ಪೊನ್ನಂಪೇಟೆ, ಮೇ ೧೦: ತಾ.೯ ರಂದು ಈಚೂರು ಗ್ರಾಮದ ಕಡೆಯಿಂದ ಕೇರಳದ ಕಡೆಗೆ, ಕೇರಳ ರಾಜ್ಯಕ್ಕೆ ಸೇರಿದ ಬೊಲೆರೋ ಮಹೇಂದ್ರ ಪಿಕ್ ಅಪ್ ವಾಹನ (ಕೆ.ಎಲ್.೧೦.ಬಿ.ಎ.೬೯೩೪)ದಲ್ಲಿ ೫ ಬೀಟೆ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ವೀರಾಜಪೇಟೆ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿದಳದ ಸಿಬ್ಬಂದಿ ದಾಳಿ ನಡೆಸಿ ೬ ಲಕ್ಷ ಮೌಲ್ಯದ ಪಿಕ್ ಅಪ್ ವಾಹನ ಮತ್ತು ೩.೫ಲಕ್ಷ ಮೌಲ್ಯದ ಬೀಟೆ ಮರವನ್ನು ವಶಕ್ಕೆ ಪಡೆದುಕೊಂಡು ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಎ.ಕೆ.ರಾಜು ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
(ಮೊದಲ ಪುಟದಿಂದ) ಕಾರ್ಯಾಚರಣೆಯಲ್ಲಿ ಸಿಐಡಿ ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್ ಚಂದ್ರ ರವರ ನಿರ್ದೇಶನದ ಮೇರೆಗೆ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿದಳದ ಆರಕ್ಷಕ ಉಪನಿರೀಕ್ಷಕರಾದ ವೀಣಾನಾಯಕ್, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ. ಬೀನಾ, ಎಸ್.ಎಂ. ಯೋಗೇಶ್, ಪಿ.ಯು ಮುನೀರ್, ಆರ್. ನಂದಕುಮಾರ್ ಪಾಲ್ಗೊಂಡಿದ್ದರು.