ಮಡಿಕೇರಿ, ಮೇ ೧೩ : ಜಂಟಿ ಖಾತೆಯಿಂದಾಗಿ ಯಾವದೇ ಸರಕಾರದ ಸೌಲಭ್ಯಗಳು ಲಭಿಸುತ್ತಿಲ್ಲ., ಪೌತಿ ಖಾತೆ ಸರಿಪಡಿಸದೆ ತೊಂದರೆಯಾಗುತ್ತಿದೆ., ೩೦-೪೦ ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿದ್ದರೂ ಇನ್ನೂ ಕೂಡ ಹಕ್ಕು ಪತ್ರ ಸಿಕ್ಕಿಲ್ಲ, ಜಮ್ಮಾ ಬಾಣೆ, ತರಿ ಭೂಮಿಯಲ್ಲಿನ ಸಮಸ್ಯೆಗಳಿಂದಾಗಿ ಯಾವದೇ ಸೌಲಭ್ಯಗಳು ಸಿಗುತ್ತಿಲ್ಲ., ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ, ದಲ್ಲಾಳಿಗಳ ಹಾವಳಿಯಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ., ಹೀಗೇ., ಇನ್ನೂ ಅನೇಕ ಕಂದಾಯ ಇಲಾಖೆಗಳಿಗೆ ಸಂಬAಧಿಸಿದ ಸಮಸ್ಯೆಗಳನ್ನು ರೈತರು ಕಂದಾಯ ಸಚಿವರೆದುರು ತೆರೆದಿಟ್ಟರು.

ರೈತರು ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಒತ್ತುವರಿದಾರರಿಗೆ ನೀಡುವ ಸಂಬAಧ ರೈತರೊಂದಿಗೆ ಕಂದಾಯ ಸಚಿವ ಆರ್.ಅಶೋಕ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ರೈತರು ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟರು.

ಪೌತಿಖಾತೆ ಸಮಸ್ಯೆ

ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೊಂಗಾAಡ ದೇವಯ್ಯ ಮಾತನಾಡಿ; ಭೂಮಾಲೀಕರ ಪಹಣಿಯಲ್ಲಿನ ಕುಟುಂಬದ ಮೃತರ ಹೆಸರನ್ನು ತೆಗೆದು ಭೂ ಒಡೆತನದ ಹೆಸರನ್ನು ನಮೂದಿಸುವ ಪೌತಿ ಖಾತೆ ಆಂದೋಲನ ಮಾಡಲಾಗಿದ್ದು, ಇದರ ಪ್ರಯೋಜನ ಹೊಂದಲು ಅರ್ಜಿ ಸಲ್ಲಿಸಲು ಕಂದಾಯ ಇಲಾಖೆಗೆ ತೆರಳಿದರೆ ಸಿಬ್ಬಂದಿಗಳು ಸಂಬAಧವಿಲ್ಲದ ಹಲವು ದಾಖಲಾತಿಗಳನ್ನು ಕೇಳುತ್ತಾರೆ, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಸರಿಪಡಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ಮಾಜಿ ಸೈನಿಕರಿಗೆ ಕೊಡಿ

ಮಾಜಿ ಸೈನಿಕ ಓಡಿಯಂಡ ಚಿಂಗಪ್ಪ ಮಾತನಾಡಿ; ಮಾಜಿ ಸೈನಿಕರು ೧ರಿಂದ ೫ ಎಕರೆವರೆಗೆ ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡಿಕೊಂಡಿದ್ದಾರೆ. ಅವರುಗಳಿಗೆ ಇನ್ನೂ ಕೂಡ ಮಂಜೂರಾತಿ ಯಾಗಿರುವದಿಲ್ಲ. ೧೫ರಿಂದ ೪೦ವರ್ಷಗಳ ಕಾಲ ದೇಶ ಸೇವೆ ಮಾಡಿರುವ ಮಾಜಿ ಸೈನಿಕರಿಗೆ ಜಾಗವನ್ನು ಗುತ್ತಿಗೆ ನೀಡದೆ ಅವರುಗಳಿಗೆ ಮಂಜೂರು ಮಾಡಿ ಕೊಡಬೇಕು. ಮಾಜಿ ಸೈನಿಕರುಗಳಿಗಾಗಿ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ೫೦ರಿಂದ ೧೦೦ ಎಕರೆ ಕಾಯ್ದಿರಿಸಬೇಕೆಂದು ಮನವಿ ಮಾಡಿದರು.

