ಪ್ರತಿ ವರ್ಷವು ಮೇ ತಿಂಗಳ ಎರಡನೇ ಭಾನುವಾರ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷವು ಕೂಡ ತಾಯಂದಿರ ದಿನವನ್ನು ಆಚರಿಸುವ ದಿನ ಬಂದೇ ಬಿಟ್ಟಿದೆ.
ತಾಯಿ ತನ್ನ ಮಕ್ಕಳಿಗಾಗಿ ತನ್ನನ್ನು ತಾನೇ ಮುಡಿಪಾಗಿ ಡುವಳು. ತಾಯಿ ಮಗುವಿನ ಸಂಬAಧ ಯಾವ ರೀತಿ ಹೊಗಳಿ ಹೇಳಿದರೂ ಸಾಕಾಗುವುದಿಲ್ಲ. ತಾಯಿಯು ಎಷ್ಟೇ ಕಷ್ಟ ಬಂದರೂ ಕೂಡ ತನಗಿರುವ ಕಷ್ಟವನ್ನು ತೋರಿಸದೆ ತನ್ನ ಮಕ್ಕಳಿಗೆ ಹೇಳದೆ ನಿಭಾಯಿಸುತ್ತಾಳೆ.
‘ಅಮ್ಮ ಎಂದರೆ ದೇವರು’. ಅಮ್ಮನ ಮಡಿಲಲ್ಲಿ ಮಲಗಿದರೆ ಎಲ್ಲಾ ನೋವುಗಳು ದೂರವಾಗಿ ಸ್ವರ್ಗವನ್ನು ಕರುಣಿಸುವಳು.
ಅಮ್ಮ ತನ್ನ ಮಗುವಿಗೆ ನೋವು, ಕಷ್ಟ ಬಂದಾಗ ಊಟ ನಿದ್ರೆ ಬಿಟ್ಟು ತನ್ನ ಆರೋಗ್ಯದ ಬಗ್ಗೆ ಯೋಚಿಸದೆ ತನ್ನ ಮಗುವಿನ ಆರೋಗ್ಯದ ಬಗ್ಗೆ ಯೋಚಿಸುವಳು.
ಅಮ್ಮನ ಬಗ್ಗೆ ವಿವರಿಸಲು ಪದಗಳೇ ಸಾಲದು. ಮಕ್ಕಳಾದ ನಾವುಗಳು ಅಪ್ಪ-ಅಮ್ಮನ ಋಣ ತೀರಿಸಲು ಅಸಾಧ್ಯ. ನಾವುಗಳು ಎಷ್ಟೇ ದೊಡ್ಡವರಾದರೂ ಅಮ್ಮನಿಗೆ ನಾವು ಮಗುವೇ.
ಅದಕ್ಕೆ ನಾವು ಪ್ರೀತಿಯಿಂದ ಮಾತನಾಡಿ, ಪ್ರೀತಿಯನ್ನು ತೋರಿಸಿ, ಗೌರವಿಸಿ ಮತ್ತೆ ಅಮ್ಮನ ಮಡಿಲಲ್ಲಿ ಮಗುವಾದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ದೊರಕಲು ಸಾಧ್ಯ. ಪ್ರತಿ ದಿನ, ಪ್ರತಿ ಕ್ಷಣ ನನಗೆ ಅಮ್ಮನ ದಿನವೆ. ಎಲ್ಲ ಅಮ್ಮಂದಿರಿಗೂ ಶುಭಾಶಯಗಳು.
- ಕುದುಪಜೆ ದೇವಿಪ್ರಸಾದ್ ದಾಮೋದರ, ತಣ್ಣಿಮಾನಿ.