು.

ಫಲಿತಾಂಶ

ಮಂಡುವAಡಕ್ಕೆ ಅಮ್ಮಣಿಚಂಡ ವಿರುದ್ಧ ೩೬ ರನ್‌ಗಳ ಭರ್ಜರಿ ಗೆಲುವು ದೊರೆಯಿತು. ಮಂಡುವAಡ ೨ ವಿಕೆಟ್ ಕಳೆದುಕೊಂಡು ೫೮ ರನ್ ಗುರಿ ನೀಡಿತು. ಅಮ್ಮಣಿಚಂಡ ೪ ವಿಕೆಟ್ ಕಳೆದುಕೊಂಡು ೨೧ ರನ್‌ಗೆ ಕುಸಿಯಿತು.

ಚೆಕ್ಕೇರ ಪೊನ್ನೋಲ್ತಂಡವನ್ನು ೨೫ ರನ್‌ಗಳಿಂದ ಸೋಲಿಸಿತು. ಚೆಕ್ಕೇರ ವಿಕೆಟ್ ನಷ್ಟವಿಲ್ಲದೆ ೫೫ ರನ್ ಸಿಡಿಸಿತು. ಪೊನ್ನೋಲ್ತಂಡ ೨ ವಿಕೆಟ್ ಕಳೆದುಕೊಂಡು ೩೦ ರನ್ ಗಳಿಸಿ ನಿರ್ಗಮಿಸಿತು.

ಮಾಳೇಟೀರ (ಕೆದಮುಳ್ಳೂರು) ನೆಲ್ಲಚಂಡವನ್ನು ೯ ವಿಕೆಟ್‌ಗಳಿಂದ ಮಣಿಸಿತು. ನೆಲ್ಲಚಂಡ ೩ ವಿಕೆಟ್ ನಷ್ಟಕ್ಕೆ ೪೧ ರನ್ ಗುರಿ ನೀಡಿತು. ಮಾಳೇಟೀರ ೧ ವಿಕೆಟ್ ಕಳೆದುಕೊಂಡು ೨ ಚೆಂಡು ಉಳಿದಿರುವಂತೆ ಪಂದ್ಯ ಗೆದ್ದುಕೊಂಡಿತು.

ಅಣ್ಣಳಮಾಡ ಚೆರುವಾಳಂಡ ವಿರುದ್ಧ ೧೦ ವಿಕೆಟ್ ಜಯ ಸಾಧನೆ ಮಾಡಿತು. ಚೆರುವಾಳಂಡ ೪ ವಿಕೆಟ್ ಕಳೆದುಕೊಂಡು ೧೧ ರನ್‌ಗಳ ಸುಲಭ ಗುರಿ ನೀಡಿತು. ಅಣ್ಣಳಮಾಡ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು. ಬೊಟ್ಟಂಗಡವು ಮುದ್ದಂಡ ವಿರುದ್ಧ ೧೦ ವಿಕೆಟ್ ಗೆಲುವು ಪಡೆದುಕೊಂಡಿತು. ಮುದ್ದಂಡ ೧ ವಿಕೆಟ್ ಕಳೆದುಕೊಂಡು ೨೪ ರನ್ ಕಲೆ ಹಾಕಿತು. ಬೊಟ್ಟಂಗಡ ೧.೩ ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.

ಚೆನಿಯಪಂಡಕ್ಕೆ ಮುಂಡಚಾಡೀರ ವಿರುದ್ಧ ೭ ರನ್‌ಗಳ ಗೆಲುವು ದೊರೆಯಿತು. ಮುಂಡಚಾಡೀರ ೩ ವಿಕೆಟ್ ನಷ್ಟಕ್ಕೆ ೪೦ ರನ್ ಸಂಪಾದಿಸಿತು. ಚೆನಿಯಪಂಡ ೩ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು. ಐಚಂಡ ಮಡ್ಲಂಡವನ್ನು ೭ ರನ್‌ಗಳಿಂದ ಸೋಲಿಸಿತು. ಐಚಂಡ ೫ ವಿಕೆಟ್ ನಷ್ಟಕ್ಕೆ ೩೬ ರನ್ ಕಲೆ ಹಾಕಿತು. ಮಡ್ಲಂಡ ೧ ವಿಕೆಟ್ ಕಳೆದುಕೊಂಡು ೨೯ ರನ್ ಮಾತ್ರ ಗಳಿಸಿತು.

ತಂಬುಕುತ್ತಿರ ಮೂಕೊಂಡ ವಿರುದ್ಧ ೧೦ ವಿಕೆಟ್ ಜಯ ಸಾಧನೆ ಮಾಡಿತು. ಮೂಕೊಂಡ ೬ ವಿಕೆಟ್ ನಷ್ಟಕ್ಕೆ ೮ ರನ್ ಗಳಿಸಿತು. ತಂಬುಕುತ್ತಿರ ೧ ಓವರ್‌ಗಳಲ್ಲಿ ಗೆದ್ದು ಬೀಗಿತು. ಮೇಕೇರಿರ ಮಚ್ಚಮಾಡ ವಿರುದ್ಧ ೪ ರನ್‌ಗಳ ಗೆಲುವು ಪಡೆಯಿತು. ಮೇಕೇರಿರ ೧ ವಿಕೆಟ್ ಕಳೆದುಕೊಂಡು ೫೨ ರನ್ ಗಳಿಸಿತು. ಮಚ್ಚಮಾಡ ೨ ವಿಕೆಟ್ ನಷ್ಟಕ್ಕೆ ೪೮ ರನ್‌ಗಳಿಸಿ ಸೋಲಿಗೆ ಶರಣಾಯಿತು.

