ಅಧಿಕಾರಿ ಮಹೇಶ್ ಮಾಹಿತಿ
ಕೂಡಿಗೆ, ಮೇ ೭: ಕಳೆದ ಅರು ತಿಂಗಳುಗಳಿAದ ಕೊಡಗು ಜಿಲ್ಲೆಯ ರೇಷ್ಮೆ ಬೆಳೆಯ ಬಿತ್ತನೆ ಗೂಡಿಗೆ ಒಂದು ಕೆ.ಜಿ.ಗೆ ರೂ ೨,೪೦೦ ರಿಂದ ೩೦೦೦ ಉತ್ತಮ ಬೆಲೆ ಇದೆ. ರಾಜ್ಯ ಸರಕಾರ ರೇಷ್ಮೆ ಇಲಾಖೆಯ ಮೂಲಕ ರೈತರಿಗೆ ವಿವಿಧ ಹೊಸ ಯೋಜನೆಯ ಮೂಲಕ ರೇಷ್ಮೆ ಬೆಳೆಗಾರರಿಗೆ ಹೆಚ್ಚು ಸಹಕಾರ ನೀಡುತ್ತಿದೆ. ಸದುಪಯೋಗವನ್ನು ಪಡೆದುಕೊಂಡು ರೇಷ್ಮೆ ಕೃಷಿಯಲ್ಲಿ ಹೆಚ್ಚಿನ ರೈತರು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ರೇಷ್ಮೆ ಅಧೀಕ್ಷಕ ಜಿ. ಮಹೇಶ್ ಹೇಳಿದರು. ಚಿಕ್ಕತ್ತೂರು ಗ್ರಾಮದ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಗಣೇಶ್ ಅವರ ಹಿಪ್ಪನೆರಳೆ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೇಷ್ಮೆ ಗೂಡಿನ ಮಾರುಕಟ್ಟೆ ಬೆಲೆಯು ಹೆಚ್ಚು ಇರುವುದರಿಂದ ರೇಷ್ಮೆ ಕಡ್ಡಿ ನಾಟಿ ಕಾರ್ಯ ಮಾಡಲು ವಿವಿಧ ಗ್ರಾಮದ ರೈತರಲ್ಲಿ ಮನವಿ ಮಾಡಿದರು. ಈಗಾಗಲೇ ಜಿಲ್ಲೆಯಲ್ಲಿ ೩೫ ಕ್ಕೂ ಹೆಚ್ಚು ರೈತರು ತಮ್ಮ ಜಮೀನಿನಲ್ಲಿ ರೇಷ್ಮೆ ಬೇಸಾಯಕ್ಕೆ ತೊಡಗಿಕೊಂಡ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಬಿತ್ತನೆ ಗೂಡು ಬರುತ್ತಿದ್ದು, ಅದೇ ರೀತಿಯಲ್ಲಿ ರೈತರಿಗೆ ಬೆಂಗಳೂರು ಮತ್ತು ಹಾಸನ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಸಿಗುತ್ತಿದೆ. ಇದರಿಂದಾಗಿ ಜಿಲ್ಲೆಯ ರೈತರು ವರ್ಷದಲ್ಲಿ ಮೂರು ಅಥವಾ ನಾಲ್ಕು ಬೆಳೆಯನ್ನು ತೆಗೆಯಬಹುದಾಗಿದ್ದು, ಲಕ್ಷಗಟ್ಟಲೆ ಹಣವನ್ನು ಗಳಿಸಲು ಅನುಕೂಲವಾಗುತ್ತಿದೆ. ಈಗಾಗಲೇ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ವ್ಯಾಪ್ತಿಯಲ್ಲಿ ಅನೇಕ ರೈತರು ರೇಷ್ಮೆ ಬೆಳೆಯ ಬೇಸಾಯದಲ್ಲಿ ತೊಡಗಿದ್ದಾರೆ. ಅದೇ ಮಾದರಿಯಲ್ಲಿ ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕಿನ ರೈತರು ಸಹ ಮುಂದೆ ಬಂದಿದ್ದಾರೆ. ಅವರುಗಳ ಮೂಲಕ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ರೇಷ್ಮೆ ಬೆಳೆಯನ್ನು ಬೆಳೆಯಲು ಇಲಾಖೆಯ ವತಿಯಿಂದ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದು ಅಧಿಕಾರಿ ಮಹೇಶ್ ತಿಳಿಸಿದರು.
