ಮಡಿಕೇರಿ, ಮೇ.೧೧; ಕಂಡAಗಾಲ ಬದ್ರಿಯಾ ಜುಮಾ ಮಸೀದಿ ಸ್ವಲಾತ್ ವಾರ್ಷಿಕ ಮತ್ತು ಮತ ಸೌಹಾರ್ದ ಸಮ್ಮೇಳನ ತಾ. ೧೫ ರಂದು ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಕಂಡAಗಾಲ ಜಮಾ ಅತ್‌ನ ಉಪಾಧ್ಯಕ್ಷ ಎಂ.ಎ. ಮುನೀರ್, ಕಂಡAಗಾಲ ಬದ್ರಿಯಾ ಜುಮಾ ಮಸೀದಿಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಸ್ವಲಾತ್ ವಾರ್ಷಿಕ ಮತ್ತು ಮತ ಸೌಹಾರ್ದ ಸಮ್ಮೇಳನ ತಾ. ೧೫ ರಂದು ಬೆಳಿಗ್ಗೆ ೧೦ ಗಂಟೆಯಿAದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಎಂ.ಉ.ಮಮ್ಮದ್ ನೆರವೇರಿಸುವರು. ೧೧ ಗಂಟೆಗೆ ಮತ ಸೌಹಾರ್ದ ಸಮ್ಮೇಳನ ನಡೆಯಲಿದ್ದು, ಕಂಡAಗಾಲದ ಖತೀಬರಾದ ಶಿಹಾಬ್ ಸದಿ ನೆರವೇರಿಸುವರು. ಮುಖ್ಯ ಭಾಷಣಕಾರರಾಗಿ ಡಾ. ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲಿ ಸಖಾಫಿ ಕಕ್ಕಿಂಜೆ ಆಗಮಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಖತೀಬರಾದ ಸಯ್ಯದ್ ಅಹ್ಮದ್ ಖಾಸಿಂ ಸಖಾಫಿ ಅಲ್ ಆದಿ, ವಕೀಲ ಬಿ.ರತ್ನಾಕರ ಶೆಟ್ಟಿ, ಬಿಟ್ಟಂಗಾಲ ಗ್ರಾ.ಪಂ.ಸದಸ್ಯ ಮೂಕಚಂಡ ಟಿ.ಪ್ರಸನ್ನ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಂಜೆ ೭ಗಂಟೆಗೆ ಸ್ವಲಾತ್ ದುಅ ಪ್ರಾರ್ಥನೆ ನಡೆಯಲಿದ್ದು, ಎಮ್ಮೆಮಾಡುವಿನ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ತಂಙಳ್ ನೆರವೇರಿಸಲಿರುವರು. ಅಂದು ಅಪರಾಹ್ನ ೨.೩೦ ಗಂಟೆಗೆ ತಬರುಕ್ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ ಎಂದು ಮುನೀರ್ ಹೇಳಿದರು. ಗೋಷ್ಠಿಯಲ್ಲಿ ಕಂಡAಗಾಲದ ಖತೀಬರಾದ ಶಿಹಾಬ್ ಸಅದಿ, ಕಂಡAಗಾಲ ಜಮಾಅತ್ ಕಾರ್ಯದರ್ಶಿ ಎಂ.ಹೆಚ್.ಶಿಹಾಬ್, ಸದಸ್ಯರುಗಳಾದ ಎಂ.ಯು.ಹಫೀಳ್, ಎಂ.ಐ ಬಶೀರ್ ಇದ್ದರು.