ಮಡಿಕೇರಿ, ಮೇ ೧೧: ಹಾಕಿ ಇಂಡಿಯಾ ವತಿಯಿಂದ ಮಣಿಪುರದ ಇಂಪಾಲ್‌ನಲ್ಲಿ ನಡೆಯುವ ರಾಷ್ಟಿçÃಯ ಸಬ್‌ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಹಾಕಿ ಕರ್ನಾಟಕ ತಂಡದ ನಾಯಕಿಯಾಗಿ ಕೊಡಗಿನ ಮಾಳೇಟಿರ ದಿಶಾ ಪೊನ್ನಮ್ಮ ಆಯ್ಕೆಯಾಗಿದ್ದಾಳೆ. ಇವರೊಂದಿಗೆ ಜಿಲ್ಲೆಯ ಇತರ ೮ ಕ್ರೀಡಾಪಟುಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
(ಮೊದಲ ಪುಟದಿಂದ) ಪುಳ್ಳಂಗಡ ನಿಧಿ ನೀಲಮ್ಮ, ಚೆಪ್ಪುಡೀರ ಮನೀಷ್ ಪೊನ್ನಮ್ಮ, ಪಟ್ಟಮಾಡ ಬೊಳ್ಳಮ್ಮ, ಲಿಖಿತಾ ಪಿ.ಜೆ., ಶ್ರಾವ್ಯ ಪಿ.ಡಿ., ರಕ್ಷಿತಾ ಜೆ., ರಶ್ಮಿ ಎಂ. ತಂಡದಲ್ಲಿದ್ದಾರೆ. ಕರ್ನಾಟಕ ತಂಡ ಇರುವ ಗುಂಪಿನಲ್ಲಿ ಹಾಕಿ ಬಿಹಾರ್, ಹಾಕಿ ವಿಜೋರಾಂ, ತೆಲಂಗಾಣ ಹಾಕಿ ತಂಡಗಳಿದ್ದು, ತಾ. ೨೨ ರವರೆಗೆ ಪಂದ್ಯಾವಳಿ ಜರುಗಲಿದೆ.