(ಕೋವರ್ ಕೊಲ್ಲಿ ಇಂದ್ರೇಶ್)

ಮಡಿಕೇರಿ, ಮೇ ೧೦ : ಬ್ರೆಜಿಲ್‌ನಲ್ಲಿನ ಹಿಮಪಾತದ ಕಾರಣದಿಂದಾಗಿ ಅರೇಬಿಕಾ ಕಾಫಿ ಬೆಳೆ ನಷ್ಟ ಆಗಿದ್ದು ಅಂರ‍್ರಾಷ್ಟಿçÃಯ ಮಾರುಕಟ್ಟೆಗೆ ಸರಬರಾಜು ಕಡಿಮೆ ಆದ ಕಾರಣಕ್ಕೆ ಕಳೆದ ಆರು ತಿಂಗಳಿನಿAದ ಅರೇಬಿಕಾ ಪಾರ್ಚ್ಮೆಂಟ್ ಕಾಫಿ ದರ ಗರಿಷ್ಠ ಬೆಲೆ ಏರಿಕೆ ದಾಖಲಿಸಿತ್ತು. ಕಳೆದ ವರ್ಷದ ಅಕ್ಟೋಬರ್ ವೇಳೆಗೆ ಸುಮಾರು ೧೦,೫೦೦ -೭೦೦ ರ ಆಸು ಪಾಸಿನಲ್ಲಿದ್ದ ಅರೇಬಿಕಾ ಪಾರ್ಚ್ಮೆಂಟ್ ಕಾಫಿ ದರ ಫೆಬ್ರ‍್ರವರಿ ತಿಂಗಳಿನಲ್ಲಿ ೫೦ ಕೆಜಿ ಚೀಲವೊಂದಕ್ಕೆ ೧೬,೬೦೦ ರೂಪಾಯಿಗಳ ಸಾರ್ವಕಾಲಿಕ ಏರಿಕೆ ಕಂಡಿತ್ತು. ಇದೀಗ ೧೫,೮೦೦ ರೂಪಾಯಿಗಳ ಆಸುಪಾಸಿನಲ್ಲಿ ವಹಿವಾಟು ಇದೆ.

ಅರೇಬಿಕಾ ದರ ಏರಿಕೆಯನ್ನು ರೋಬಸ್ಟಾ ಕಾಫಿ ಬೆಳೆಗಾರರು ಗಮನಿಸಿ ನಿರಾಶರಾಗಿದ್ದರು. ಏಕೆಂದರೆ ಅರೇಬಿಕಾ ಕಾಫಿ ದರ ಚೀಲವೊಂದಕ್ಕೆ ೫೦೦೦ ರೂಪಾಯಿಗಳ ಏರಿಕೆ ದಾಖಲಿಸಿದರೂ ರೋಬಸ್ಟಾ ಕಾಫಿ ದರ ಚೀಲಕ್ಕೆ ಕೇವಲ ೧೦೦-೩೦೦ ರೂಪಾಯಿಗಳ ಏರಿಕೆ ದಾಖಲಿಸಿತ್ತು. ಇದೀಗ ರೋಬಸ್ಟಾ ಕಾಫಿ ಬೆಳೆಗಾರರೂ ಸಂತಸ ಪಡುವ ಸುದ್ದಿ ಬಂದಿದೆ. ಕಳೆದ ಎರಡು ತಿಂಗಳ ಹಿಂದೆ ೫೦ ಕೆಜಿ ಚೀಲಕ್ಕೆ ೭೨೦೦-೩೦೦ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ರೋಬಸ್ಟಾ ಕಾಫಿ ದರ ಸೋಮವಾರ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಮಾರುಕಟ್ಟೆಯಲ್ಲಿ ರೂ. ೧೦ ಸಾವಿರ ರೂಪಾಯಿಗಳಿಗೆ ಮಾರಾಟವಾಗಿ ಸಾರ್ವಕಾಲಿಕ ಏರಿಕೆ ದಾಖಲಿಸಿದೆ. ಮಂಗಳವಾರ ಮಾರುಕಟ್ಟೆಯಲ್ಲಿ ಅಲ್ಪ ಕುಸಿತ ಕಂಡರೂ ೯೬೦೦ ರಿಂದ ೯೮೦೦ ದರ ಇದೆ.

