ಬೆAಗಳೂರು, ಮೇ ೧೧: ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬAಧಿಸಿದAತೆ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ರಾಜ್ಯದಲ್ಲಿ ರಾತ್ರಿ ೧೦ ಗಂಟೆಯಿAದ ಬೆಳಗಿನ ಜಾವ ೬ ಗಂಟೆಯವರೆಗೆ ಯಾವುದೇ ದ್ವನಿವರ್ಧಕಗಳು ಹಾಗೂ ಸಾರ್ವಜನಿಕ ಪ್ರಚಾರ ಪರಿಕರಗಳ ಉಪಯೋಗಕ್ಕೆ ಅವಕಾಶವಿಲ್ಲ. ರಾತ್ರಿ ಸಮಯದಲ್ಲಿ ಧ್ವನಿವರ್ಧಕಗಳನ್ನು ಬಳಸಿದ್ದೇ ಆದಲ್ಲಿ ಒಳಾಂಗಣದಲ್ಲಿ ಮಾತ್ರ ಬಳಸಬಹುದು. ಹೊರಗಡೆ ಯಾವುದೇ ರೀತಿಯ ಶಬ್ಧ ಮಾಲಿನ್ಯ ಆಗದಂತೆ ಈ ಸಂದರ್ಭ ಎಚ್ಚರವಹಿಸಬೇಕು. ಉಳಿದ ಸಮಯ, ಅಂದರೆ ಬೆಳಿಗ್ಗೆ ೬ ರಿಂದ ರಾತ್ರಿ ೧೦ ರವರೆಗೆ ಧ್ವನಿವರ್ಧಕಗಳಿಂದ ಉತ್ಪತ್ತಿಯಾಗುವ ಶಬ್ದದ ಪ್ರಮಾಣ ಯಾವ ಸಾಂದ್ರತೆಯಲ್ಲಿರಬೇಕು, ಎಂಬುದರ ಬಗ್ಗೆ, ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು, ಇದನ್ನು ಪಾಲಿಸಬೇಕೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ನ್ಯಾಯಾಲಯದ ತೀರ್ಪಿನಂತೆ ಕಾನೂನು ಜಾರಿಗೆ ಕ್ರಮ ವಹಿಸಲಾಗುವುದಾಗಿ ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಕೈಗಾರಿಕಾ ಪ್ರದೇಶಗಳಲ್ಲಿ ೭೫ ಜಃ(ಂ) ಐeq, ವಾಣಿಜ್ಯ ಪ್ರದೇಶದಲ್ಲಿ ೭೦ ಜಃ(ಂ) ಐeq, ಜನವಸತಿ ಪ್ರದೇಶದಲ್ಲಿ ೫೫ ಜಃ(ಂ) ಐeq ಹಾಗೂ ಸೈಲೆಂಟ್ ಝೋನ್‌ಗಳಲ್ಲಿ ೫೦ ಜಃ(ಂ) ಐeq ನಷ್ಟು ಶಬ್ದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಕಾನೂನು ಜಾರಿಗೆ ಕ್ರಮ ಕೈಗೊಳ್ಳಲಾಗಿದ್ದು, ಇದನ್ನು ಪಾಲಿಸದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಗ ಜ್ಞಾನೇಂದ್ರ ಎಚ್ಚರಿಸಿದರು.

(ಮೊದಲ ಪುಟದಿಂದ)

ಅನುಮತಿ ಅಗತ್ಯ

ಈಗಾಗಲೇ ಧ್ವನಿವರ್ಧಕಗಳನ್ನು ಹಾಗೂ ಸಾರ್ವಜನಿಕ ಪ್ರಚಾರ ಪರಿಕರಗಳನ್ನು ಬಳಸುತ್ತಿರುವವರು ಆದೇಶ ಜಾರಿಯಾದ ೧೫ ದಿನಗಳೊಳಗೆ ಧ್ವನಿವರ್ಧಕಗಳನ್ನು ಬಳಸುವ ಸಂಬAಧ ಅನುಮತಿ ಪಡೆಯಬೇಕು. ಅನುಮತಿ ಪಡೆಯದೆ ಇದ್ದರೆ, ಸ್ವಯಂ ಪ್ರೇರಿತವಾಗಿ ಧ್ವನಿವರ್ಧಕಗಳ ಬಳಕೆ ನಿಲ್ಲಿಸಬೇಕು ಅಥವಾ ಸಂಬAಧಿಸಿದ ಇಲಾಖೆ ಅಧಿಕಾರಿಗಳಿಂದ ಇನ್ನು ೧೫ ದಿನಗಳು ಕಳೆದ ಬಳಿಕ ತೆರವುಗೊಳಿಸಲಾಗುತ್ತದೆ.

ಎಲ್ಲಾ ಪೊಲೀಸ್ ಕಮಿಷನರೆಟ್ ವ್ಯಾಪ್ತಿಗಳಲ್ಲಿ, ಪೊಲೀಸ್ ಸಹಾಯಕ ಆಯುಕ್ತ, ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿAದ ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯಬೇಕು ಹಾಗೂ ಇತರ ಪ್ರದೇಶಗಳಲ್ಲಿ, ಆಯಾ ವ್ಯಾಪ್ತಿಯ ಡಿ.ವೈ.ಎಸ್.ಪಿ ಹಾಗೂ ತಹಶೀಲ್ದಾರರು ಸೇರಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದ ಬಳಿಕವಷ್ಟೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಲಾಗುವುದಾಗಿ ಆದೇಶದಲ್ಲಿ ಉಲ್ಲೇಖವಾಗಿದೆ.

ಧಾರ್ಮಿಕ ಕೇಂದ್ರಗಳಾದ ಚರ್ಚ್, ಮಸೀದಿ, ದೇವಾಲಯಗಳನ್ನು ಒಳಗೊಂಡAತೆ ಯಾವುದೇ ತಾರತಮ್ಯ ಇಲ್ಲದಂತೆ ಕಾನೂನು ಜಾರಿಗೊಳಿಸಲಾಗುವುದೆಂದು ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿದರು.