ಮಡಿಕೇರಿ, ಮೇ ೯: ಸ್ವಚ್ಛಂದ ವಾತಾವರಣ, ಹಕ್ಕಿಯ ಚಿಲಿಪಿಲಿ, ತಂಪಾದ ಗಾಳಿ, ಮನಸೆಳೆಯುವ ಕೆರೆ, ಮತ್ತಷ್ಟೂ ಹೊತ್ತು ಇಲ್ಲೇ ಕಾಲ ಕಳೆಯಬೇಕೆಂಬ ಹಂಬಲ.. ಜನರನ್ನು ಸೆಳೆಯಬೇಕಾದ ಎಲ್ಲಾ ಅಂಶಗಳಿದ್ದರು ಇಲ್ಲಿಗೆ ಯಾರು ಬರುತ್ತಿಲ್ಲ.!

ಹೌದು.. ಮಂಜಿನ ನಗರಿ ಮಡಿಕೇರಿಯಲ್ಲಿ ರಾಜಾಸೀಟ್ ಉದ್ಯಾನವನ ಬಳಿಯಲ್ಲಿ ರೂ. ೯೮ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಕೂರ್ಗ್ ವಿಲೇಜ್’ ಕಡೆ ಪ್ರವಾಸಿಗರು ಮುಖ ಮಾಡುತ್ತಿಲ್ಲ. ಜುಲೈ ೧೧, ೨೦೨೧ಕ್ಕೆ ಕೂರ್ಗ್ ವಿಲೇಜ್ ಉದ್ಘಾಟನೆಯಾದರೂ ಕೂಡ ಕೋವಿಡ್ ಪರಿಸ್ಥಿತಿ ಹಿನ್ನೆಲೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಕೆಲವು ದಿನಗಳಿಂದ ಪ್ರವೇಶ ದ್ವಾರ ತೆರೆದಿದೆ. ಆದರೆ, ಪ್ರವಾಸಿಗರು ಮಾತ್ರ ಇತ್ತ ಸುಳಿಯುತ್ತಿಲ್ಲ.

ರಾಜಾಸೀಟ್‌ಗೆ ಆಗಮಿಸುವ ಕೆಲ ಪ್ರವಾಸಿಗರು ಮಾತ್ರ ‘ಕೂರ್ಗ್ ವಿಲೇಜ್’ಗೆ ಭೇಟಿ ನೀಡುತ್ತಿದ್ದಾರೆ. ಸುಂದರ ವಾತಾವರಣದ ಸೊಬಗು ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ. ತೋಟಗಾರಿಕೆ ಇಲಾಖೆಯ ನರ್ಸರಿ ಇದ್ದ ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿ ನಿರ್ಮಿತಿ ಕೇಂದ್ರದ ಮೂಲಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸಲಾಗಿದೆ. ರೂ. ೯೮ ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಪ್ರವಾಸಿ ತಾಣ ರೂಪುಗೊಂಡಿದೆ.

‘ಕೂರ್ಗ್ ವಿಲೇಜ್’ ವಿಶೇಷತೆ

ಕೂರ್ಗ್ ವಿಲೇಜ್ ಸುಂದರ ವಾತಾವರಣದಲ್ಲಿ ಕೂಡಿದೆ. ಜೊತೆಗೆ ಮೂರು ಕಡೆಗಳಲ್ಲಿ ವಿವಿಧ ೧೪ ಶಾಪಿಂಗ್ ಸ್ಟಾಲ್‌ಗಳನ್ನು ನಿರ್ಮಿಸಲಾಗಿದೆ. ೩ ಪ್ರತ್ಯೇಕ ಕಟ್ಟಡಗಳಲ್ಲಿ ಮಳಿಗೆಗಳು ಸಿದ್ಧಗೊಂಡಿವೆ. ವಿವಿಧ ಇಲಾಖೆಗೆ ಸಂಬAಧಿಸಿದ ಉತ್ಪನ್ನಗಳು ಸೇರಿ ನೆರೆಸಂತ್ರಸ್ತರು ತಯಾರಿಸಿದ ಹೋಂ ಮೇಡ್ ಉತ್ಪನ್ನ ಹಾಗೂ ಕೊಡಗಿನ ಜೇನು, ವೈನ್, ಕರಿಮೆಣಸು, ಏಲಕ್ಕಿ, ಕಾಫಿ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.