(ಮೊದಲ ಪುಟದಿಂದ) ಕಾಫಿ ಮಾರುಕಟ್ಟೆಯ ಇತಿಹಾಸದಲ್ಲೇ ರೋಬಸ್ಟಾ ಪಾರ್ಚ್ಮೆಂಟ್ ಕಾಫಿಗೆ ಈ ದರ ದೊರೆತಿರುವುದು ಇದೇ ಮೊದಲಾಗಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ನಡುವೆಯೂ ಇಷ್ಟೊಂದು ಏರಿಕೆ ದಾಖಲಿಸಿರುವುದು ಅಚ್ಚರಿಯ ಬೆಳವಣಿಗೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಯುದ್ಧ ನಡೆಯದಿದ್ದರೆ ಈ ದರ ಇನ್ನಷ್ಟು ಅಧಿಕ ಆಗಿರುತಿತ್ತು ಎಂದು ಅವರು ಹೇಳಿದ್ದಾರೆ. ಮಾರುಕಟ್ಟೆ ಮೂಲಗಳ ಪ್ರಕಾರ ಈಗಾಗಲೇ ಯುದ್ಧದ ಕಾರಣದಿಂದ ಅಂರ‍್ರಾಷ್ಟಿçÃಯ ಮಾರುಕಟ್ಟೆಗೆ ಕಾಫಿ ಕಡಿಮೆ ಆಗಿದೆ. ಜತೆಗೆ ಸಾಗಾಟ ವೆಚ್ಚವೂ ತುಂಬಾ ದುಬಾರಿ ಆಗಿದ್ದು ಕಂಟೇನರ್‌ಗಳ ಕೊರತೆಯೂ ಇದಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ನಾಪೋಕ್ಲುವಿನ ಡಾ ಸಣ್ಣುವಂಡ ಕಾವೇರಪ್ಪ ಅವರು ಕಾಫಿ ಬೆಳೆಯುವ ಪ್ರಮುಖ ರಾಷ್ಟçಗಳಾದ ಬ್ರೆಜಿಲ್, ವಿಯಟ್ನಾಂ, ಕೊಲಂಬಿಯಾ ಮುಂತಾದ ರಾಷ್ಟçಗಳಲ್ಲಿ ಕಾಫಿಯ ದರ ಸಮತೋಲನಕ್ಕಾಗಿ ಕಾಯ್ದಿರಿಸುತ್ತಿದ್ದ ಬಫರ್ ಸ್ಟಾಕ್ ಕೂಡ ಕಡಿಮೆ ಆಗಿದ್ದು ದರ ಏರಿಕೆಗೆ ಇದೂ ಒಂದು ಕಾರಣ ಎಂದರಲ್ಲದೆ ಮುಂದಿನ ಎರಡು ವರ್ಷ ಕಾಫಿ ದರ ಏರುಮುಖವಾಗಿ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೊದಲು ಅರೇಬಿಕಾ ಕಾಫಿ ದರ ಏರಿಕೆಯಿಂದ ದೇಶದ ಶೇಕಡಾ ೨೮ ರಷ್ಟು ಕಾಫಿ ಬೆಳೆಗಾರರಿಗೆ ಮಾತ್ರ ಅನುಕೂಲ ಆಗಿತ್ತು. ಏಕೆಂದರೆ ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ೩.೬ ಲಕ್ಷ ಟನ್‌ಗಳಲ್ಲಿ ಅರೇಬಿಕಾ ಪಾಲು ಸುಮಾರು ಒಂದು ಲಕ್ಷ ಟನ್‌ಗಳಷ್ಟಿದೆ. ರೋಬಸ್ಟಾದ ಉತ್ಪಾದನೆ ೨.೫ ಲಕ್ಷ ಟನ್ ಗಳಿಗೂ ಹೆಚ್ಚಿದೆ. ದೇಶದ ಉತ್ಪಾದನೆಯ ಶೇಕಡಾ ೩೦ ರಷ್ಟು ಪಾಲು ಹೊಂದಿರುವ ಕೊಡಗಿನಲ್ಲಿ ವಾರ್ಷಿಕ ೧.೩ ಲಕ್ಷ ಟನ್ ಗಳಷ್ಟು ಕಾಫಿ ಉತ್ಪಾದನೆ ಆಗುತಿದ್ದು ಇದರಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಾಗಿ ಅರೇಬಿಕಾ ಬೆಳೆಯಲಾಗುತ್ತಿದೆ. ಒಟ್ಟು ಉತ್ಪಾದನೆ ೨೦ ಸಾವಿರ ಟನ್‌ಗಳಷ್ಟಿದ್ದು, ಮಡಿಕೇರಿ, ವೀರಾಜಪೇಟೆ , ಪೊನ್ನಂಪೇಟೆ ತಾಲೂಕಿನಲ್ಲಿ ರೋಬಸ್ಟಾ ಬೆಳೆ ಅಧಿಕವಾಗಿದ್ದು ಜಿಲ್ಲೆಯ ರೋಬಸ್ಟಾ ಉತ್ಪಾದನೆ ೧.೧೦ ಲಕ್ಷ ಟನ್‌ಗಳಾಗಿದೆ. ಇದೀಗ ರೋಬಸ್ಟಾ ದರ ಏರಿಕೆಯ ಕಾರಣದಿಂದ ಜಿಲ್ಲೆಯ ಶೇ. ೭೫ ಕ್ಕೂ ಅಧಿಕ ಕಾಫಿ ಬೆಳೆಗಾರರಿಗೆ ಅನುಕೂಲವಾಗುವ ಆಶಾಭಾವನೆ ಇದೆ.