ವೀರಾಜಪೇಟೆ, ಮೇ ೧೦: ವೀರಾಜಪೇಟೆಯ ನಗರದ ನಿವಾಸಿಗಳು ಅನುಭವಿಸುತ್ತಿರುವ ಕೆಲವು ಮೂಲ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ನಾಗರಿಕ ಸಮಿತಿಯಿಂದ ತಾ. ೧೧ ರÀಂದು (ಇಂದು) ಸಾಂಕೇತಿಕ ಪ್ರತಿಭಟನೆ ನಡೆಯಲಿದೆ.

ಇತ್ತೀಚೆಗೆ ಹೆಚ್ಚಿಸಿರುವ ಮನೆ ಕಂದಾಯ, ನೀರಿನ ಕರ, ಮೀನು-ಮಾಂಸ ಮಾರಾಟದಲ್ಲಿ ಅನುಸರಿಸುತ್ತಿರುವ ಜನವಿರೋಧಿ ನೀತಿ, ಮಲೆತಿರಿಕೆ ಬೆಟ್ಟದ ಅವೈಜ್ಞಾನಿಕ ತಡೆಗೋಡೆ ನಿರ್ಮಾಣ, ಪಂಚಾಯಿತಿಗೆ ಸೇರಿದ ರಸ್ತೆಗಳ ನಿರ್ವಹಣೆ ಸರಿಯಿಲ್ಲದೆ ಇರುವುದು ಹಾಗೂ ಇತರ ಪ್ರಮುಖ ಸಮಸ್ಯೆಗಳನ್ನು ನಾಗರಿಕ ಸಮಿತಿ ಕೈಗೆತ್ತಿಕೊಂಡಿದೆ. ಪ್ರತಿಭಟನೆ ಅಂಗವಾಗಿ ಗಡಿಯಾರ ಕಂಬದಿAದ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಚಾಲಕ ಡಾ. ಐ.ಆರ್. ದುರ್ಗಾ ಪ್ರಸಾದ್ ತಿಳಿಸಿದ್ದಾರೆ. ನಾಗರಿಕ ಸಮಿತಿಯ ಈ ಸಾಂಕೇತಿಕ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ, ಡಿ.ವೈ.ಎಫ್.ಐ. ಹಾಗೂ ಇತರ ಸಂಘ-ಸAಸ್ಥೆಗಳು ಕೈಜೋಡಿಸಿವೆ.