ರಾಜಾಸೀಟ್‌ನಲ್ಲಿರುವ ಗಿಡಗಳಿಗೆ ಹಾಗೂ ಅಲ್ಲಿನ ಬಳಕೆಗೆ ನೀರು ಪೂರೈಸುವ ಕೆರೆ ಕೂರ್ಗ್ ವಿಲೇಜ್‌ನಲ್ಲಿದೆ. ಇದನ್ನು ಸಹÀ ಅಭಿವೃದ್ಧಿಗೊಳಿಸಿದ್ದು, ಕೆರೆ ಶುಚಿಗೊಳಿಸಿ ಸುತ್ತ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದ್ದು, ಇದು ಪ್ರವಾಸಿಗರ ಆಕರ್ಷಣಿಯ ಕೇಂದ್ರಬಿAದು ಕೂಡ ಆಗಿದೆ.

ಇದರೊಂದಿಗೆ ಪ್ರವಾಸಿಗರಿಗೆ ಆಸನ ವ್ಯವಸ್ಥೆ ಕಲ್ಪಿಸಿದ್ದು, ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಆಕರ್ಷಕ ದೀಪದ ವ್ಯವಸ್ಥೆ ಮಾಡಿದ್ದು, ಸಂಜೆ ವೇಳೆಯಲ್ಲಿ ವಾಯುವಿಹಾರ ಮಾಡಲು ಸೂಕ್ತ ಜಾಗವಾಗಿದೆ. ಅದಲ್ಲದೆ, ಪಾಳು ಬಿದ್ದ ಜಾಗವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಪ್ರವಾಸಿ ತಾಣದಲ್ಲಿ ಬೃಹತ್ ಮರಗಳಿದ್ದು ತಂಪಾದ ಗಾಳಿ ಬೀಸುತ್ತದೆ.

ಖಾಲಿ ಖಾಲಿ

ಒಂದೇ ಸೂರಿನಡಿ ಕೊಡಗಿನ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ೧೫ ಸ್ಟಾಲ್‌ಗಳನ್ನು ನಿರ್ಮಿಸಲಾಗಿದೆ. ಆದರೆ, ಪ್ರವಾಸಿಗರಿಲ್ಲದ ಕಾರಣ ಮೂರು ಸ್ಟಾಲ್‌ಗಳು ಮಾತ್ರ ಕಾರ್ಯಾರಂಭಿಸಿವೆ. ಇದರಲ್ಲಿ ಭಗಂಡೇಶ್ವರ ತೋಟಗಾರಿಕ ಉತ್ಪಾದಕ ಸಂಸ್ಥೆ ಮಾತ್ರ ಅಂಗಡಿಯನ್ನು ತೆರೆದಿದೆ. ಕಾಫಿ ಮಂಡಳಿ, ಮೈತ್ರಿ ಸ್ವಸಹಾಯ ಸಂಘದ ಸ್ಟಾಲ್‌ಗಳು ಬಂದ್ ಆಗಿವೆ.

ವಿವಿಧ ಇಲಾಖೆಗಳಿಗೆ ಸ್ಟಾಲ್‌ಗಳನ್ನು ಬಾಡಿಗೆಗೆ ನೀಡಲಾಗಿದೆ. ಆದರೆ, ಪ್ರವಾಸಿಗರ ಕೊರತೆಯಿಂದ ಇದರಲ್ಲಿ ಒಂದು ಸ್ಟಾಲ್ ಹೊರತುಪಡಿಸಿ ಬೇರೆಲ್ಲವೂ ಬಂದ್ ಆಗಿವೆ.

ತೋಟಗಾರಿಕೆ ಇಲಾಖೆ ಸ್ಟಾಲ್‌ನಲ್ಲಿ ಗಿಡಗಳ ಮಾರಾಟ, ನಗರಸಭೆಯಿಂದ ಉತ್ಪಾದಿಸಲಾದ ತ್ಯಾಜ್ಯ ಗೊಬ್ಬರ ಮಾರಾಟ ಮಳಿಗೆ, ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ಪ್ರವಾಸೋದ್ಯಮದ ಬಗ್ಗೆ ಮಾಹಿತಿ ಹಾಗೂ ಪುರಾತತ್ವ ಇಲಾಖೆಯೊಂದಿಗೆ ಛಾಯಾಚಿತ್ರ ಪ್ರದರ್ಶನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಸ್ತಿçÃಶಕ್ತಿ ಗುಂಪುಗಳು, ಎನ್.ಜಿ.ಓ.ಗಳು ಹಾಗೂ ಇತರ ಸಂಘ ಸಂಸ್ಥೆಗಳು ಉತ್ಪಾದಿಸಿದ ಉತ್ಪನ್ನಗಳ ಮಾರಾಟ, ಐಟಿಡಿಪಿ ಇಲಾಖೆಯಿಂದ ಗಿರಿಜನರು ಉತ್ಪಾದಿಸಿದ ಉತ್ಪನ್ನಗಳ ಮಾರಾಟ, ಮಡಿಕೇರಿ ತಾಲೂಕು ಪಂಚಾಯ್ತಿಯಿAದ ಜಿ.ಪಂ, ತಾ.ಪಂ. ವ್ಯಾಪ್ತಿಯ ರೈತರ ಗುಂಪು, ಒಕ್ಕೂಟ ಉತ್ಪಾದಿಸುವ ಉತ್ಪನ್ನಗಳ ಮಾರಾಟ, ಕೃಷಿ ಇಲಾಖೆ ಸಾವಯವ ಉತ್ಪನ್ನಗಳ ಮಾರಾಟ, ಕಾಫಿ ಮಂಡಳಿಯಿAದ ಕಾಫಿ ಪೌಡರ್ ಮಾರಾಟವನ್ನು ಇಲ್ಲಿ ಮಾಡಲು ಉದ್ದೇಶಿಸಲಾಗಿದೆ.

