ಮಡಿಕೇರಿ, ಮೇ ೯: ಕೊಡಗು ಹವ್ಯಕ ವಲಯದ ಸಭೆ ವಲಯದ ಅಧ್ಯಕ್ಷ ಕೆ.ಎಸ್.ನಾರಾಯಣ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ತಾ. ೬ ರಂದು ಮಡಿಕೇರಿಯಲ್ಲಿನ ವಲಯ ಕಚೇರಿಯಲ್ಲಿ ನಡೆಯಿತು. ಶಂಖನಾದ, ಗುರು-ಗೋ ವಂದನೆಯೊAದಿಗೆ ಸಭೆ ಪ್ರಾರಂಭವಾಯಿತು. ಕಳೆದ ಮಾಸಿಕ ಸಭೆಯ ವರದಿ, ನಿರ್ಧಾರಗಳ ಪರಿಶೀಲನೆ ನಡೆಯಿತು. ವಿಭಾಗವಾರು ವರದಿ, ಗುರಿಕ್ಕಾರರ ವರದಿ, ಮಂಡಲದಿAದ ಬಂದ ಸೂಚನೆಗಳ ವಿವರಗಳನ್ನು ನೀಡಲಾಯಿತು. ಮಂಡಲದಿAದ ಬಂದ ತಿಂಗಳ ಕಾರ್ಯಸೂಚಿ ಅನುಷ್ಠಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಅಧ್ಯಕ್ಷ ನಾರಾಯಣ ಮೂರ್ತಿ ಅವರು ಮಾತನಾಡಿ, ಮೌಲ್ಯಯುತ ವಿದ್ಯಾರ್ಜನೆಯ ಮೂಲಕ ಶ್ರೀ ರಾಮಚಂದ್ರಪುರ ಮಠದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ದೇಶಕ್ಕೆ ಮಾದರಿಯಾಗಿದೆ. ಕೇವಲ ಕಲಿಕೆಗೆ ಮಾತ್ರ ಸೀಮಿತಗೊಳ್ಳದ ಜೀವನ ಮೌಲ್ಯ ತಿಳಿಸುವ ಅಧ್ಯಯನ ಕ್ರಮ ಎಲ್ಲರಿಗೂ ದೊರೆಯುವಂತಾಗ ಬೇಕೆಂಬ ನಿಟ್ಟಿನಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಬಗ್ಗೆ ಜನತೆಗೆ ಮಾಹಿತಿ ನೀಡಬೇಕಾಗಿದ್ದು, ಮನೆಮನೆಗೆ ಈ ವಿಚಾರ ತಿಳಿಸುವ ಕಾರ್ಯಕ್ರಮ ಮುಂದೆ ನಡೆಯಲಿದೆ ಎಂದು ತಿಳಿಸಿದರು. ಕೊನೆಯಲ್ಲಿ ರಾಮತಾರಕ ಮಂತ್ರ, ಶಾಂತಿ ಮಂತ್ರ, ಶಂಖನಾದದೊAದಿಗೆ ಸಭೆ ಮುಕ್ತಾಯವಾಯಿತು. ಸಭೆಯಲ್ಲಿ ಉಪಾಧ್ಯಕ್ಷರು, ಖಜಾಂಜಿ, ವಿವಿಧ ಘಟಕಗಳ ಗುರಿಕ್ಕಾರರು, ಪದಾಧಿಕಾರಿಗಳು ಉಪಸ್ಥಿತರಿದ್ದರು.