ಮಡಿಕೇರಿ, ಮೇ ೧೦: ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ. ಅಂಬೇಡ್ಕರ್ ಅವರ ೧೩೧ನೇ ಜನ್ಮ ದಿನಾಚರಣೆ ಮತ್ತು ದಲಿತ ಜಾಗೃತಿ ಸಮಾವೇಶ ತಾ. ೨೯ ರಂದು ನಡೆಯಲಿದ್ದು, ಇದರ ಪ್ರಯುಕ್ತ ಮಡಿಕೇರಿ ತಾಲೂಕು ಸಮಿತಿ ವತಿಯಿಂದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ತಾಲೂಕು ಸಂಚಾಲಕ ಎ.ಪಿ. ದೀಪಕ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು “ಮಹಿಳೆಯರಿಗೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಕೊಡುಗೆ” ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದ್ದು, ತಾ. ೨೦ ರೊಳಗೆ ಪ್ರಬಂಧವನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಪ್ರಬಂಧಗಳÀನ್ನು ಈ ಜeeಠಿಚಿಞಜeeಠಿuಚಿಠಿ@gmಚಿiಟ.ಛಿom ವಿಳಾಸಕ್ಕೆ ಈ-ಮೇಲ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೬೧೧೭೬೬೭೧೩ ನ್ನು ಸಂಪರ್ಕಿಸಬಹುದಾಗಿದೆ ಎಂದು ದೀಪಕ್ ಹೇಳಿದ್ದಾರೆ.