ಪೊನ್ನಂಪೇಟೆ, ಮೇ ೯: ಪೊನ್ನಂಪೇಟೆ ನಾಗರಿಕ ವೇದಿಕೆಯ ನೂತನ ಅಧ್ಯಕ್ಷರಾಗಿ ಚಿಮ್ಮಣಮಾಡ ವಾಸು ಉತ್ತಪ್ಪ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ನಾಗರಿಕ ವೇದಿಕೆಯ ಅಧ್ಯಕ್ಷ ಪಿ.ಬಿ. ಪೂಣಚ್ಚ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಸಿ.ಎಸ್. ವಿಶ್ವನಾಥ್, ಗೌರವ ಕಾರ್ಯದರ್ಶಿಯಾಗಿ ಟಿ.ಎಂ. ಕೃಷ್ಣರಾಜೇಂದ್ರ, ಉಪಗೌರವ ಕಾರ್ಯದರ್ಶಿಯಾಗಿ ಅಡ್ಡಂಡ ಅನಿತಾ ಕಾರ್ಯಪ್ಪ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಿರ್ದೇಶಕರುಗಳಾಗಿ ಪಿ.ಟಿ ದಿನೇಶ್ ಪೂಣಚ್ಚ, ತಾಣಚೀರ ಪೂಣಚ್ಚ, ಎಂ.ಸಿ. ಲಕ್ಷö್ಮಣ್, ಎನ್.ಪಿ. ಉತ್ತಪ್ಪ, ಸಿ.ಸಿ. ಆಶಾ ಪ್ರಕಾಶ್ ಹಾಗೂ ಸಲಹೆಗಾರರಾಗಿ ಎ.ಎ. ಎರ್ಮುಹಾಜಿ, ಎ.ಬಿ ದೇವಯ್ಯ, ಪಿ.ಬಿ. ಪೂಣಚ್ಚ ಅವಿರೋಧವಾಗಿ ಆಯ್ಕೆ ಆದರು. ಸಮಾರಂಭದಲ್ಲಿ ನಿರ್ದೇಶಕ ಮೂಕಳೇರ ಕುಶಾಲಪ್ಪ ನಾಗರಿಕ ವೇದಿಕೆ ನಡೆದು ಬಂದ ದಾರಿ ಹಾಗೂ ನೂತನ ತಾಲೂಕು ರಚನೆಯಲ್ಲಿ ನಾಗರಿಕ ವೇದಿಕೆಯ ಸಫಲತೆ ಹಾಗೂ ಕಾರ್ಯವನ್ನು ವಿವರಿಸಿದರು. ವೇದಿಕೆಯ ಕಾನೂನು ಸಲಹೆಗಾರ ಎಂ.ಪಿ. ಅಪ್ಪಚ್ಚು ಮಾತನಾಡಿ, ನೂತನ ಆಡಳಿತ ಮಂಡಳಿಯ ಕರ್ತವ್ಯ ಹಾಗೂ ಜವಾಬ್ದಾರಿಯ ಬಗ್ಗೆ ವಿವರಿಸಿದರು. ಪಿ.ಬಿ. ಪೂಣಚ್ಚ ಅವರು ನೂತನ ಅಧ್ಯಕ್ಷ ವಾಸು ಉತ್ತಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭ ನಿರ್ದೇಶಕರುಗಳಾದ ವಿಮಲ ಬೋಪಯ್ಯ, ರೇಖಾ ಶ್ರೀಧರ್, ಉಪಾಧ್ಯಕ್ಷರಾದ ಸಿ.ಕೆ. ಸೋಮಯ್ಯ, ಗೌರವ ಕಾರ್ಯದರ್ಶಿ ಚೆಲುವರಾಜ್, ನಿರ್ದೇಶಕರಾದ ಕೆ.ಎಂ. ಗಣಪತಿ, ಐನಂಡ ಕೆ. ಬೋಪಣ್ಣ ಸೇರಿದಂತೆ ದಾನಿಗಳಾದ ಕಾಕಮಡ ಅರ್ಜುನ, ಮಾಣಿಪಂಡ ದೇವಯ್ಯ, ಹಂಗಾಮಿ ಕಾರ್ಯದರ್ಶಿ ಪಿ.ಪಿ. ಪ್ರಭಾಕರ್ ಹಾಜರಿದ್ದರು. ರೇಖಾ ಶ್ರೀಧರ್ ಪ್ರಾರ್ಥಿಸಿ, ನಿರೂಪಿಸಿದರು. ಉಪಾಧ್ಯಕ್ಷ ಸಿ.ಕೆ. ಸೋಮಯ್ಯ ಸ್ವಾಗತಿಸಿ, ವಂದಿಸಿದರು.