ಮಡಿಕೇರಿ, ಮೇ ೯: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡಿನಲ್ಲಿ ನಡೆಯುತ್ತಿರುವ ಕೊಡಗು ಗೌಡ ಕುಟುಂಬಗಳ ಫುಟ್ಬಾಲ್ ಪಂದ್ಯಾಟದಲ್ಲಿ ಚೆರಿಯಮನೆ, ಮುಕ್ಕಾಟಿ (ಬಿ), ಮಂಞAಡ್ರ, ಮಗೇರನ ತಂಡಗಳು ಫ್ರಿಕ್ವಾರ್ಟರ್ ಹಂತ ಪ್ರವೇಶಿಸಿವೆ.
ಚೆಟ್ಟಿಮಾಡ ತಂಡ ಬೈಮನ ವಿರುದ್ಧ ೫-೦ ಗೋಲುಗಳ ಜಯ ಸಾಧಿಸಿತು. ಮುಕ್ಕಾಟಿ ಬಿ ತಂಡ ಕುಟ್ಟನ ವಿರುದ್ಧ ೭ ಗೋಲುಗಳ ಜಯ ಸಾಧಿಸಿತು. ಮಂಞAಡ್ರ ತಂಡ ಕಾಳೇರಮ್ಮನ ವಿರುದ್ಧ ೬-೧ ಗೋಲುಗಳ ಗೆಲುವು ದಾಖಲಿಸಿತು. ಪೋರೆಕುಂಜಿಲನ (೨) ತಂಡ ಪೆನಾಲ್ಟಿ ಶೂಟೌಟ್ ಮೂಲಕ ಉಳುವಾರನ (೨) ವಿರುದ್ಧ ಗೆಲುವು ಸಾಧಿಸಿತು. ಬಿಳಿಯಂಡ್ರ ತಂಡ ಕೋಡಿ ವಿರುದ್ಧ ೩-೨ ಗೋಲುಗಳ ಗೆಲವು ದಾಖಲಿಸಿತು. ಚೆರಿಯಮನೆ ತಂಡ ಪಟ್ಟೆಮನೆ ವಿರುದ್ಧ ೨-೦ ಗೋಲುಗಳಿಂದ ಗೆಲುವು ಸಾಧಿಸಿತು. ಮುಕ್ಕಾಟಿ (ಬಿ-೧) ತಂಡ ಚೆಟ್ಟಿಮಾಡ (೧) ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಗೆಲುವು ಸಾಧಿಸಿತು. ಮಂಞAಡ್ರ ತಂಡ ಪೋರೆಕುಂಜಿಲನ ವಿರುದ್ಧ ೨-೫ ಗೋಲುಗಳ ಗೆಲುವು ದಾಖಲಿಸಿತು. ಮಗೇರನ ತಂಡ ಬಿಳಿಯಂಡ್ರ ವಿರುದ್ಧ ೨-೦ ಗೋಲುಗಳ ಜಯ ಸಾಧಿಸಿತು.