ಶನಿವಾರಸಂತೆ, ಮೇ ೧೨: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನಿಲುವಾಗಿಲು- ಬೆಸೂರು ಗ್ರಾಮಗಳ ಶ್ರೀಬಾಲ ತ್ರಿಪುರ ಸುಂದರಿ ದೇವಾಲಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಎನ್.ವೈ. ಧರ್ಮಪ್ಪ ಹಾಗೂ ಕಾರ್ಯದರ್ಶಿಯಾಗಿ ಎನ್.ಎನ್. ಚಂದ್ರಪ್ಪ ಆಯ್ಕೆಯಾಗಿದ್ದಾರೆ.
ಮಂಗಳವಾರ ದೇವಾಲಯದಲ್ಲಿ ನೂತನ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರ ಆಯ್ಕೆ ನಡೆದಿದ್ದು, ನಿಕಟಪೂರ್ವ ಅಧ್ಯಕ್ಷ ಎ.ಬಿ. ಯೋಗಪ್ಪ ಮತ್ತು ಕಾರ್ಯದರ್ಶಿ ಬಿ.ಬಿ. ನಂಜಪ್ಪ ಅಧಿಕಾರ ಹಸ್ತಾಂತರಿಸಿದರು. ನಿವೃತ್ತ ಯೋಧ ಸಿ.ಬಿ. ಪ್ರಸನ್ನ ಮತ್ತಿತರ ಆಡಳಿತ ಮಂಡಳಿ ನಿರ್ದೇಶಕರು ಹಾಜರಿದ್ದರು.