ಮಡಿಕೇರಿ, ಮೇ ೧೦: ನಗರದ ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಶ್ರೀ ಮಾರಿಯಮ್ಮ ದೇವಿಯ ಬೇವಿನ ಸೊಪ್ಪಿನ ಶಕ್ತಿ ಕರಗೋತ್ಸವಕ್ಕೆ ಚಾಲನೆ ನೀಡಲಾಯಿತು.
ಉತ್ಸವದ ಅಂಗವಾಗಿ ಪಂಪಿನಕೆರೆಯಿAದ ದೇವಾಲಯದ ತನಕ ಮೆರವಣಿಗೆ ನಡೆಯಿತು. ತಾ. ೮ ರಿಂದ ಆರಂಭಗೊAಡಿರುವ ಉತ್ಸವವು ತಾ. ೧೧ ರವರೆಗೆ ನಡೆಯಲಿದೆ.
ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಈ ವಿಶೇಷ ಕರಗೋತ್ಸವ ನಡೆಯುತ್ತಿದ್ದು, ಹಿಂದಿನ ಕಾಲದಲ್ಲಿ ಭೀಕರ ಸಾಂಕ್ರಮಿಕ ರೋಗಗಳಿಂದ ಊರಿನಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ರೋಗವನ್ನು ಹೋಗಲಾಡಿಸಲು ರಾಜರ ಕಾಲದಿಂದಲೇ ಊರಿನ ಹಿರಿಯರು ಸೇರಿ ನಾಡಿನ ಸುಭಿಕ್ಷೆಗಾಗಿ ಶಕ್ತಿ ದೇವತೆಗಳ ಪ್ರಾರ್ಥನೆಯೊಂದಿಗೆ ಕರಗ ಆರಾಧನೆ ಆರಂಭವಾಯಿತು . ಅದರಲ್ಲೂ ವಿಶೇಷವಾಗಿ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಆಗಿನ ಕಾಲದಿಂದಲೇ ಸಾಂಕ್ರಮಿಕ ರೋಗಗಳನ್ನು ಊರಿನಿಂದ ಹೊರಗಟ್ಟಲು ಬೇವಿನ ಸೊಪ್ಪಿನ ಶಕ್ತಿ ಕರಗೋತ್ಸವ ಆರಂಭಿಸಲಾಯಿತು ಎಂಬ ಪ್ರತೀತಿ ಇದೆ.
ತಾ. ೧೧ ರಂದು ಸಂಜೆ ದೇವಾಲಯದಲ್ಲಿ ದೇವಿಗೆ ವಿಶೇಷವಾದ ದೀಪಗಳ ಆರಾಧನೆಯ ನಂತರ ಕರಗಗಳ ವಿಸರ್ಜನೋತ್ಸವ ನಡೆಯಲಿದೆ.