ಕೂಡಿಗೆ, ಮೇ ೧೦: ಕೂಡಿಗೆ ಶೈನಿಂಗ್ ಸ್ಟಾರ್ ಯುವಕ ಸಂಘದ ವತಿಯಿಂದ ಎರಡು ದಿನಗಳ ಕಾಲ ನಡೆದ ಪ್ರಥಮ ವರ್ಷದ ಹೊನಲು ಬೆಳಕಿನ ಜೈ ಭೀಮ್ ಕಪ್ ವಾಲಿಬಾಲ್ ಪಂದ್ಯಾಟದ ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡ ಮಂಥರ್ ಗೌಡ ನೆರವೇರಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಕೂಟಗಳು ನಡೆಯುವುದರಿಂದ ಸ್ನೇಹ ಸಮ್ಮಿಲನದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಅದರ ಮೂಲಕ ಗ್ರಾಮದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರವಾಗುವುದು ಎಂದರು.
ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಕ್ರೀಡಾಕೂಟಗಳ ಆಯೋಜನೆಯಿಂದ ಒಂದೆಡೆ ಸೇರಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು, ಗ್ರಾಮದ ಪ್ರಗತಿಗೆ ಪೂರಕವಾದ ಅಂಶಗಳನ್ನು ಚರ್ಚಿಸಿ ಅಭಿವೃದ್ಧಿಗೊಳಿಸಲು ಸಹಕಾರಿಯಾಗಲಿದೆ ಎಂದರು.ಕೂಡುಮAಗಳೂರು ಬಿ.ಎಸ್.ಸಿ. ಚಿರು ತಂಡ ಪ್ರಥಮ ಸ್ಥಾನವನ್ನು ಪಡೆದು ನಗದು ಹಾಗೂ ಟ್ರೋಫಿಯನ್ನು ತನ್ನಾಗಿಸಿಗೊಂಡಿತು.
ದ್ವಿತೀಯ ಸ್ಥಾನವನ್ನು ಶೈನಿಂಗ್ ಸ್ಟಾರ್ ಕೂಡಿಗೆ, ತೃತೀಯ ಸ್ಥಾನವನ್ನು ಗಿರೀಶ್ ಫ್ರೆಂಡ್ಸ್ ಕೂಡ್ಲೂರು, ಚತುರ್ಥ ಪಿಆರ್‌ಎಸ್ ಕೂಡಿಗೆ ತಂಡ ಪಡೆದುಕೊಂಡವು.
ವೇದಿಕೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್, ಗುತ್ತಿಗೆದಾರ ಕೆ.ಸಿ. ಚಂದ್ರು, ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಗ್ರಾಮದ ಪ್ರಮುಖರಾದ ಗಣೇಶ್, ಕಿಟ್ಟಿ, ಚಂದ್ರು, ಗೋವಿಂದ ರಾಜ್, ಶೈನಿಂಗ್ ಸ್ಟಾರ್ ಯುವಕ ಸಂಘದ ಅಧ್ಯಕ್ಷ ಸಚಿನ್, ಪದಾಧಿಕಾರಿಗಳಾದ ರಂಜಿತ್, ಶರತ್, ಸುದರ್ಶನ, ಪ್ರಸಾದ್, ಮನೋಜ್ ಭಾಗವಹಿಸಿದ್ದರು.