ಒಡಿಯಂಡಕ್ಕೆ ಮಾಳೆಯಂಡ ಮತ್ತು ಚಿಮ್ಮಣಮಾಡ ವಿರುದ್ಧ ೨ ಗೆಲುವು ದೊರೆಯಿತು. ಮಾಳೆಯಂಡವನ್ನು ೧೯ ರನ್‌ಗಳಿಂದ ಸೋಲಿಸಿತು. ೨ ವಿಕೆಟ್ ನಷ್ಟಕ್ಕೆ ೪೮ ರನ್ ಗುರಿ ನೀಡಿದ ಒಡಿಯಂಡ, ಮಾಳೆಯಂಡ ತಂಡದ ೨ ವಿಕೆಟ್ ಪಡೆದುಕೊಂಡು ೨೯ ರನ್‌ಗಳಿಗೆ ಕಟ್ಟಿ ಹಾಕಿತು. ಚಿಮ್ಮಣಮಾಡ ವಿರುದ್ಧ ೩ ರನ್‌ಗಳ ರೋಚಕ ಗೆಲುವು ಪಡೆಯಿತು. ೧ ವಿಕೆಟ್ ಕಳೆದುಕೊಂಡು ಒಡಿಯಂಡ ೨೬ ರನ್ ಗುರಿ ನೀಡಿತು. ಚಿಮ್ಮಣಮಾಡ ೩ ವಿಕೆಟ್ ನಷ್ಟಕ್ಕೆ ೨೩ ರನ್ ಗಳಿಸಿ ಸೋಲನುಭವಿಸಿತು.

ಕಳಕಂಡ ಮೂಕಳೇರ ವಿರುದ್ಧ ೧೪ ರನ್‌ಗಳಿಂದ ಗೆದ್ದು ಬೀಗಿತು. ಕಳಕಂಡ ೨ ವಿಕೆಟ್ ಕಳೆದುಕೊಂಡು ೩೮ ರನ್ ದಾಖಲಿಸಿತು. ಮೂಕಳೇರ ೩ ವಿಕೆಟ್ ನಷ್ಟಕ್ಕೆ ೨೪ ರನ್ ಗಳಿಸಿತು. ಕೊಟ್ಟಂಗಡ ನೂರೇರವನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ನೂರೇರ ೨ ವಿಕೆಟ್ ಕಳೆದುಕೊಂಡು ೧೫ ರನ್ ಗುರಿ ನೀಡಿತು. ಕೊಟ್ಟಂಗಡ ೨ ಒವರ್‌ಗಳಲ್ಲಿ ಗುರಿ ತಲುಪಿತು. ನೆರವಂಡಕ್ಕೆ ಮೇವಡ ವಿರುದ್ಧ ೪೯ ರನ್‌ಗಳ ಅಮೋಘ ಗೆಲುವು ದೊರೆಯಿತು. ವಿಕೆಟ್ ನಷ್ಟವಿಲ್ಲದೆ ನೆರವಂಡ ೬೧ ರನ್ ಗುರಿ ನೀಡಿತು. ಮೇವಡ ೧ ವಿಕೆಟ್ ಕಳೆದುಕೊಂಡು ೧೧ ರನ್‌ಗಳಿಗೆ ಕುಸಿಯಿತು.

ಪಂದ್ಯ ಪುರುಷ ಪ್ರಶಸ್ತಿಯನ್ನು ಮಚ್ಚಮಾಡ ಮಾಚಯ್ಯ, ಮೂಕೊಂಡ ಅರ್ಪಿತ್, ಮಡ್ಳಂಡ ದರ್ಶನ್, ಮುಂಡಚಾಡೀರ ರಜಿತ್, ಮುದ್ದಂಡ ಚೆಂಗಪ್ಪ, ಚೆರುವಾಳಂಡ ದರ್ಶನ್, ನೆಲ್ಲಚಂಡ ಕಿರಣ್, ಮೇವಡ ನಿತಿನ್, ನೂರೇರ ಶರಣ್, ಮೂಕಳೇರ ಹರ್ಷಿತ್, ಮಾಳೇಯಂಡ ರೋಹನ್, ಪೊನ್ನೋಲ್ತಂಡ ವಿನೋದ್, ಚಿಮ್ಮಣಮಾಡ ದರ್ಶನ್, ಅಮ್ಮಣಿಚಂಡ ಮಂತನ್ ಪಡೆದುಕೊಂಡರು.