ಕೂರ್ಗ್ ಹಂರ‍್ಸ್ ಚಾಂಪಿಯನ್
ಸೋಮವಾರಪೇಟೆ, ಮೇ ೧೦: ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಪರಸ್ಪರ ಸಾಮರಸ್ಯ ವೃದ್ಧಿಯಾಗುತ್ತದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅವರು ಅಭಿಪ್ರಾಯಿಸಿದರು.
ಸಮೀಪದ ಕಲ್ಕಂದೂರು ಗ್ರಾಮದ ಟೀಮ್ ೯೬ ವತಿಯಿಂದ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹಲವಷ್ಟು ಕ್ರೀಡಾಪ್ರತಿಭೆಗಳು ಎಲೆಮರೆಯ ಕಾಯಿಯಂತಿದ್ದು, ಪ್ರೋತ್ಸಾಹದ ಕೊರತೆ ಕಾಡುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ದೊರೆತಲ್ಲಿ ರಾಜ್ಯ ಹಾಗೂ ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ತೋರುತ್ತಾರೆ. ಈ ನಿಟ್ಟಿನಲ್ಲಿ ಸಂಘ-ಸAಸ್ಥೆಗಳು ಹೆಚ್ಚು ಕ್ರೀಡಾಕೂಟಗಳನ್ನು ಆಯೋಜಿಸಬೇಕೆಂದು ಮನವಿ ಮಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ರಾಜು ಅವರು, ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿಯೇ ಕ್ರೀಡೆಯತ್ತಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಿಂದಲೂ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿದೆ. ನಿರಂತರ ಅಭ್ಯಾಸ, ಗುರಿಯೊಂದಿಗೆ ಪರಿಶ್ರಮ ವಹಿಸಿದರೆ ಸಾಧನೆ ಸಾಧ್ಯ ಎಂದರು.
ವೇದಿಕೆಯಲ್ಲಿ ಒಕ್ಕಲಿಗರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಶಾಂತಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಗ್ಗನ ಅನಿಲ್, ಟೀಮ್ ೯೬ ಅಧ್ಯಕ್ಷ ಅದ್ರಾಮ, ಅಬ್ದುಲ್ ಸಲಾಂ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕುಂಬೂರು ಕೂರ್ಗ್ ಹಂಟರ್ಸ್ ತಂಡಕ್ಕೆ ಜಯ
ಸಮೀಪದ ಕಲ್ಕಂದೂರು ಗ್ರಾಮದ ಟೀಮ್ ೯೬ ವತಿಯಿಂದ ಯಡೂರು ಬಿಟಿಸಿಜಿ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೂರ್ಗ್ ಹಂಟರ್ಸ್ ಕುಂಬೂರು ತಂಡವು ಪ್ರಥಮ ಸ್ಥಾನ ಗಳಿಸುವ ಮೂಲಕ ಟ್ರೋಫಿ ಹಾಗೂ ೧೫ಸಾವಿರ ನಗದನ್ನು ಪಡೆಯಿತು. ವಿನಾಯಕ ಸಿ ಸಿ ಕುಸೂಬೂರು ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ಟ್ರೋಫಿ ಹಾಗೂ ೧೦ ಸಾವಿರ ನಗದು ಪಡೆದರೆ, ಟೀಮ್ ೯೬ ತಂಡವು ತೃತೀಯ ಸ್ಥಾನಗಳಿಸಿ ಟ್ರೋಫಿಯೊಂದಿಗೆ ೫ ಸಾವಿರ ನಗದು ಬಹುಮಾನಕ್ಕೆ ಭಾಜನವಾಯಿತು. ಪಂದ್ಯಾಟದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ನಾಗಿ ಕಿರಣ್ ಕುಸೂಬೂರು, ಉತ್ತಮ ಬೌಲರ್ ಆಗಿ ಫ್ರೆಂಡ್ಸ್ ಕ್ರಿಕೆಟರ್ಸ್ನ ರಮೀಝ್, ಸರಣಿ ಸರ್ವೋತ್ತಮ ಪ್ರಶಸ್ತಿಯನ್ನು ಹುಸೇನ್ ಕುಂಬೂರು, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ರೋಹಿತ್ ಕುಂಬೂರು ಪಡೆದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಟೀಮ್ ೯೬ ತಂಡದ ಅಧ್ಯಕ್ಷ ಅದ್ರಾಮ ವಹಿಸಿದ್ದರು. ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷ ಮಿಥುನ್, ಸದಸ್ಯ ಪ್ರಕಾಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರುಳೀಧರ್, ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ, ಯಡೂರು ವೈಸಿಸಿ ಕ್ರಿಕೆಟರ್ಸ್ ಅಧ್ಯಕ್ಷ ಸುರೇಶ್, ಪ್ರಮುಖರಾದ ಪ್ರೀತಮ್ ಗೌಡ, ನಾಗರಾಜ್ ಕಲ್ಕಂದೂರು ಅವರುಗಳು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು. ಅಬ್ದುಲ್ ಸಲಾಮ್, ನಾಗರಾಜ್ ಕಲ್ಕಂದೂರು, ಫಾರೂಕ್, ಹಬೀಬ್, ಇರ್ಷಾದ್, ಉಮ್ಮರ್ ಸೇರಿದಂತೆ ಇತರರು ಕ್ರೀಡಾಕೂಟ ನಿರ್ವಹಿಸಿದರು.