ಪೊನ್ನಂಪೇಟೆ, ಮೇ ೧೨: ಗುಂಡಿಕೆರೆ ಚೇನೋತ್ ಕುಟುಂಬಸ್ಥರ ಕುಟುಂಬ ಸಂಗಮದಲ್ಲಿ ಇತ್ತೀಚೆಗೆ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾಗಿ ಪದೋನ್ನತಿ ಹೊಂದಿರುವ ಕುಟುಂಬದ ಸಿ.ಯು. ಸಾದುಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗುಂಡಿಕೆರೆಯಲ್ಲಿರುವ ಕುಟುಂಬದ ಐನ್‌ಮನೆ ಆವರಣದಲ್ಲಿ ಹಿರಿಯರಾದ ಉಮ್ಮರ್ ಹಾಜಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾದುಲಿ ಅವರನ್ನು ಶಾಲು ಹೊದಿಸಿ ಕುಟುಂಬದ ಪರವಾಗಿ ಸನ್ಮಾನಿಸ ಲಾಯಿತು. ಈ ಸಂದರ್ಭ ಮಾತ ನಾಡಿದ ಕುಟುಂಬದ ಹಿರಿಯರು, ಕಳೆದ ಹಲವು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾದುಲಿ ಅವರ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಎಎಸೈ ಹಸೈನಾರ್ ಹಾಜಿ, ಮೀತಲತಂಡ ಉಮ್ಮರ್, ನಿವೃತ್ತ ಯೋಧ ಪುಡಿಯಂಡ ಮೊಯಿದ್ದೀನ್, ಸಿ.ಎ. ರಫೀಕ್, ಬೇಟೋಳಿ ಗ್ರಾ.ಪಂ. ಮಾಜಿ ಸದಸ್ಯರಾದ ಎಂ.ಎ. ಮೊಯಿದು, ಸಿ.ಎಂ. ರಿಯಾಜ್, ಮೀತಲತಂಡ ಉಮ್ಮರ್, ಮೀತಲತಂಡ ಬಶೀರ್ ಸೇರಿದಂತೆ ಕುಟುಂಬಸ್ಥರು ಹಾಜರಿದ್ದರು.

ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಚೆನೋತ್ ಅಹ್ಮದ್ ಮದನಿ ನೇತೃತ್ವ ನೀಡಿದರು. ಮೊಯಿದ್ದೀನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಪಿ. ಅಲಿ ವಂದಿಸಿದರು.