ಗೋಣಿಕೊಪ್ಪ ವರದಿ, ಮೇ ೧೨: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವತಿಯಿಂದ ನಾಗರಹೊಳೆ ಉದ್ಯಾನವನ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ತಿತಿಮತಿಯಿಂದ ಆನೆಚೌಕೂರು ವರೆಗೆ ೭ ಕಿ.ಮೀ. ವ್ಯಾಪ್ತಿಯಲ್ಲಿ ಕಸ, ಪ್ಲಾಸ್ಟಿಕ್, ಬಾಟಲಿ ಹೆಕ್ಕಿ ಶ್ರಮದಾನ ಮಾಡಿದರು. ಪ್ರಯಾಣಿಕರು ಬಿಸಾಡಿದ್ದ ಪ್ಲಾಸ್ಟಿಕ್ ಬಾಟಲಿ, ಆಹಾರ ಪ್ಯಾಕೆಟ್, ಬಾಟಲಿಗಳು ಹೆಚ್ಚಾಗಿದ್ದವು. ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಎಂ.ಕೆ. ಸುಬ್ರಮಣಿ ಇದ್ದರು.