ಮಡಿಕೇರಿ, ಮೇ ೧೦: ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾ ಅಕಾಡೆಮಿಯ ವತಿಯಿಂದ ಆಯೋಜಿಸಲಾಗಿದ್ದ ಕಲಾ ಮತ್ತು ನೃತ್ಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾವೇರಿ ಸಭಾಂಗಣದಲ್ಲಿ ನೆರವೇರಿತು.
ಶಿಬಿರದ ಸಂಚಾಲಕರು ಮತ್ತು ಸಂಸ್ಥೆಯ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ ಮಾತನಾಡಿ, ಮಕ್ಕಳಿಗೆ ವಿಷಯಾ ಧಾರಿತ ಶಿಕ್ಷಣದ ಜೊತೆಗೆ ಕೌಶಲ್ಯ ಆಧಾರಿತ ಶಿಕ್ಷಣವು ಅತ್ಯವಶ್ಯ ಈ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಸಮಾರAಭದ ಮುಖ್ಯ ಅತಿಥಿಗಳಾದ ಕೆಂಬಡತAಡ ಬೀನಾ ಭಾರತೀ ಮಾತನಾಡಿ, ಶಿಬಿರದ ಕಾರ್ಯವೈಖರಿಯನ್ನು ಪ್ರಶಂಸಿಸಿದರಲ್ಲದೆ, ವಿದ್ಯಾರ್ಥಿಗಳಲ್ಲಿ ಶಿಬಿರದ ಕಲಿಕೆಯನ್ನು ಮುಂದುವರಿಸುವAತೆ ನೀಡಿದರು.
ಶಿಬಿರದ ತರಬೇತುದಾರರಾದ ತೆಕ್ಕಡ ಬಿ ಕುಮಾರಸ್ವಾಮಿ ಮತ್ತು ಪ್ರೀತ ಕೃಷ್ಣ ರವರು ಮಾತನಾಡಿದರು.
ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ೪೦ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಶಿಬಿರಾರ್ಥಿ ಕಾವೇರಮ್ಮ ಪ್ರಾರ್ಥನೆ, ಶಿಕ್ಷಕರಾದ ಪ್ರಶಾಂತ್ ಸ್ವಾಗತ ಮತ್ತು ಕೃಷ್ಣಪ್ಪ ವಂದಿಸಿದರು.