ದರ ಕಡಿಮೆ ಮಾಡಿ

ಕೊಡಗು ಏಲಕ್ಕಿ ಬೆಳೆಗಾರರ ಸಂಘದ ಅಧ್ಯಕ್ಷ ಹೆಚ್.ಎಸ್.ಕುಶಾಲಪ್ಪ ಮಾತನಾಡಿ; ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿಸಣ್ಣ ಏಲಕ್ಕಿ ಬೆಳೆಗಾರರಿದ್ದು, ೧ರಿಂದ ೨ ಎಕರೆಗಳಷ್ಟು ಜಾಗ ಒತ್ತುವರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಏಲಕ್ಕಿ ಬೆಲೆಯಲ್ಲಿ ಆಗಾಗ್ಗೆ ಏರಿಳಿತ ಆಗುತ್ತಿರುತ್ತದೆ. ಹಾಗಾಗಿ ಗುತ್ತಿಗೆಗೆ ನೀಡುವ ಸಂದರ್ಭ ದರ ಕಡಿಮೆ ಮಾಡಬೇಕು. ಎಕರೆಗೆ ರೂ.೫೦೦ರಂತೆ ನಿಗದಿಪಡಿಸುವಂತೆ ಮನವಿ ಮಾಡಿಕೊಂಡರು.

ಜAಟಿ ಖಾತೆಗೆ ಅದಾಲತ್

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ; ಜಂಟಿ ಖಾತೆ ಹೊಂದಿರುವ ಜಾಗಕ್ಕೆ ಕಂದಾಯ ನಿಗದಿ ಆಗಿರುವದಿಲ್ಲ. ಹಲವು ಪಹಣಿಯಲ್ಲಿ ಪಿ೧, ಪಿ೨ ಎಂದಿರುವದನ್ನು ತೆಗೆಯಲಾಗಿಲ್ಲ. ಇದರಿಂದಾಗಿ ನಕಾಶೆ ಹಾಗೂ ಆಕಾರಬಂದಿಗೆ ಹೊಂದಾಣಿಕೆ ಆಗುತ್ತಿಲ್ಲ, ಈ ನಿಟ್ಟಿನಲ್ಲಿ ಅಪರ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡಿ ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್ ಏರ್ಪಡಿಸಿದರೆ ಮಾತ್ರ ಪರಿಹಾರ ಸಾಧ್ಯ ಎಂದು ಸಲಹೆ ಮಾಡಿದರು. ಪೌತಿ ಖಾತೆಗೆ ಸಂಬAಧಿಸಿದAತೆ ೧೫-೨೦ವರ್ಷಗಳಿಂದ ವರ್ಗಾವಣೆ ಆಗದೆ ಬಾಕಿ ಉಳಿದಿವೆ. ಈ ಸಂಬAಧ ಕೂಡ ಹೋಬಳಿ ಮಟ್ಟದಲ್ಲಿ ಅದಾಲತ್ ನಡೆಸಬೇಕಿದೆ. ಪಟ್ಟೆದಾರ ಮೃತÀಪಟ್ಟಲ್ಲಿ ಕಂದಾಯ ಇಲಾಖೆಯ ಒಪ್ಪಿಗೆ ಪಡೆದು ಹೆಸರನ್ನು ಅಳಿಸಿಹಾಕುವಂತಾಗಬೇಕೆAದು ಸಲಹೆ ಮಾಡಿದರು.

