ಸೋಮವಾರಪೇಟೆ,ಮೇ ೧೦: ಪಟ್ಟಣದಲ್ಲಿ ಕಳೆದ ತಾ. ೪ರಂದು ಬೆಳಕಿಗೆ ಬಂದ ಕಳ್ಳತನ ಪ್ರಕರಣವನ್ನು ಭೇದಿಸಲು ಪೊಲೀಸರು ೩ ತಂಡಗಳನ್ನು ರಚಿಸಿ ಕಾರ್ಯಾ ಚರಣೆಗೆ ಇಳಿದಿದ್ದು, ಈವರೆಗೆ ಕಳ್ಳರ ಸುಳಿವು ಪತ್ತೆಯಾಗಿಲ್ಲ ಎನ್ನಲಾಗಿದೆ.

ಬಾಣಾವರ ರಸ್ತೆ ನಿವಾಸಿ, ಕಾಫಿ ಬೆಳೆಗಾರ ಎನ್.ಎನ್.ರಮೇಶ್ ಅವರ ಮನೆಯಲ್ಲಿ ನಡೆದಿರುವ ಕಳ್ಳತನ ಪ್ರಕರಣವನ್ನು ಭೇದಿಸಲು ಸೋಮವಾರಪೇಟೆ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡAತೆ ಒಟ್ಟು ೩ ತಂಡಗಳನ್ನು ರಚಿಸಲಾಗಿದ್ದು, ಕಳ್ಳತನ ನಡೆದು ೬ ದಿನಗಳಾದರೂ ಸಣ್ಣ ಕುರುಹು ಸಹ ಸಿಕ್ಕಿಲ್ಲ ಎನ್ನಲಾಗಿದೆ.

ಎನ್.ಎನ್. ರಮೇಶ್ ಮತ್ತು ಕುಟುಂಬದವರು ಕಳೆದ ಏಪ್ರಿಲ್ ೨೬ ರಂದು ಬೆಂಗಳೂರಿ ನಲ್ಲಿರುವ ತಮ್ಮ ಸಂಬAಧಿಕರ ಮನೆಗೆ ತೆರಳಿದ್ದು, ಮೇ. ೪ರಂದು ಸೋಮವಾರಪೇಟೆಯ ಮನೆಗೆ ವಾಪಸ್ಸಾದ ಸಂದರ್ಭ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

೭ ದಿನಗಳ ಕಾಲ ಮನೆಗೆ ಬೀಗ ಹಾಕಿದ್ದನ್ನು ಗಮನಿಸಿರುವ ಕಳ್ಳರು, ಸಮಯ ಸಾಧಿಸಿ ಕಳ್ಳತನ ನಡೆಸಿ ಪರಾರಿ ಯಾಗಿದ್ದಾರೆ. ಮನೆಯ ಮಲಗುವ ಕೋಣೆಯ ಕಿಟಕಿಯ ಸರಳುಗಳನ್ನು ಮುರಿದು ಕಪಾಟಿನಲ್ಲಿಟ್ಟಿದ್ದ ಚಿನ್ನದ ಓಲೆ, ಒಂದು ಜೊತೆ ಮುತ್ತಿನ ಓಲೆ, ನಗದು ಹಣ ಅಪಹರಿಸಿದ್ದಾರೆ.

ಎನ್.ಎನ್.ರಮೇಶ್ ಅವರು ಸೋಮವಾರಪೇಟೆ ಠಾಣೆಗೆ ದೂರು ನೀಡಿದ ಹಿನ್ನೆಲೆ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಸೇರಿದಂತೆ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಈ ಪ್ರಕರಣವನ್ನು ಭೇದಿಸಲು ೩ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆಸಿದ್ದಾರೆ. ಸುತ್ತಮುತ್ತಲಿನ ಸಿ.ಸಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಈವರೆಗೆ ಸಣ್ಣ ಕುರುಹು ಲಭಿಸಿಲ್ಲ ಎನ್ನಲಾಗಿದೆ.