ಜಿಲ್ಲೆಯ ರೈತರು ರೇಷ್ಮೆ ಬೆಳೆದ ನಂತರ ರೇಷ್ಮೆ ಗೂಡನ್ನು ಬೆಂಗಳೂರು, ರಾಮನಗರದ ಹಾಸನ ರೇಷ್ಮೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಾಗಿತ್ತು. ಅದರೆ ಕೆಲ ಖರೀದಿದಾರರು ಗ್ರಾಮಗಳಿಗೆ ಬಂದು ಖರೀದಿ ಮಾಡುತ್ತಿದ್ದಾರೆ ಇದರಿಂದಾಗಿ ರೇಷ್ಮೆ ಗೂಡಿಗೆ ಉತ್ತಮವಾದ ಬೆಲೆ ಸಿಗುತ್ತಿದೆ ಎಂದು ರೇಷ್ಮೆ ಬೆಳೆಗಾರರಾದ ಗಣೇಶ್, ಮಂಜಣ್ಣ, ಕುಮಾರ್, ಶಿರಂಗಾಲದ ದಿನೇಶ್, ಧನಪಾಲ್, ಅಳುವಾರದ ಪ್ರಭಾಕರ್ ತಿಳಿಸಿದರು. ಸರಕಾರದ ನಿಯಮನುಸಾರವಾಗಿ ರೇಷ್ಮೆ ಬೆಳೆಯ ಅಭಿವೃದ್ಧಿಗೆ ಪೂರಕವಾಗಿ ರೇಷ್ಮೆ ಬೆಳೆಯುವ ರೈತರಿಗೆ ರೂ. ೩ ಲಕ್ಷ ವೆಚ್ಚದಲ್ಲಿ ರೇಷ್ಮೆ ಮನೆಯನ್ನು ಉಚಿತವಾಗಿ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ೩ ಮಂದಿ ರೈತರಿಗೆ ಯೋಜನೆಯ ಸೌಲಭ್ಯ ನೀಡಲಾಗಿದೆ ಅಲ್ಲದೆ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹಿಪ್ಪನೆರಳೆ ತೋಟಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಎಕರೆವಾರು ಹಣವನ್ನು ನೀಡಲಾಗುತ್ತಿದೆ. ಅರಣ್ಯ ಇಲಾಖೆಯ ವತಿಯಿಂದ ಬೆಳೆಸಲಾದ ಹಿಪ್ಪನೆರಳೆ ಗಿಡಗಳನ್ನು ರೈತರಿಗೆ ಉಚಿತವಾಗಿ ನೀಡುವುದರ ಜೊತೆಗೆ ನಾಟಿ ಹಣವನ್ನು ನೀಡಲಾಗುತ್ತದೆ. ಈ ಸಾಲಿನಲ್ಲಿ ಸರಕಾರವು ವಿವಿಧ ಯೋಜನೆಯ ಮೂಲಕ ರೇಷ್ಮೆ ಬೆಳೆಯ ರೈತರಿಗೆ ನೇರವಾಗಿ ಹಣವನ್ನು ನೀಡುತ್ತದೆ. ಅಲ್ಲದೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿಯು ಸಹ ರೈತರಿಗೆ ವಿವಿಧ ಸಾಲ ಸೌಲಭ್ಯ ಮತ್ತು ವಿಶೇಷ ಅನುದಾನದ ಮೂಲಕ ರೇಷ್ಮೆ ಪರಿಕರಗಳನ್ನು ವಿತರಣೆ ಮಾಡಲಾಗುತ್ತದೆ. ಇದರ ಸದುಪಯೋಗವನ್ನು ರೇಷ್ಮೆ ಬೆಳೆಗಾರರು ಮಾಡಿಕೊಳ್ಳುವಂತೆ ಅಧಿಕಾರಿ ಮಹೇಶ್ ಮನವಿ ಮಾಡಿದರು. ಈಗಾಗಲೇ ಶಿರಂಗಾಲ ಹೆಬ್ಬಾಲೆ ಮತ್ತು ಹುಲುಸೆ, ಅಳುವಾರ, ಸಿದ್ದಲಿಂಗಪುರ, ಸೀಗೆಹೊಸೂರು, ಚಿಕ್ಕತ್ತೂರು ವ್ಯಾಪ್ತಿಯ ಕೆಲ ರೈತರು ರೇಷ್ಮೆ ಬೆಳೆಯನ್ನು ಬೆಳೆಯಲು ಸಿದ್ಧರಾಗಿದ್ದಾರೆ. ಅವರುಗಳಿಗೆ ಹಿಪ್ಪನೆರಳೆ ಕಡ್ಡಿಗಳನ್ನು ನೆಡಲು ಬೇಕಾಗುವ ಸಲಹೆಗಳನ್ನು ನೀಡಲಾಗುತ್ತಿದೆ ಜೊತೆಗೆ ಯೋಜನೆಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.