ಬಂದವರು ಖುಷ್

ದಿನಕ್ಕೆ ಬೆರಳೆಣಿಕೆ ಪ್ರವಾಸಿಗರು ಮಾತ್ರ ಇಲ್ಲಿಗೆ ಆಗಮಿಸುತ್ತಿದ್ದಾರೆ. ಬಂದವರು ಪ್ರಕೃತಿ ಸೌಂದರ್ಯ ಕಂಡು ಖುಷಿ ಅನುಭವಿಸುತ್ತಿದ್ದಾರೆ. ಬಿಸಿಲಿನ ಬೇಗೆಗೆ ತಂಪು ನೀಡುವ ಈ ಸುಂದರ ತಾಣದಲ್ಲಿ ಕುಳಿತು ಕಾಲ ಕಳೆಯುತ್ತಾರೆ. ಕೆಲಹೊತ್ತು ವಾಯುವಿಹಾರ ಮಾಡಿ ‘ಕೂಲ್’ ಆಗುತ್ತಿದ್ದಾರೆ. ಸದ್ಯಕ್ಕೆ ಇಲ್ಲಿಗೆ ಉಚಿತ ಪ್ರವೇಶವಿದೆ.

ಹಲವು ತಾಣಗಳು ಮೂಲಸೌಲಭ್ಯ, ನಿರ್ವಹಣೆ ಇಲ್ಲದೆ ಪ್ರವಾಸಿಗರಿಗೆ ನಿರಾಸೆ ಮೂಡಿಸುತ್ತಿದೆ. ಎಲ್ಲವೂ ಇದ್ದರು ಕೂರ್ಗ್ ವಿಲೇಜ್‌ಗೆ ಯಾರೂ ಬರುತ್ತಿಲ್ಲ. ಇಷ್ಟೆಲ್ಲ ವ್ಯವಸ್ಥೆ ಹೊಂದಿರುವ ತಾಣ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗುತ್ತಿರುವುದಕ್ಕೆ ಪ್ರಚಾರದ ಕೊರತೆಯೂ ಕಾರಣವಾಗಿದೆ. ರಾಜಾಸೀಟ್ ಉದ್ಯಾನವನದಿಂದ ರೇಸ್‌ಕೋರ್ಸ್ ರಸ್ತೆಯಲ್ಲಿ ಸಿಗುವ ಈ ತಾಣ ಎದ್ದು ಕಾಣುತ್ತಿಲ್ಲ. ಕೇವಲ ಬ್ಯಾನರ್ ಮುದ್ರಿತ ನಾಮಫಲಕ ಅಳವಡಿಸಿದ್ದು, ಬೇರೆ ಎಲ್ಲಿಯೂ ಕೂರ್ಗ್ ವಿಲೇಜ್ ಇರುವ ಬಗ್ಗೆ ಮಾಹಿತಿಗಳಿಲ್ಲ, ಫೋಟೋಗಳಿಲ್ಲ. ಇಂಟರ್‌ನೆಟ್‌ನಲ್ಲಿ ಕೂರ್ಗ್ ವಿಲೇಜ್‌ನ ಉಲ್ಲೇಖವಿಲ್ಲ.

ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕಾರ್ಯಪ್ರವೃತ್ತಗೊಂಡು ಕೆಲವು ಕಡೆಗಳಲ್ಲಿ ಮಾಹಿತಿ ಇರುವ ಫಲಕ ಅಳವಡಿಸಿದರೆ ನಿಜಕ್ಕೂ ಅಭಿವೃದ್ಧಿಯಾಗಿರುವ ಪ್ರವಾಸಿ ತಾಣಕ್ಕೆ ಅರ್ಥ ದೊರೆಯುತ್ತದೆ.

- ಹೆಚ್.ಜೆ. ರಾಕೇಶ್