ಮಡಿಕೇರಿ, ಮೇ ೧೨: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಅವರ ನಿರ್ದೇಶನದ ಮೇರೆಗೆ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ ಅವರ ಅನುಮೋದನೆಯೊಂದಿಗೆ ಸಮಿತಿ ರಚಿಸಲಾಗಿದ್ದು, ಉಪಾಧ್ಯಕ್ಷರಾಗಿ ಪ್ರಭುರೈ, ರಘುಭೈರ, ಅಯಿಲಪಂಡ ರಾಜು ಪೊನ್ನಪ್ಪ, ಪಿ.ಸಿ. ಜೋಸೆಫ್, ಎಂ.ಎA. ಲಿಯಾಕತ್ ಆಲಿ, ಪ್ರಧಾನ ಕಾರ್ಯದರ್ಶಿಗಳಾಗಿ ದೋಲ್ಪಾಡಿ ಯಶೋಧರ, ಪಡಿಯೇಟಿರ ಕವಿತಾ, ಪೂರ್ಣಿಮಾ, ಖಾದರ್ ಮೂರ್ನಾಡು, ಅಚ್ಚಪಂಡ ಮಾಚಯ್ಯ, ಕಾರ್ಯದರ್ಶಿಗಳಾಗಿ ತೋಲಂಡ ನಾಣಯ್ಯ, ಯೂಸುಫ್ ಆಲಿ, ರಮೇಶ್ ರೈ, ವಸಂತ ಭಟ್, ಮಟ್ಟದ ಧನಂಜಯ, ಸಂಘಟನಾ ಕಾರ್ಯದರ್ಶಿಗಳಾಗಿ ಮಂಡೀರ ಸದಾ ಮುದ್ದಪ್ಪ, ಶಿವಕುಮಾರ್, ಚೆರಿಯಮನೆ ಭಾರ್ಗವ, ಹೊಟ್ಟೆಂಗಡ ಉತ್ತಯ್ಯ, ರವೂಫ್ ಶೇಖ್, ರವಿ ಗೌಡ, ಎಂ.ವೈ. ಮೊಯಿನ್, ಖಜಾಂಚಿಯಾಗಿ ಬಲ್ಲಚಂಡ ಚಂದನ್, ಸಹ ಕಾರ್ಯದರ್ಶಿಯಾಗಿ ಎಂ.ಇಬ್ರಾಹಿA ಅವರನ್ನು ನೇಮಕ ಮಾಡಲಾಗಿದೆ.
ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಚಿಮ್ಮುಣಿರ ಶ್ಯಾಮ್ ಕುಮಾರ್, ಎಂ.ಎA. ಹನೀಫ್, ಸುಭಾಷ್ ಆಳ್ವ, ಅಣ್ಣಚ್ಚಿರ ಸತೀಶ್, ಕೂಡಂಡ ಗಿರೀಶ್, ವಸಂತ, ಮುಕ್ಕಾಟಿರ ಮೀನಾ, ಲಕ್ಕಪನ ಕಾವೇರಮ್ಮ, ಎನ್.ಬಿ. ಮ್ಯಾಥ್ಯೂ, ಚಂಡೀರ ರಾಜ, ಸ್ವರ್ಣಲತಾ, ಹೆಚ್. ಜಗದೀಶ್, ಮಿನ್ನಂಡ ಅಪ್ಪಣ್ಣ, ಪ್ರೇಮಾ ಗೋಪಿ, ಜಲೀಲ್, ಇಸ್ಮಾಯಿಲ್ ಸೆಂಟಿಯಾರ್, ಹಫೀಝ್ ಉರ್ ರೆಹಮಾನ್, ಹೆಚ್.ಎಂ. ಹಂಸ, ಹೆಚ್.ಸಿ. ಮಂಜು ಹಾಗೂ ಲಿಲ್ಲಿಗೌಡ ಆಯ್ಕೆಯಾಗಿದ್ದಾರೆ ಎಂದು ಹಂಸ ಮಾಹಿತಿ ನೀಡಿದ್ದಾರೆ.