ಗೋಣಿಕೊಪ್ಪಲು, ಮೇ.೧೧: ಅಬಕಾರಿ ಇಲಾಖೆಯ ರಾಜ್ಯ ಆಯುಕ್ತರು ಇತ್ತೀಚೆಗೆ ಹೊರಡಿಸಿರುವ ಆದೇಶ ದಿಂದ ಜಿಲ್ಲೆಯಲ್ಲಿ ಮದ್ಯವನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ.
ಕೊಡಗು ಜಿಲ್ಲೆಯು ಗುಡ್ಡಗಾಡು ಪ್ರದೇಶವಾದ ಕಾರಣ ವಿದ್ಯುತ್ ಹಾಗೂ ನೆಟ್‌ವರ್ಕ್ ಸಮಸ್ಯೆ ಯಿಂದಾಗಿ ಆನ್‌ಲೈನ್‌ನಲ್ಲಿ ರಾತ್ರಿ ೯ ರಿಂದ ಬೆಳಿಗ್ಗೆ ೯ರವರೆಗೆ ಸಾಧ್ಯವಾಗುತ್ತಿಲ್ಲ. ಅವಧಿಯನ್ನು ಬೆಳಿಗ್ಗೆ ೯ ರಿಂದ ಸಂಜೆ ೬ರವರೆಗೆ ಬದಲಿಸಬೇಕು.
ಆನ್‌ಲೈನ್ ವ್ಯವಸ್ಥೆಯಡಿ ಇಂಡೆAಟ್ ಮಾಡುವ ವಿಚಾರದಲ್ಲಿ ಅನೇಕ ಸಮಸ್ಯೆಗಳಿರುವುದರಿಂದ ಇದನ್ನು ಸರಿ ಪಡಿಸುವಂತೆ ಒತ್ತಾಯಿಸಿ ಕಳೆದ ೨೫ ದಿನಗಳಿಂದ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗು ತ್ತಿದೆ. ಆದರೂ ಇಲಾಖೆ ಈ ಬಗ್ಗೆ ಕ್ರಮ ವಹಿಸಿಲ್ಲ ಇದರಿಂದಾಗಿ ಕೊಡಗು ಜಿಲ್ಲೆಯ ೨೬೦ ಸನ್ನದುದಾರರು ತಾ.೧೨ ರಂದು (ಇಂದು) ಒಂದು ದಿನ ಯಾವುದೇ ಮದ್ಯವನ್ನು ಖರೀದಿ ಮಾಡದೇ ಇರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ಮೂಲಕ ಸರ್ಕಾರದ ಮೇಲೆ ಒತ್ತಡ ತರಲಾಗುತ್ತದೆ ಎಂದು ಫೆಡರೇಷನ್ ಆಫ್ ವೈನ್ ಮರ್ಜೆಂಟ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಗುಮ್ಮಟೀರ ಕಿಲನ್ ಗಣಪತಿ ತಿಳಿಸಿದರು. ಈ ಬಗ್ಗೆ ಕೊಡಗು ಜಿಲ್ಲೆಯ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಜಗದೀಶ್ ನಾಯಕ್ ರವರಿಗೆ ಅಸೋಸಿಯೇಷನ್ ಪದಾಧಿಕಾರಿಗಳು ಮನವಿ ಪತ್ರ ನೀಡಿ ಸಮಸ್ಯೆ ಬಗೆ ಹರಿಸಲು ಒತ್ತಾಯಿಸಿದರು.
ಒತ್ತಾಯಗಳು
ರಾತ್ರಿ ೯ ರಿಂದ ಬೆಳಿಗ್ಗೆ ೯ ಗಂಟೆಯವರೆಗೆ ಇರುವ ಇ ಇಂಡೇAಟ್ ಅನ್ನು ಬದಲಿಸಿ, ಬೆಳಿಗ್ಗೆ ೯ ರಿಂದ ಸಂಜೆ ೬ ರವರೆಗೆ ಅವಕಾಶ ನೀಡಬೇಕು. ಕೊಡಗು ಗುಡ್ಡಗಾಡು ಪ್ರದೇಶ ಹಾಗೂ ಗ್ರಾಮೀಣ ಪ್ರದೇಶವಾಗಿರುವರಿಂದ ಈ ವ್ಯವಸ್ಥೆ ಕೈ ಬಿಡಬೇಕು. ಕೆ.ಎಸ್.ಬಿ.ಸಿ.ಎಲ್. ಡಿಪೋದಲ್ಲಿ ದಾಸ್ತಾನು ಕೊರತೆ ನೀಗಿಸಬೇಕು, ಹಾಗೂ ಡಿಪೋದಲ್ಲಿ ಲೋಡಿಂಗ್ ಅನ್ ಲೋಡಿಂಗ್ ವ್ಯವಸ್ಥೆ, ಕಾರ್ಮಿಕ ವ್ಯವಸ್ಥೆ ಸರಿ ಪಡಿಸಬೇಕು, ಕೆ.ಎಸ್.ಬಿ.ಸಿ.ಎಲ್. ಡಿಪೋದ ಕಾರ್ಯವು ರಾಜ್ಯದೆಲ್ಲೆಡೆ ಇರುವಂತೆ ಕೊಡಗಿನಲ್ಲಿ ಬೆಳಿಗ್ಗೆ ೯ ಗಂಟೆಗೆ ಆರಂಭವಾಗಬೇಕು. ಸಮಯದ ಪಾಲನೆ ನಡೆಯಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮನವಿಯಲ್ಲಿ ಮುಂದಿಡಲಾಗಿದ್ದು, ಉಪ ಆಯುಕ್ತರು ಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಅಧಿಕಾರಿಗಳಿಗೆ ಮನವಿ ನೀಡುವ ಸಂದರ್ಭ ಫೆಡರೇಶನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಪದಾಧಿಕಾರಿಗಳಾದ ವಾಟೇರಿರ ದೀರಜ್ ಬಿ.ಎ.ಮಹಾಬಲ, ದ್ಯಾನ್ ಸುಬ್ಬಯ್ಯ, ಕೆ.ಎಸ್.ಜಗದೀಶ್, ಪ್ರದೀಪ್ ಹಾಗೂ ಸೋಮೇಶ್ ಉಪಸ್ಥಿತರಿದ್ದರು.