ಖುಷ್ಕಿ ಕಂದಾಯ

ಕೊಡಗು ಬೆಳೆಗಾರರ ಒಕ್ಕೂಟದ ಪದಾಧಿಕಾರಿ ಕೆ.ಕೆ.ವಿಶ್ವನಾಥ್ ಕಂದಾಯಕ್ಕೆ ಬಾರದ ಖಾಸಗಿ ಜಮೀನುಗಳಿಗೆ ಖುಷ್ಕಿ ಕಂದಾಯ ವಿಚಾರದ ಬಗ್ಗೆ ಮಾತನಾಡಿ; ಪ್ರಸ್ತುತ ಕಂದಾಯಕ್ಕೆ ಬಾರದ ಭೂಮಿಗಳಿಗೆ ವಿಭಾಗ ಪತ್ರ ನೋಂದಾಯಿಸಲು ಕಾನೂನಿನಲ್ಲಿ ಅವಕಾಶವಿರುವದಿಲ್ಲ, ನೋಂದಾಯಿಸ್ಪಡದ ಪತ್ರವಿದ್ದಲ್ಲಿ ಕಂದಾಯ ಇಲಾಖೆಯ ಮುಖಾಂತರ ವಿಭಜಿಸಲು ಈ ಹಿಂದೆ ಅವಕಾಶವಿತ್ತು. ಇತ್ತೀಚೆಗೆ ಕೊಡಗಿಗೆ ಸಂಬAಧಪಟ್ಟAತೆ ಕಂದಾಯ ಇಲಾಖೆಯ ಆಂತರಿಕ ನಿಯಮದಿಂದಾಗಿ ವಿಭಾಗಿಸಲು ಅವಕಾಶವಿರುವದಿಲ್ಲ. ಕುಟುಂಬದ ಸದಸ್ಯರು ಕಂದಾಯಕ್ಕೆ ಒಳಪಡದ ಆಸ್ತಿಗಳ ಬಗ್ಗೆ ಸಿವಿಲ್ ನ್ಯಾಯಾಲಯದ ಮುಖಾಂತರ ಮೊರೆ ಹೋದಾಗ ಅಲ್ಲಿಯೂ ಅವರ ಪ್ರಕರಣವು ಕಂದಾಯಕ್ಕೆ ಒಳಪಡದೇ ಇರುವದರಿಂದ ತಿರಸ್ಕಾರಗೊಳ್ಳುತ್ತದೆ. ಇದರಿಂದಾಗಿ ಯಾವದೇ ಸೌಲಭ್ಯಗಳು ಸಿಗುತ್ತಿಲ್ಲ. ಕಳೆದ ಬಾರಿಯ ಪ್ರಕೃತಿ ವಿಕೋಪದ ಯಾವದೇ ಪರಿಹಾರಗಳು ಲಭಿಸಿರುವದಿಲ್ಲ, ಹಾಗಾಗಿ ಕಂದಾಯಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ತರಿಜಮೀನು ಆರ್‌ಟಿಸಿ ಸಮಸ್ಯೆ

ಪಟ್ಟಡ ರೀನಾ ಪ್ರಕಾಶ್ ಮಾತನಾಡಿ; ಜಮ್ಮಾ ಬಾಣೆಗಿಂತ ತರಿ ಜಮೀನಿನಲ್ಲಿ ಸಮಸ್ಯೆ ದೊಡ್ಡದಿದೆ. ಆರ್‌ಟಿಸಿ ತೆಗೆದರೆ ೨೫೦ಪುಟಗಳಷ್ಟು ಬರುತ್ತದೆ. ಇದರಲ್ಲಿ ಹೆಸರಿರುವವರು ಯಾರೂ ಈಗ ಇಲ್ಲ, ಯಾವದೇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅನ್‌ರಿಜಿಸ್ಟರ್ಡ್ ಪಾರ್ಟಿಷನ್ ಮಾಡಿಸಿದರೆ ಪ್ರತಿಯೋರ್ವರಿಗೂ ವೈಯಕ್ತಿಕ ಖಾತೆಯೊಂದಿಗೆ ಬದುಕು ಸಾಧ್ಯವಾಗಲಿದೆ. ಹಿಂದಿನವರದ್ದು ಮರಣ ದೃಢೀಕರಣ ಪತ್ರ ಇರುವದಿಲ್ಲ, ಹಾಗಾಗಿ ಅಫಿಡಾವಿಟ್ ಮೂಲಕ ಪಾರ್ಟಿಷನ್ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೋರಿದರು.

