ಮಡಿಕೇರಿ, ಮೇ ೧೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ವತಿಯಿಂದ ಹತ್ತು ದಿನಗಳ ಕಾಲ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಶಿಶು ಕಲ್ಯಾಣ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು, ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ವಹಿಸಿಕೊಂಡಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಪೂಣಚ್ಚ ಉಪಸ್ಥಿತರಿದ್ದರು. ಮಕ್ಕಳ ಪ್ರದರ್ಶನ ನೋಡಿ ಮುಖ್ಯ ನಿರ್ವಹಣಾಧಿಕಾರಿ ಅವರು ಪ್ರಶಂಸೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ನೀನಾಸಂ ತಂಡದವರಿAದ ಕ್ರಾಫ್ಟ್, ಸಮೂಹ ಗಾಯನ, ನೃತ್ಯ, ನಾಟಕ ಯೋಗಗಳನ್ನು ಮಕ್ಕಳಿಗೆ ಕಲಿಸಿ ಪ್ರದರ್ಶಿಸಲಾಯಿತು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಲೋಕೇಶ್ ಕರಾಟೆ ತರಬೇತಿ ನೀಡಿದ್ದು ಶಿಬಿರಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ೧೦ ದಿನಗಳ ಬೇಸಿಗೆ ಶಿಬಿರದಲ್ಲಿ ಜಿಲ್ಲಾ ಬಾಲಭವನದ ಸಂಯೋಜಕರಾದ ಹರೀಶ್ ಮತ್ತು ಪೂಜಾ ಅವರು ನಡೆಸಿಕೊಟ್ಟಿದ್ದು ೮೦ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ವನ್ನು ಪ್ರಭಾವತಿ ನಿರೂಪಿಸಿದರು. ಸೂರಜ್ ವಂದಿಸಿದರು.