ಶ್ರೀಮಂಗಲ, ಮೇ ೯: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ಮೊಹಮ್ಮದ್ ಎಂಬವರ ಮನೆ ಮತ್ತು ಅಂಗಡಿ ಇರುವ ಕಟ್ಟಡದಲ್ಲಿ ರೂ.೨ ಲಕ್ಷ ನಗದು ಸಹಿತ ೧೬ ಗ್ರಾಂ ಚಿನ್ನದ ಅಭರಣವನ್ನು ಭಾನುವಾರ ಸಂಜೆ ದುಷ್ಕರ್ಮಿಗಳು ಕಳವು ಮಾಡಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯ ರಸ್ತೆ ಬದಿಯಲ್ಲಿರುವ ಅಂಗಡಿ ಸಹಿತ ಮನೆಯ ಕಟ್ಟಡಕ್ಕೆ ನುಗ್ಗಿರುವ ದುಷ್ಕರ್ಮಿಗಳು ಬೀರುವನ್ನು ಮುರಿದು ನಗದು ಹಾಗೂ ಚಿನ್ನವನ್ನು ಕಳವು ಮಾಡಿದ್ದಾರೆ.

ಮೊಹಮ್ಮದ್ ಅವರು ಮನೆ ಕಟ್ಟಲು ರೂ. ೨ ಲಕ್ಷ ನಗದು ಇರಿಸಿದ್ದರು, ಇದಲ್ಲದೆ ಮೊಹಮ್ಮದ್ ಅವರ ಪತ್ನಿಯ ೧೬ ಗ್ರಾಂ ಚಿನ್ನದ ಆಭರಣವನ್ನು ಕಳವು ಮಾಡಲಾಗಿದೆ. ಭಾನುವಾರ ಮಧ್ಯಾಹ್ನ ೨ ಗಂಟೆಗೆ ಮನೆ ಮತ್ತು ಅಂಗಡಿಗೆ ಬೀಗ ಹಾಕಿ ಕುಟ್ಟಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.