ವೀರಾಜಪೇಟೆ, ಮೇ ೯: ವಿಶ್ವ ಹಿಂದೂ ಪರಿಷದ್, ಭಜರಂಗ ದಳ, ದುರ್ಗಾವಾಹಿನಿ ಮಾತೃಶಕ್ತಿ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ತಾ. ೧೯ ರಂದು ವೀರಾಜಪೇಟೆ ತಾಲೂಕು ಮೈದಾನದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷದ್ ತಾಲೂಕು ಕಾರ್ಯದರ್ಶಿ ಕೇತಿರ ಯತೀಶ್ ಹೇಳಿದರು.
ಸುದ್ದಿಗೋಷ್ಠಿಂiÀಲ್ಲಿ ಮಾತನಾಡಿ, ತಾ. ೧೯ ರಂದು ಬೆಳಿಗ್ಗೆ ೧೦.೧೫ ಗಂಟೆಗೆ ಮಾರಿಗುಡಿಯಲ್ಲಿ ಗೋಪೂಜೆ ನಡೆಸಿದ ನಂತರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಚಂಡೆ ವಾದ್ಯಗಳೊಂದಿಗೆ ಶೋಬಾಯಾತ್ರೆ ನಡೆಯಲಿದೆ. ಅರಕಲಗೋಡು ತಾಲೂಕಿನ ತೋಟಂದಾರ್ಯ ಸಂಸ್ಥಾನ ಮಠ ಬಸವಪಟ್ಟಣದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಲಿ ದ್ದಾರೆ. ವಿಶ್ವ ಹಿಂದೂ ಪರಿಷದ್ನ ಜಿಲ್ಲಾಧ್ಯಕ್ಷ ಜಿ. ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ. ಅಧ್ಯಕ್ಷ ಬಿ.ಎಂ. ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಬಾಲವಾಗ್ಮಿ ಹಾರಿಕಾ ಮಂಜುನಾಥ್, ಬೈತೂರು ದೇವಸ್ಥಾನದ ತಕ್ಕ ಮುಖ್ಯಸ್ಥ ಪುಗ್ಗೆರ ಪೊನ್ನಪ್ಪ ಉಪಸ್ಥಿತರಿರುವರು. ಅಂದಾಜು ೨ ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.
ನಗರ ಅಧ್ಯಕ್ಷ ಬಿ.ಎಂ ಕುಮಾರ್ ಮಾತನಾಡಿ, ತಾ. ೧೮ ರಂದು ಬೈಕ್ ಜಾಥಾ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆಗೆ ಛತ್ರಕೆರೆ ಬಳಿ ಇರುವ ಆಂಜನೇಯ ದೇವಾಲಯದಿಂದ ನಗರದ ಪ್ರಮುಖ ಬೀದಿಗಳಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಿ ತಾಲೂಕು ಮೈದಾನದಲ್ಲಿ ಸಮಾರೋಪಗೊಳ್ಳಲಿದೆ. ಅಂದಾಜು ೧೦೦ ಬೈಕ್ಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ನಗರ ಕಾರ್ಯದರ್ಶಿ ಟಿ.ಪಿ ಗಣೇಶ್. ಉಪ ಕಾರ್ಯದರ್ಶಿ ಎಲ್.ಜಿ ಭಾಸ್ಕರ್, ಮಾತೃಮಂಡಳಿ ತಾಲೂಕು ಕಾರ್ಯ ದರ್ಶಿ ಧನಲಕ್ಷಿö್ಮ ಉಪಸ್ಥಿತರಿದ್ದರು.