ಪೊನ್ನಂಪೇಟೆ, ಮೇ ೧೨: ಇತ್ತೀಚೆಗೆ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ಆಯೋಜಿಸಲಾಗಿದ್ದ ನೃತ್ಯ ಸಂಗಮ ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ಎನ್.ಜಿ. ಗ್ರೀಷ್ಮ ನ್ಯಾಷನಲ್ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪಡೆದು ಕೊಂಡಿದ್ದಾಳೆ. ಈಕೆ ಪೊನ್ನಂಪೇಟೆ ಕಾಟ್ರಕೊಲ್ಲಿಯ ಶಂಕರ ಮತ್ತು ಲೀಲಾ ದಂಪತಿಯ ಮಗಳಾದ ಸುಮಾ ಎಂಬವರ ಪುತ್ರಿಯಾಗಿದ್ದು, ಪೊನ್ನಂಪೇಟೆಯ ನಾಟ್ಯಸಂಕಲ್ಪ ನೃತ್ಯ ಶಾಲೆಯಲ್ಲಿ ನೃತ್ಯಭ್ಯಾಸ ಮಾಡುತ್ತಿದ್ದಾಳೆ.