ಸೋಮವಾರಪೇಟೆ, ಮೇ. ೧೧: ಕಾಫಿ ತೋಟದಲ್ಲಿದ್ದ ಬೀಟೆ ಮರವನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡಿದ ಈರ್ವರು ಆರೋಪಿಗಳನ್ನು ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿದ್ದು, ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಹೊಸತೋಟ ಗರಗಂದೂರು ಬಿ. ತೋಟ ನಿವಾಸಿ ಬಿ.ಎಲ್. ಆದಿತ್ಯ, ಬೇಳೂರು ಬಸವನಳ್ಳಿ ಗ್ರಾಮದ ಶಾಂತ ಕುಮಾರ್ ಬಂಧಿತ ಆರೋಪಿಗಳು. ಅಕ್ರಮವಾಗಿ ಕಡಿದ ಬೀಟೆ ಮರವನ್ನು ಟಿಪ್ಪರ್‌ನಲ್ಲಿ ಸಾಗಾಟ ಮಾಡಲಾಗಿದ್ದು, ಯೋಗ್ಯವಲ್ಲದ ನಾಟಾಗಳನ್ನು ತೋಟದಲ್ಲಿ ಬಿಡಲಾಗಿತ್ತು.
ಐಗೂರು ಗ್ರಾಮದ ದಿ.ಮೋಹನ್ ದಾಸಪ್ಪ ಅವರಿಗೆ ಸೇರಿದ ಗರಗಂದೂರು ಎ. ಎಸ್ಟೇಟ್‌ನಲ್ಲಿ ಭಾರೀ ಗಾತ್ರದ ಬೀಟೆ ಮರವನ್ನು ರಾತ್ರಿ ಕಡಿದ ಮರಗಳ್ಳರ ತಂಡ ನಾಟಾಗಳನ್ನಾಗಿ ಪರಿವರ್ತಿಸಿ ಟಿಪ್ಪರ್‌ನಲ್ಲಿ ಸಾಗಿಸಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ ಸಂದರ್ಭ, ಯೋಗ್ಯವಲ್ಲದ ನಾಟಾಗಳು ದೊರೆತಿವೆ. ಕೂಡಲೆ ಕಾರ್ಯಪ್ರವೃತ್ತ ರಾದ ಅರಣ್ಯ ಅಧಿಕಾರಿಗಳ ತಂಡ, ಈರ್ವರು ಆರೋಪಿಗಳನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ, ಸೋಮವಾರ ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದಾರೆ. ನ್ಯಾಯಾಧೀಶರು ಆರೋಪಿ ಗಳಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
(ಮೊದಲ ಪುಟದಿಂದ) ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಎಚ್.ಪಿ. ಚೇತನ್, ಡಿಆರ್‌ಎಫ್‌ಓ ವೈ.ಕೆ. ಜಗದೀಶ್, ಎನ್.ಬಿ. ಸತೀಶ್‌ಕುಮಾರ್, ಅರಣ್ಯ ರಕ್ಷಕರಾದ ಭರಮಪ್ಪ, ಬಿ.ಜಿ. ಚೇತನ್, ಅರಣ್ಯ ವೀಕ್ಷಕ ವೀರಪ್ಪ, ಚಾಲಕರಾದ ನಂದೀಶ್ ಮತ್ತು ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.