ಫಾರಂ ೫೭ಕ್ಕೆ ಅವಕಾಶ ಕಲ್ಪಿಸಿ

ಎಸ್.ಜಿ.ಮೇದಪ್ಪ ಮಾತನಾಡಿ; ಅಕ್ರಮ ಸಕ್ರಮದಡಿ ಫಾರಂ ನಂ. ೫೭ರಡಿ ಬಹಳಷ್ಟು ಮಂದಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರುವದಿಲ್ಲ, ಹಾಗಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಣೆ ಮಾಡಬೇಕೆಂದು ಮನವಿ ಮಾಡಿದರು.

ದಲ್ಲಾಳಿಗಳ ನಿಯಂತ್ರಿಸಿ

ಮನು ಮುತ್ತಪ್ಪ ಮಾತನಾಡಿ, ಕಂದಾಯ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಸಾಮಾನ್ಯರು ಹೋದರೆ ಅಲ್ಲಿ ಯಾವದೇ ಕೆಲಸ ಆಗುವದಿಲ್ಲ, ದಲ್ಲಾಳಿಗಳಿಗೆ ಹಣ ನೀಡಿದರೆ ಕೂಡಲೇ ಆಗುತ್ತದೆ, ಒಂದು ಸ.ನಂ.ಗೆ ೫೦ಸಾವಿರದಷ್ಟು ಹಣ ನೀಡಬೇಕು. ಇದರಿಂದಾಗಿ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ, ಮೊದಲು ದಲ್ಲಾಳಿಗಳ ಹಾವಳಿ ತಪ್ಪಿಸಬೇಕೆಂದು ಮನವಿ ಮಾಡಿದರು.

ಹಕ್ಕುಪತ್ರ ಕೊಡಿ

ಗರಗಂದೂರಿನ ಹಾರಂಗಿ ಮುಳುಗಡೆ ಪ್ರದೇಶದ ನಿವಾಸಿ ಮಹಿಳೆ ಮಾತನಾಡಿ; ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭ ಮುಳುಗಡೆಯಾದ ಭೂಮಿಗೆ ಪರ್ಯಾಯವಾಗಿ ನಾಲ್ಕು ಎಕರೆ ಜಾಗ ನೀಡಲಾಗಿದೆ, ಆದರೆ ಇದುವರೆಗೂ ಹಕ್ಕು ಪತ್ರ ಸಿಕ್ಕಿಲ್ಲ, ತಾನು ಒಂಟಿಯಾಗಿ ಜೀವಿಸುತ್ತಿದ್ದು ದಯಮಾಡಿ ಹಕ್ಕು ಪತ್ರ ಒದಗಿಸಿಕೊಡುವಂತೆ ಅಳಲು ತೋಡಿಕೊಂಡರು.

ಕಾರ್ಮಿಕ ಕಿಶನ್ ತಮ್ಮ ಅಜ್ಜ ಒತ್ತುವರಿ ಮಾಡಿಕೊಂಡಿರುವ ೧.೨೦ಎಕರೆ ಪ್ರದೇಶಕ್ಕೆ ಇನ್ನೂ ಹಕ್ಕು ಪತ್ರ ನೀಡಿಲ್ಲ, ಇದೀಗ ಅಜ್ಜ ತೀರಿಕೊಂಡಿದ್ದಾರೆ, ಪ್ರತಿ ಬಾರಿ ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿದರೂ ತಿರಸ್ಕಾರಗೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.