ವೀರಾಜಪೇಟೆ, ಮೇ ೧೦: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಮರ ಗ್ರಾಮದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಫಲಾನುಭಾವಿಗಳಿಗೆ ಗ್ಯಾಸ್ ಸಂಪರ್ಕ ವಿತರಣೆ ಕಾರ್ಯಕ್ರಮ ತೋಮರ ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆದಮುಳ್ಳೂರು ಗ್ರಾ.ಪಂ. ಸದಸ್ಯ ಪರಮೇಶ್ವರ ಅವರು ಎಲ್ಲಾ ಸಮುದಾಯದಲ್ಲಿ ಕಾರ್ಮಿಕರ ವರ್ಗ ಎಂಬುದಿದೆ. ಸಮಾಜವು ಶ್ರಮಿಕರನ್ನು ಗೌರವಿಸುವಂತಾಗಬೇಕು.

ಮಾಲೀಕ ಮತ್ತು ಕಾರ್ಮಿಕರ ನಡುವೆ ತಾರತಮ್ಯ ದೂರವಾದಲ್ಲಿ ಉತ್ತಮ ಸಮಾಜ ನಿರ್ಮಾಣವಾಗುವಲ್ಲಿ ಸಂದೇಹವಿಲ್ಲ. ಪ್ರಧಾನಮಂತ್ರಿಗಳ ದೂರದೃಷ್ಟಿಯ ಪ್ರ‍್ರತಿಫಲವಾದ ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಗೆಯಿಂದ ಮುಕ್ತವಾಗಿಸಲು ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದೆ.

ಯೋಜನೆಯ ಭಾಗವಾಗಿ ತೋಮರ ಗ್ರಾಮದ ಯೋಜನೆಗೆ ಆಯ್ಕೆಗೊಂಡ ಮಹಿಳೆಯರಿಗೆ ಉಚಿತ ಗ್ಯಾಸ್ ವಿತರಣೆ ಮಾಡುತ್ತಿದ್ದೇವೆ. ಯೋಜನೆಯು ಸದುಪಯೋಗ ವಾಗಬೇಕು ಎಂದು ಹೇಳಿದರು.

ಶ್ರೀ ಸುಬ್ರಮಣ್ಯ ಭಾರತ್ ಗ್ಯಾಸ್ ಏಜೆನ್ಸಿಯ ಮಾಲೀಕ ಪ್ರವೀಣ್ ಮಾದಪ್ಪ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ತೋಮರ ವಾರ್ಡಿನ ಸದಸ್ಯ ಕೆ.ಎಂ. ರಾಮಯ್ಯ ಉಪಸ್ಥಿತರಿದ್ದರು.

ಗ್ರಾಮದ ಯೋಜನೆಗೆ ಆಯ್ಕೆಗೊಂಡ ೧೬ ಮಂದಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣೆ ಮಾಡಲಾಯಿತು. ಗ್ರಾಮದ ಗ್ರಾಮಸ್ಥರು ಮಹಿಳೆಯರು ಹಾಜರಿದ್ದರು.