ಸೋಮವಾರಪೇಟೆ, ಮೇ. ೧೧: ಲೋಕೋಪಯೋಗಿ ಇಲಾಖೆ ಮೂಲಕ ಅಪೆಂಡಿಕ್ಸ್-ಇ ಯೋಜನೆಯ ೧ ಕೋಟಿ ಅನುದಾನದಡಿ ಪ್ರಗತಿಯಲ್ಲಿದ್ದ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಆಲೇಕಟ್ಟೆ ಮುಖ್ಯರಸ್ತೆ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ರಸ್ತೆ ಕಾಮಗಾರಿ ಪ್ರಾರಂಭಗೊAಡು ಚರಂಡಿ ಕೆಲಸದ ನಂತರ ಸ್ಥಗಿತಗೊಂಡಿತ್ತು. ರಸ್ತೆಯನ್ನು ಅಲ್ಲಲ್ಲಿ ಅಗೆದಿದ್ದರಿಂದ ಸಂಚಾರ ದುಸ್ತರವಾಗಿತ್ತು. ಇದನ್ನು ವಿರೋಧಿಸಿ ಮಾರ್ಚ್ ೨೮ರಂದು ಆಲೇಕಟ್ಟೆ ರಸ್ತೆ ನಿವಾಸಿಗಳು ಹೆದ್ದಾರಿ ತಡೆದು ಪ್ರತಿಭಟಿಸಿದ್ದರು. ಇದಾದ ಎರಡು ದಿನದಲ್ಲಿ ಮತ್ತೆ ರಸ್ತೆ ಕಾಮಗಾರಿ ಆರಂಭಗೊAಡು, ವೆಟ್‌ಮಿಕ್ಸ್ ಹಾಕಲಾಗಿತ್ತು.
ರಸ್ತೆಯನ್ನು ಕಾಂಕ್ರಿಟೀಕರಣ ಗೊಳಿಸುವ ಸಂಬAಧ ಹೆದ್ದಾರಿ ಬಂದ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳು ಕಳೆದ ಏಪ್ರಿಲ್ ಮೂರನೇ ವಾರದಲ್ಲಿ ಆದೇಶ ಹೊರಡಿಸಿ, ಏಪ್ರಿಲ್ ೨೪ರಿಂದ ಮೇ ೩೦ರವರೆಗೆ ರಸ್ತೆಯನ್ನು ಬಂದ್ ಮಾಡುವ ಬಗ್ಗೆ ತಿಳಿಸಿದ್ದರು. ಈ ಸಂದರ್ಭ ಗ್ರಾಮೀಣ ಭಾಗದಲ್ಲಿ ಸುಗ್ಗಿ ಉತ್ಸವಗಳು ನಡೆಯುತ್ತಿದ್ದುದರಿಂದ ರಸ್ತೆಯನ್ನು ಬಂದ್ ಮಾಡಿರಲಿಲ್ಲ.
ಇದೀಗ ಸುಗ್ಗಿ ಉತ್ಸವಗಳು ಮುಗಿದು ೧೦ ದಿನಗಳು ಕಳೆದಿದ್ದರೂ ರಸ್ತೆ ಕಾಮಗಾರಿ ಪ್ರಾರಂಭವಾಗಿಲ್ಲ. ಪ್ರಸ್ತುತ ರಸ್ತೆಯಲ್ಲಿ ವಾಹನಗಳು ಸಂಚರಿಸುವ ಸಂದರ್ಭ ಧೂಳು ಮೇಲೇಳುತ್ತಿದ್ದು, ಅಕ್ಕಪಕ್ಕದ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ. ಇದರೊಂದಿಗೆ ಮನೆ, ಅಂಗಡಿಗಳು ಧೂಳಿನಿಂದಾವೃತ್ತವಾಗುತ್ತಿದ್ದು, ಆದಷ್ಟು ಬೇಗ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳೆದ ವರ್ಷ ವಿವೇಕಾನಂದ ವೃತ್ತದಿಂದ ಆಲೇಕಟ್ಟೆಯ ಖಬರಸ್ತಾನದವರೆಗೆ ಮಳೆಹಾನಿ ಪರಿಹಾರ ನಿಧಿಯಡಿ ೧.೨೫ ಕೋಟಿ ವೆಚ್ಚದಲ್ಲಿ ೫೫೦ ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಇದರ ಮುಂದುವರೆದ ಕಾಮಗಾರಿಯನ್ನು ಅಪೆಂಡಿಕ್ಸ್-ಇ ಮೂಲಕ ೧೦೦ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಹಾನಗಲ್ಲುಬಾಣೆ ತಿರುವು ರಸ್ತೆಯವರೆಗೆ ೪೩೦ ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಬೇಕಿದೆ. ಈಗಾಗಲೇ ೪೩೦ ಮೀಟರ್ ಚರಂಡಿ ಕಾಮಗಾರಿ ಮುಕ್ತಾಯಗೊಂಡಿದ್ದು, ರಸ್ತೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇಂದಿನಿAದಲೇ ಕಾಮಗಾರಿ: ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ಕುಮಾರ್ ಅವರನ್ನು ‘ಶಕಿ’್ತ ಸಂಪರ್ಕಿಸಿದ ಸಂದರ್ಭ, ತಾ. ೧೨ರಿಂದಲೇ (ಇಂದಿನಿAದಲೇ) ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ ಸಂದರ್ಭ ಸುಗ್ಗಿ ಉತ್ಸವಗಳು ನಡೆಯುತ್ತಿದ್ದವು. ಹಾಗಾಗಿ ಒಂದು ವಾರ ಮುಂದೂಡಲಾಗಿತ್ತು. ನಂತರದ ದಿನಗಳಲ್ಲಿ ಕಾರ್ಮಿಕರು ಊರಿಗೆ ತೆರಳಿದ್ದರಿಂದ ಕೆಲಸ ಆರಂಭಿಸಲು ಸಾಧ್ಯವಾಗಿಲ್ಲ. ಇದೀಗ ಕಾಮಗಾರಿ ಆರಂಭಿಸುವAತೆ ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ತಾ. ೧೨ ರಿಂದ ಕೆಲಸ ಪ್ರಾರಂಭವಾಗಲಿದೆ. ೨೧ ದಿನಗಳ ಕಾಲ ಕ್ಯೂರಿಂಗ್‌ಗೆ ಸಮಯಾವಕಾಶ ಬೇಕಿದೆ. ಈ ಸಮಯದಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.